
ಗದಗ : ಪೊಲೀಸರ ಕೈಯಿಂದ ತಪ್ಪಿಸಲೆತ್ನಿಸಿದ ರೌಡಿಶೀಟರ್ ಗೆ ಗುಂಡೇಟು.
ಗದಗ:ಸತ್ಯಮಿಥ್ಯ (ಆಗಸ್ಟ್ -01)
ಸ್ಥಳ ಮಹಜರು ವೇಳೆ ರೌಡಿ ಶೀಟರ್ ಸಂಜಯ್ ಪೊಲೀಸರ ಮೇಲೆ ಕಲ್ಲೆಸೆದು ಪರಾರಿಯಾಗಲು ಯತ್ನಿಸಿದ್ದಾನೆ. ಓಡಲು ಮುಂದಾಗಿದ್ದ ರೌಡಿ ಶೀಟರ್ ಸಂಜಯ್ ಕೊಪ್ಪದ ಮೇಲೆ ಪಿಎಸ್ ಐ ಸಂಗಮೇಶ್ ಶಿವಯೋಗಿ ಫೈರಿಂಗ್ ನಡೆಸಿದ್ದಾರೆ.
ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ಮಾಡಲು ಕರೆದುಕೊಂಡು ಹೋದ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿ ಆಗಲೆತ್ನಿಸಿದ ರೌಡಿಶೀಟರ್ ಗೆ ಗುಂಡಿನ ರುಚಿ ತೋರಿಸಿದ್ದಾರೆ. ಈ ಘಟನೆ ಗದಗ ಜಿಲ್ಲೆಯ ಲಕ್ಕುಂಡಿ – ಕಣಗಿನಹಾಳ ರಸ್ತೆಯಲ್ಲಿ ಇಂದು ಗುರುವಾರ (ಆ.1) ಬೆಳಿಗ್ಗೆ ಘಟನೆ ನಡೆದಿದೆ.
ರೌಡಿ ಶೀಟರ್ ಸಂಜಯ್ ಕೊಪ್ಪದ ಮೇಲೆ ಫೈರಿಂಗ್ ನಡೆಸಲಾಗಿದೆ. ರಾಬರಿ ಕೇಸ್ ಗೆ ಸಂಬಂಧಿಸಿದಂತೆ ಸ್ಥಳ ಮಹಜರಿಗೆ ಪೊಲೀಸರು ಬಂದಿದ್ದರು.
ಘಟನೆ ನಂತರ ಸಂಜಯ್ ನನ್ನು ಬಂಧಿಸಿ ಚಿಕಿತ್ಸೆ ನೀಡಲಾಗುತ್ತಿದೆ
ವರದಿ : ಮುತ್ತು.