
ಬೀದಿ ದನದ ದಾಳಿಗೆ ವೃಧ್ಧ ಬಲಿ:ಜನರಿಂದ ಪ್ರತಿಭಟನೆ – ನಗರಸಭೆಗೆ ಹಿಡಿ ಶಾಪ
ಗದಗ:ಸತ್ಯಮಿಥ್ಯ ( ಜುಲೈ -31)
ಬೀದಿ ದನದ ದಾಳಿಯಿಂದ 70 ವರ್ಷದ ವೃದ್ಧ ಸಾವನ್ನಪ್ಪಿದ ಘಟನೆ ಗದಗ ಬೆಟಗೇರಿ ಅವಳಿ ನಗರದ ಜನರನ್ನು ಬೆಚ್ಚಿ ಬೀಳಿಸಿದೆ. ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ಶಂಕ್ರಪ್ಪ ಹೋಳಿ (70) ಮೃತ ದುರ್ದೈವಿ ಎಂದು ತಿಳಿದು ಬಂದಿದೆ.
ಬುಧವಾರ ಬೆಳಗಿನ ಸಮಯದಲ್ಲಿ ಗದಗದ ಬೆಟಗೇರಿಯ ಹೊಸ ಬನಶಂಕರಿ ಗುಡಿ ಹತ್ತಿರ ನಡೆದ ಘಟನೆಯಿಂದಾಗಿ ರೊಚ್ಚಿಗೆದ್ದ ಜನರು ಬೀದಿಗಳಿದು ಪ್ರತಿಭಟನೆ ನಡೆಸಿದರಲ್ಲದೆ ನಗರಸಭೆಯ ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವೃದ್ಧ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಏಕಾಏಕಿ ದಾಳಿಗೈದ ಬೀದಿ ದನದಿಂದ ವೃದ್ಧನು ಬಿದ್ದನ್ನು ಕಂಡ ಸ್ಥಳೀಯ ಜನರು ಕೂಡಲೇ 108 ಅಂಬುಲೆನ್ಸ್ ಗೆ ಕರೆ ಮಾಡಿದರು. ಆದರೆ ಅಂಬುಲೆನ್ಸ್ ಒಂದೂವರೆ ಘಂಟೆ ಆದರೂ ಸ್ಥಳಕ್ಕೆ ಬಾರದ ಇರುವುದರಿಂದ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ವೃದ್ಧನು ಸಾವನ್ನಪ್ಪುವಂತಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದರು.
ರಸ್ತೆ ತಡೆ ನಡೆಸಿ ಪ್ರತಿಭಟನೆಗಿಳಿದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರಲ್ಲದೆ ನಗರಸಭೆ ಆಡಳಿತಕ್ಕೆ ದಿಕ್ಕಾರ ಕೂಗಿ ಕೂಡಲೇ ಬೀದಿ ದನಗಳನ್ನು ಸ್ಥಳಾಂತರಿಸುವಂತೆ ಆಗ್ರಹಿಸಿ ಬೀದಿ ದನದ ದಾಳಿಗೆ ಬಲಿಯಾದ ವೃಧ್ಧನ ಕುಟುಂಬಕ್ಕೆ ಪರಿಹಾರ ಕೊಡಬೇಕೆಂದು ಮನವಿ ಮಾಡಿದರು.
ವರದಿ: ಮುತ್ತು.