
ಗಜೇಂದ್ರಗಡ – ಶಿಕ್ಷಕಿಯ ಭೀಕರ ಹತ್ಯೆ!
ಗಜೇಂದ್ರಗಡ :ಸತ್ಯಮಿಥ್ಯ (ಡಿ-21).
ರೊಟ್ಟಿ ಮಾಡುವ ಕೋಣಗಿಯಿಂದ ತಲೆಗೆ ಹೊಡೆದು ಮುಖ್ಯ ಶಿಕ್ಷಕಿಯನ್ನು ಹತ್ಯೆ ಮಾಡಿರುವ ಘಟನೆ ಗಜೇಂದ್ರಗಡ ಪಟ್ಟಣದ ನವನಗರದಲ್ಲಿ ನಡೆದಿದೆ. ಅನ್ನಪೂರ್ಣ ರಾಠೋಡ್ (55) ಮೃತ ಮುಖ್ಯ ಶಿಕ್ಷಕಿಯಾಗಿದ್ದು, ಗಜೇಂದ್ರಗಡ ತಾಲೂಕಿನ ರೋಣದ ಬಿಇಒ ಕಚೇರಿಯಲ್ಲಿ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಮನೆಯಲ್ಲಿದ್ದ ಮುಖ್ಯ ಶಿಕ್ಷಕಿಯ ತಲೆಗೆ ದುಷ್ಕರ್ಮಿಗಳು ರೊಟ್ಟಿ ಮಾಡುವ ಕಟ್ಟಿಗೆಯ ಕ್ವಾಮಣಗಿಯಿಂದ ಹೊಡೆದು ಭೀಕರ ಕೊಲೆ ಮಾಡಲಾಗಿದ್ದು, ಇದನ್ನು ಕಂಡ ಗಜೇಂದ್ರಗಡ ನಿವಾಸಿಗಳು ಆತಂಕಗೊಂಡಿದ್ದಾರೆ. ಇನ್ನೂ ಸ್ಥಳಕ್ಕೆ ಗಜೇಂದ್ರಗಡ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದು, ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.
ನಗರದಲ್ಲಿನ ಕೆ.ಜಿ.ಎಮ್.ಎಸ್, ಕೊಡಗಾನೂರ, ಲಕ್ಕಲಕಟ್ಟಿ, ಹೀಗೆ ಅನೇಕ ಕಡೆ ಶಿಕ್ಷಕಿಯಾಗಿ ಸೇವೆ ಸಧ್ಯ ಬಿಇಓ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅನ್ನಪೂರ್ಣ ರಾಠೋಡ ತಡರಾತ್ರಿಯೇ ಅಥವಾ ಪ್ರಾಥಃ ಕಾಲದಲ್ಲಿ ಕೊಲೆಯಾಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ ನೆರೆಹೊರೆಯವರು.
ಈ ಘಟನೆ ಕುರಿತಂತೆ ರೋಣ ಸಿ.ಪಿ.ಐ, ನಗರ ಪೋಲಿಸ್ ಠಾಣೆಯ ಪಿ.ಎಸ್.ಐ. ಆಗಮಿಸಿ ತನಿಖೆಯನ್ನು ಆರಂಭಿಸಿದ್ದಾರೆ.
ವರದಿ : ಚನ್ನು. ಎಸ್.