ಜಿಲ್ಲಾ ಸುದ್ದಿ

ನಗರಸಭೆ: ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಪರಸ್ಪರ ಆರೋಪ ಪ್ರತ್ಯಾರೋಪ ಅಧಿಕಾರ ಯಾರ ಪಾಲಾಗುತ್ತೇ?

Share News

ನಗರಸಭೆ: ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಪರಸ್ಪರ ಆರೋಪ ಪ್ರತ್ಯಾರೋಪ ಅಧಿಕಾರ ಯಾರ ಪಾಲಾಗುತ್ತೇ?

ಗದಗ:ಸತ್ಯಮಿಥ್ಯ ( ಆಗಸ್ಟ್ -20).

ಗದಗ ಬೆಟಗೇರಿ ನಗರಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಿಲ್ಲೊಂದು ಯಡವಟ್ಟು ಮಾಡ್ತಾನೆ ಇದೆ ಅಭಿವೃದ್ಧಿ ಮಾಡಿ ಸದ್ದು ಮಾಡೋದಕ್ಕಿಂತ ಯಡವಟ್ಟು ಮಾಡಿ ಮುಖಕ್ಕೆ ಮಸಿ ಬಳಿದುಕೊಳ್ತಿದೆ. ನಗರಸಭೆ ಆಡಳಿತದಿಂದ ಗದಗ ಜಿಲ್ಲಾ ಬಿಜೆಪಿ ಸಾಕಷ್ಟು ಮುಜುಗರಕ್ಕೀಡಾಗಿದೆ. ಈಗ ಮತ್ತೊಂದು ಯಡವಟ್ಟು ಮಾಡಿಕೊಂಡಿದೆ. ಪೌರಾಯುಕ್ತರ ನಕಲಿ ಸಹಿ ಮಾಡಿ ನಗರಸಭೆ ನೂರಾರು ಕೋಟಿ ಆಸ್ತಿಯನ್ನು ಲೀಜ್ ನೀಡಿ ಕೋಟ್ಯಾಂತರ ಹಣ ಲೂಟಿ ಮಾಡಿದೆ ಎಂದು ಕಾಂಗ್ರೆಸ್ ದಾಖಲೆಗಳ ಸಮೇತ ಗಂಭೀರ ಆರೋಪ ಮಾಡಿದೆ.

ಆದರೆ ಪೌರಾಯುಕ್ತರ ಸಹಿ ನಕಲಿ ಆಗಿದೆ ಎಂದು ಮಾಜಿ ಅಧ್ಯಕ್ಷೆ ಉಷಾ ದಾಸರ, ಸದಸ್ಯರಾದ ಅನಿಲ್ ಅಬ್ಬಿಗೇರಿ, ಗೂಳಪ್ಪ ಮುಷಿಗೇರಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಿದ್ದಾರೆ. ಇದೇ ವಿಷಯ ಈಗ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಪರಸ್ಪರ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ.

ಗದಗ ಬೆಟಗೇರಿ ನಗರಸಭೆಯ ಎರಡನೇಯ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಆಗಸ್ಟ್ 30ರ ಒಳಗೆ ಮುಗಿಯಬೇಕು. ಈಗಾಲೇ 30 ತಿಂಗಳ ಕಾಲ ಬಿಜೆಪಿ ಆಡಳಿತ ಮಾಡಿದೆ. ಎರಡನೇಯ ಅವಧಿಗೆ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರ ಚುನಾವಣೆ ನಡೆಯಲಿದೆ. ಈ ಬಾರಿ ಶತಾಯಗತಾಯ ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿಯಬೇಕು ಅನ್ನೋ ಪ್ಲಾನ್ ಮಾಡಿದೆಯಂತೆ. ಹೀಗಾಗಿ ನಕಲಿ ಠಾರವು, ಪೊರ್ಜರಿ ಸಹಿ ಹಗರಣ ಬಯಲು ಮಾಡಿದೆ ಎನ್ನಲಾಗಿದೆ. ನಗರಸಭೆಯ ಒಟ್ಟು ಸದಸ್ಯರ ಸಂಖ್ಯೆ 35. ಕಾಂಗ್ರೆಸ್ 17, ಬಿಜೆಪಿ 18 ಸದಸ್ಯರು ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್ ಅಧಿಕಾರ ಹಿಡಿಯಲು ದ್ವೇಷ ರಾಜಕಾರಣ ಮಾಡುತ್ತಿದೆ 30 ತಿಂಗಳ ಕಾಲ ಬಿಜೆಪಿ ಆಡಳಿತ ಮಾಡಿತ್ತು. ಈವಾಗ ಬಿಜೆಪಿ ಸದಸ್ಯರ ಸಂಖ್ಯೆ ಕಡಿಮೆ ಮಾಡಿ, ಕಾಂಗ್ರೆಸ್ ನಗರಸಭೆ ಅಧಿಕಾರಕ್ಕೆ ಏರಲು ಪ್ಲಾನ್ ಮಾಡಿದೆ. ಹೀಗಾಗಿಯೇ ಮಾಜಿ ಅಧ್ಯಕ್ಷೆ ಉಷಾ ದಾಸರ್, ಸದಸ್ಯರಾದ ಅನಿಲ ಅಬ್ಬಿಗೇರಿ, ಹಾಗೂ ಗೂಳಪ್ಪ ಮುಷಗೇರಿ ವಿರುದ್ಧ ಹಿಂದಿನ ಪ್ರಭಾರಿ ಪೌರಾಯುಕ್ತರಿಂದ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಬಿಜೆಪಿಯವರು ಆರೋಪ‌ ಮಾಡಿದ್ದಾರೆ. ಬಿಜೆಪಿಯ 18 ಸದಸ್ಯರ ಪೈಕಿ,‌ ಮೂವರು ಚುನಾವಣೆಗೆ ಬಾರದೆ ಇದ್ರೆ, 15 ಸ್ಥಾನಗಳು ಮಾತ್ರ ಬಿಜೆಪಿಗೆ ಉಳಿಯುತ್ತವೆ. ಆಗ 17 ಸದಸ್ಯರನ್ನು ಹೊಂದಿರೋ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೇ. ಹೀಗಾಗಿ ಕಾಂಗ್ರೆಸ್ ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿಯಲು, ದ್ವೇಷ ರಾಜಕಾರಣ ಮಾಡ್ತಾಯಿದ್ದಾರೆ ಎಂದು ಬಿಜೆಪಿ ಸದಸ್ಯ ಚಂದ್ರು ತಡಸದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಗದಗ ನಗರದ ಹೃದಯಭಾಗದಲ್ಲಿನ 35 ಎಕರೆಯಲ್ಲಿನ, 54 ವಕಾರಸಾಲು ಆಸ್ತಿ ಕಬಳಿಸುವ ದುರುದ್ದೇಶ ಬಿಜೆಪಿಯವರು ಹೊಂದಿದ್ದಾರೆ. ವಕಾರ ಸಾಲಿನ, 54 ಆಸ್ತಿ ಲೀಜ್ ನೀಡಲು ನಕಲಿ ಠರಾವು ಸೃಷ್ಠಿ ಮಾಡಲಾಗಿದೆ. 2024 ಫೆಬ್ರವರಿ 9 ರಂದು ಸಾಮಾನ್ಯ ಸಭೆ ಜರುಗಿದೆ. ಆ ಸಭೆಯಲ್ಲಿ ಠರಾವು ನಂಬರ 378 ಪಾಸಾಗಿದೆ ಅಂತ ನಕಲಿ ದಾಖಲೆ ಸೃಷ್ಠಿ ಮಾಡಿದ್ದಾರೆ. ಅದರಂತೆ ಎಲ್ಲ ಆಸ್ತಿ ಅನುಭೋಗದಾರರಿಗೆ ಕಬ್ಜೆ ನೀಡಲಾಗಿದೆ ಅಂತ ಸುಳ್ಳು ಠರಾವು ಸೃಷ್ಟಿ ಮಾಡಲಾಗಿದೆ.

2024 ಜುಲೈ‌ 22 ರಂದು, ಎಲ್ಲ ಅನುಭೋಗದಾರರಿಗೆ ಕಬ್ಜ್ ನೀಡಿದೆ ಅಂತ ಖೊಟ್ಟಿ ಪತ್ರ ಸೃಷ್ಠಿಸಿ ವಂಚಿಸಲಾಗಿದೆ. ನಕಲಿ ಪತ್ರಕ್ಕೆ ನಗರಸಭೆ ಆಯುಕ್ತರ ನಕಲಿ ಸಹಿ ಮಾಡಲಾಗಿದ್ದು, ಈ ಮೂಲಕ ಸರ್ಕಾರಕ್ಕೆ ಮೋಸ ಮಾಡಲಾಗಿದೆ. ಹೀಗಾಗಿ ಹಿಂದಿನ ಆಯುಕ್ತರಾದ ಪ್ರಶಾಂತ ವರಗಪ್ಪನ್ನವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ‌ಮಾಡಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಸದಸ್ಯ ಎಲ್ ಡಿ ಚಂದಾವರಿ ತಿಳಿಸಿದ್ದಾರೆ. ಆದರೆ ಬಿಜೆಪಿಯವರು ಕಾಂಗ್ರೆಸ್ ನವರ ಆರೋಪವನ್ನು ತಳ್ಳಿ ಹಾಕಿದ್ದಾರೆ. ನಾವು ನಕಲಿ ಠರಾವು ಮಾಡಿಲ್ಲಾ, ಪೌರಾಯುಕ್ತರು ಸಹಿ ಮಾಡಿದ್ದಾರೆ, ಪೌರಾಯುಕ್ತರಿಗೆ ಒತ್ತಡ ತಂದು ಸುಳ್ಳು ಪ್ರಕರಣವನ್ನು ದಾಖಲು ಮಾಡಿಸಿದ್ದಾರೆ ಎಂದು ಬಿಜೆಪಿ ಮುಖಂಡ ಎಂ ಎಂ ಹಿರೇಮಠ ಆರೋಪಿಸಿದ್ದಾರೆ.

ಇನ್ನೂ ಫೆಬ್ರವರಿ ತಿಂಗಳಲ್ಲಿ ನಡೆದ‌ ಪ್ರಕರಣವನ್ನು ಈವಾಗ ಪೌರಾಯುಕ್ತರಿಗೆ ಒತ್ತಡ ತಂದು ದೂರು ದಾಖಲು ಮಾಡಿಸಿದ್ದಾರೆ. ಹೇಗಾದ್ರು ಮಾಡಿ, ನಗರಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಪ್ಲಾನ್ ಮಾಡಿದೆ ಎನ್ನಲಾಗುತ್ತಿದೆ. ಒಟ್ನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ಕಳ್ಳಾಟ ಒಂದೊಂದಾಗಿ ಬಯಲು ಆಗ್ತಾಯಿವೆ. ಇನ್ನೇನು ಚುನಾವಣೆಗೆ ದಿನಗಣನೆ ಆರಂಭವಾಗಿದ್ದು , ಅಧಿಕಾರ ಯಾರ ಪಾಲಾಗುತ್ತೇ ಅಂತಾ ಕಾದು ನೋಡ್ಬೇಕು.

ವರದಿ:ಮುತ್ತು ಗೋಸಲ 


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!