ಪೋಸ್ಕೊ ಕೇಸ್ – ಯಡಿಯೂರಪ್ಪಗೆ ಬಿಗ್ ರಿಲೀಫ್.
ಕೇಸ್ ದಾಖಲಿಸಿದ ಮಹಿಳೆ ಇದೆ ರೀತಿ ಅನೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಚರ್ಚೆ
ಬೆಂಗಳೂರು – ಸತ್ಯ ಮಿಥ್ಯ ( ಜು -14).
17 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನಡೆದ ಆರೋಪದಡಿಯಲ್ಲಿ ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ ಬಂದನಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ.
ಈ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸಿಐಡಿ ಬಂಧನದ ನೋಟಿಸ್ ನೀಡಿದ್ದರಿಂದ ಜೂನ್ 17ರಂದು ಹಾಜರಾಗುವುದಾಗಿ ಸಿಐಡಿ ಅಧಿಕಾರಿಗಳಿಗೆ ಯಡಿಯೂರಪ್ಪ ತಿಳಿಸಿದ್ದರು.
ಬಂಧನದ ಭೀತಿಯಿಂದ ಹೈಕೋರ್ಟ್ ಮೆಟ್ಟಲಿರಿದ್ದ ಬಿಎಸ್ ವೈ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದರು.ಆರೋಪಿ ಸಾಕ್ಷ ನಾಶ ಮಾಡುತ್ತಾರೆ ಎಂದು ವಾದಿಸಿದರೆ. ಯಡಿಯೂರಪ್ಪ ಪರ ವಕೀಲ ಸಂದೀಪ್ ಪಾಟೀಲ್.ಬಿಎಸ್ ವೈಯವರಿಗೆ ವಯಸ್ಸಾಗಿದೆ ಮತ್ತು ಅನಾರೋಗ್ಯ ಅಲ್ಲದೇ ಜೂ 17 ಕ್ಕೆ ವಿಚಾರಣೆ ಹಾಜರಾಗುತ್ತಾರೆ ಎಂಬ ವಾದ ಮಂಡಿಸಿದರು. ಈ ನಡುವೆ ಕೇಸ್ ದಾಖಲಿಸಿದ ಮಹಿಳೆ ಇದೆ ರೀತಿ ಅನೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಚರ್ಚೆ ನಡೆಯಿತು.ಎರಡು ಕಡೆ ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ಯಡಿಯೂರಪ್ಪನವರು ವಿಚಾರಣೆಗೆ ಹಾಜರಾಗಲು ಸೂಚಿಸಿ ಷರತ್ತು ಬದ್ದ ಜಮೀನು ನೀಡಿದರು.
ಪೋಕ್ಸೋ ಪ್ರಕರಣದಲ್ಲಿ ಬಂಧನದ ಭೀತಿಯಲ್ಲಿದ್ದ ಬಿ ಎಸ್ ವೈಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದ್ದು. ಬಲವಂತದ ಕ್ರಮ ಕೈಗೊಳ್ಳಬೇಡಿ ಎಂದು ತಾಕಿತು ಮಾಡಿತು.
ಈ ಪ್ರಕರಣ ಕುರಿತು ಕೇಂದ್ರ ಸಚಿವ ಕುಮಾರಸ್ವಾಮಿ ಮಾತನಾಡಿ. ಇಲ್ಲಿಯವರೆಗೆ ದೇವೇಗೌಡ ಕುಟುಂಬ ಮುಗಿಸುವ ಪ್ರಯತ್ನ ನಡೆಸುತ್ತಿರುವ ಸರ್ಕಾರ ಈಗ ಯಡಿಯೂರಪ್ಪ ಕುಟುಂಬಕ್ಕೆ ಮುಜುಗರ ಉಂಟು ಮಾಡುತ್ತಿದೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ನಾಶವಾಗಲಿದೆ ಎಂದರು.
ವರದಿ : ಚನ್ನು. ಎಸ್.