ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಗೆ ಬಿಜೆಪಿ ಖಂಡನೆ.
ಮುಖ್ಯಮಂತ್ರಿ ಭಂಡತನ ಬಿಟ್ಟು ಇಂಧನ ದರ ಏರಿಕೆ ನಿರ್ಧಾರದಿಂದ ಹಿಂದೆ ಸರಿಯಬೇಕು - ವಿಜಯೇಂದ್ರ
.ಬೆಂಗಳೂರು – ಸತ್ಯ ಮಿಥ್ಯ ( ಜು -15)
ಇಂದಿನಿಂದ ಪ್ರತಿ ಲೀಟರ್ ಪೆಟ್ರೋಲ್ ಗೆ 3 ರೂ.ಮತ್ತು ಡೀಸೆಲ್ ಗೆ ರೂ.3.5 ರೂ ಗಳನ್ನು ಏರಿಕೆಯಾಗಿದೆ .ರಾಜ್ಯ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಟಿಸುವ ಮೂಲಕ ವಾಹನ ಸವಾರರಿಗೆ ಮತ್ತು ಟ್ರಾನ್ಸ್ಪೋರ್ಟ್ ಸಂಬಂಧಿಸಿದವರಿಗೆ ಹೊರೆಯಾಗಲಿದೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಕುರಿತು ವಿರೋಧಪಕ್ಷದ ನಾಯಕ ವಿಜಯೇಂದ್ರ ಮಾತನಾಡಿ ಸಿದ್ದರಾಮಯ್ಯನವರು ಭಂಡತನ ನಿರ್ಧಾರದಿಂದ ಹಿಂದೆ ಸರಿಯಬೇಕು. ಪೆಟ್ರೋಲ್ ಡೀಸೆಲ್ ದರ ಏರಿಕೆ ವಾಹನ ಸವಾರರಿಗೆ ಹೊರೆಯಾಗಲಿದೆ. ಬೆಲೆ ಏರಿಕೆ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯದಿದ್ದರೆ ಈ ನಿರ್ಧಾರದ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಪುಂಕಾನು ಪುಂಕವಾಗಿ ವಾಗ್ದಾಳಿ ಮಾಡುತ್ತಿದ್ದ ಸಿದ್ದರಾಮಯ್ಯ ಡೀಸೆಲ್ ಪೆಟ್ರೋಲ್ ಏರಿಕೆ ಮಾಡಿದ್ದನ್ನು ಜನತೆ ಖಂಡಿಸುತ್ತಿದ್ದಾರೆ.
ಡೀಸೆಲ್ ಪೆಟ್ರೋಲ್ ಬೆಲೆ ಏರಿಕೆ ಮಾಡಿರುವುದರಿಂದ ಪೆಟ್ರೋಲ್ ದರ ಸೆಂಚುರಿ (103=00ರೂ )ಬಾರಿಸಿದರೆ ಡೀಸೆಲ್ (ದರ 89=00ರೂ ) ಆಗಲಿದೆ.