ಕರ್ನಾಟಕ ಸ್ಪೋರ್ಟ್ಸ್ ಆಂಡ್ ಎಜ್ಯೂಕೇಶನ್ ಅಕ್ಯಾಡೆಮಿ ಕೆ.ಎಚ್.ಪಾಟೀಲ ಪುಟ್ಬಾಲ್ ಲೀಗ್ ಸೀಸನ್-2 ಫೈನಲ್
ಗದಗ :ಸತ್ಯಮಿಥ್ಯ ( ಅಗಸ್ಟ್ -26)
ಕೆ.ಎಚ್.ಪಾಟೀಲ ಸ್ಪೋರ್ಟ್ಸ್ ಇವೆಂಟ್ಸ್ ಹಾಗೂ ಕರ್ನಾಟಕ ಸ್ಪೋರ್ಟ್ಸ್ ಆಂಡ್ ಎಜ್ಯೂಕೇಶನ್ ಅಕ್ಯಾಡೆಮಿ ಗದಗ ಇವರ ವತಿಯಿಂದ ನೆಡೆಯುತ್ತಿರುವ ಸನ್ಮಾನ್ಯ ಶ್ರೀ ಡಾ.ಎಚ್. ಕೆ. ಪಾಟೀಲ ಸಚಿವರು ಅಯೋಜಿಸಿರುವ ಪುಟ್ಬಾಲ್ ಪಂದ್ಯಾವಳಿಗಳ ನೇತೃತ್ವವನ್ನು ವಹಿಸಕೊಂಡಿರುವ ಯುವಕರ ಕಣ್ಮಣಿ ಕೃಷ್ಣಗೌಡ ಪಾಟೀಲ ಹಾಗೂ ಸಚೀನ ಪಾಟೀಲ ಇವರ ಉಪಸ್ಥಿತಿಯಲ್ಲಿ ಗದಗ ಬೆಟಗೇರಿ ಅವಳಿ ನಗರದ ಪುಟ್ಬಾಲ್ ಪ್ರೀಯರಿಗೆ ಹಾಗೂ ಪುಟ್ಬಾಲ್ ಆಟಗಾರರಿಗೆ ಪ್ರೋತ್ಸಾಹಿಸುತ್ತಿದ್ದು ಸಾವಿರಾರು ಜನ ವಿಕ್ಷಣೆ ಮಾಡಿದ್ದನ್ನು ನೋಡಿ ಸಚಿವರಾದ ಎಚ್ ಕೆ ಪಾಟೀಲ ಬಹಳ ಸಂತೋಷ ವ್ಯಕ್ತ ಪಡಿಸಿದರು.
ಪೈನಲ್ ಪಂದ್ಯ ಅವೆಂಜರ್ಸ್ ವಿರುದ್ಧ ಕಿಕ್ಕರ್ಸ್ ಪಂದ್ಯಗಳ ನಡುವೆ ನೇರ ಹಣಾಹಣಿ ನಡೆದು ಕಿಕ್ಕರ್ಸ್ ತಂಡ 0-1 ಗೋಲುಗಳಿಂದ ಪಂದ್ಯವನ್ನು ಗೆದ್ದು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು..
ಮೂರನೇ ಪ್ರಶಸ್ತಿಗಾಗಿ ರೆಬೆಲ್ ಹಾಗೂ ಡಿಫೆಂಡರ್ಸ್ ಪಂದ್ಯದಲ್ಲಿ ರೆವೆಲ್ ತಂಡ 0-1 ಗೋಲುಗಳಿಂದ ಗೆದ್ದು ಮೂರನೇ ಸ್ಥಾನದಲ್ಲಿ ಗೆದ್ದುಬಂದಿತು. ಅವೆಂಜರ್ಸ್ ತಂಡ ಸೋತು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿತು.
ಈ ಫೈನಲ್ ಪಂದ್ಯವನ್ನು ಜಯಶಾಲಿಯಾದ ಕಿಕ್ಕರ್ಸ್ ತಂಡಕ್ಕೆ ಗದಗ ಜಿಲ್ಲಾ ಶಾಸಕರು ಮತ್ತು ಸಚಿವರಾದ ಡಾ. ಎಚ್ ಕೆ ಪಾಟೀಲ ಪ್ರಶಸ್ತಿ ಪ್ರಧಾನ ಮಾಡಿದರು.ಹೈಯೆಸ್ಟ್ ಗೋಲ್ ಸ್ಕೋರರ್ ರೆಬೆಲ್ ತಂಡದ ರಾಘು ದೊಡ್ಡಮನಿಯವರಿಗೆ ದೊರೆತರೆ,ಬೆಸ್ಟ್ ಗೋಲ್ ಕಿಕರ್ಸ್ ತಂಡದ ಪ್ರಜ್ವಲ್ ರವರು ತಮ್ಮ ಮೂಡಿಗೆರಿಸಿಕೊಂಡರು. ಹಾಗೂ ಶ್ರೇಷ್ಠ ಆಟಗಾರ ಸುದರ್ಶನ್ ಲೋಕುರ್ ಅವರಿಗೆ ದೊರೆತಿದೆ. ಎಂದು ಕರ್ನಾಟಕ ಸ್ಪೋರ್ಟ್ಸ್ ಅಂಡ್ ಎಜುಕೇಶನ್ ಅಕಾಡೆಮಿಯ ಅಧ್ಯಕ್ಷರಾದ ಹಾಗೂ ಪಂದ್ಯಾವಳಿಗಳ ಆಯೋಜಕರಾದ ಸರ್ಫ್ರಾಜ್ ಶೇಖ ತಿಳಿಸಿದರು.
ಪ್ರಶಸ್ತಿ ಸಮಾರಂಭದಲ್ಲಿ ರೋಣ ಶಾಸಕ ಜಿ. ಎಸ್. ಪಾಟೀಲ್ ಕಾಂಗ್ರೇಸ್ ಹಿರಿಯ ಮುಖಂಡ ವಿ. ಬಿ.ಸೋಮನಕಟ್ಟಿಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಮುತ್ತು.