ಜಿಲ್ಲಾ ಸುದ್ದಿ

ಯಾದಗಿರಿ:ಹುಣಸಗಿ ಗ್ರಾಮ್ ಪಂಚಾಯತ್ ಬ್ರಹ್ಮಾಂಡ ಭ್ರಷ್ಟಾಚಾರ ಅಧ್ಯಕ್ಷರಿಗೆ ಪಿಡಿಓ ಸಾತ್.

Share News

ಯಾದಗಿರಿ:ಹುಣಸಗಿ ಗ್ರಾಮ್ ಪಂಚಾಯತ್ ಬ್ರಹ್ಮಾಂಡ ಭ್ರಷ್ಟಾಚಾರ ಅಧ್ಯಕ್ಷರಿಗೆ ಪಿಡಿಓ ಸಾತ್.

ಹುಣಸಗಿ ತಾಲ್ಲೂಕಿನ ಬೈಲಕುಂಟಿ ಗ್ರಾಮ ಪಂಚಾಯತ್  ಗ್ರಾಮ ಸಭೆ – ಗ್ರಾಮಸ್ಥರಿಂದ ಬೈಹಿಷ್ಕಾರ .

ಹುಣಸಗಿ:ಸತ್ಯಮಿಥ್ಯ (ಸ -06).

ತಾಲ್ಲೂಕಿನ ಸಮೀಪದ ಗ್ರಾಮವಾದ ಬೈಲಕುಂಟಿಯಲ್ಲಿ ನಿನ್ನೆ ಲೆಕ್ಕ ಪರಿಶೋಧನೆ ( ಸೊಷಲ್ ಆಡಿಟ್ ) ಗ್ರಾಮ ಸಭೆಯು ಆಂಜನೆಯ ದೇವಸ್ಥಾನದ ಆವರಣದಲ್ಲಿ ಜರುಗಿತು.2023-24ನೇ ಸಾಲಿನ ನೆರೇಗಾ ಕಾಮಗಾರಿಯ ಲೆಕ್ಕಾ ಪರಿಶೋಧನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಒಂದು ಸಭೆ ಇದಾಗಿತ್ತು.

ಸಭೆಯಲ್ಲಿ ನೆರೇಗಾ ಕಾಮಗಾರಿಯ ಬಗ್ಗೆ ವಿವರಿಸುತ್ತಿದಂತೆ ಜನರ ಆಕ್ರೋಶ ಮುಗಿಲು ಮುಟ್ಟಿತು . ಕಾಮಗಾರಿಯೆ ನಡೆದಿಲ್ಲ ವಿವರಗಳು ವಿವರಿಸಿದಂತೆ ಎಲ್ಲಿ ಯಾರು ಮಾಡಿದರೆ ಸುಳ್ಳು ಧಾಖಲೆ ಯಾಕೆ ಸೃಷ್ಟಿಸಿದ್ದಿರಾ ಎಂದು ಗ್ರಾಮ ಸಭೆಯ ವ್ಯವಸ್ಥಾಪಕ ಸಿದ್ದನಗೌಡರವರಿಗೆ ಜನರು ಕೇಳಿದರು.

ಅದಕ್ಕೆ ಅವರು ನಡೆದಿದ್ರೆ ನಡೆದಿದ್ದೆ ಇಲ್ಲವಾದಲ್ಲಿ ಇಲ್ಲಾ ಎಂದು ಮಾಡುತ್ತೇವೆ ಎಂದರು . ಮತ್ತೆ ಮತ್ತೆ ಸಭೆಯ ವಿವರ ವಿವರಿಸುತ್ತಿರುವದನ್ನು ಕಂಡು ಸ್ವಲ್ಪ ನಿಂತ್ಕೊಳ್ಳಿ ಸ್ವಾಮಿ ನೀವು ಹೇಳಿರುವ ಕಾಮಗಾರಿಯಲ್ಲಿ ಮೋಸಾ ನಡೆದುದೇ ಎಂದು ಆಕ್ರೋಶ ವ್ಯಕ್ತ ಪಡಿಸಿದರು.ಹಾಗೆ ಲೆಕ್ಕ ಪರಿಶೋಧಕರು ನೋಡಲ್ ಆಫಿಸರ್ ಆಗಿರುವ ಶ್ರುತಿ ಸಮಾಜ ಕಲ್ಯಾಣ ಅಧಿಕಾರಿಯವರಿಗೂ ಮಾಹಿತಿ ನೀಡದ್ದೆ ಗ್ರಾಮ ಸಭೆ ನಡಿಸುತ್ತಾರೆ ಸಿದ್ದನಗೌಡ . ಇದೆಂತಃ ವಿಚಿತ್ರಾ ಅನಿಸೂತ್ತಿದೆ ಸರಕಾರದ ನಿಯಮಗಳನ್ನು ಗಾಳಿಗೆ ತುರಿರುವ ಸಿದ್ದನಗೌಡನವರಿಗೆ pdo ಸಾತ್ ನೀಡಿದ್ದಾರೆ.

ಹೀಗಾರದೆ ಅಮಾಯಕರ್. ಕೂಲಿ ಕಾರ್ಮಿಕರ ಜೀವನ ಹೇಗೆ ನೀವೇ ಹೇಳಿ ತಾಲ್ಲೂಕು ಪಂಚಾಯತಿ eo ಸಾಹೇಬರೆ. ಹಾಗೆ ನೇರಗಾದಲ್ಲಿ ಕೆಲಸ ಮಾಡುತ್ತಿದ್ದ ಬಂಜಾರ ಸಮಾಜದ ಜನರನ್ನು ಸ್ವಯಂ ( pdo ) ಸೋಮಶೇಖರ್ ಸಿಂಪಿರವರೇ ಹೋಗಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ನೆರೇಗಾ ಕೆಲಸವನ್ನು ಬಿಡಿಸಿ ಕರೆದು ಕೊಂಡು ಬಂದಿದ್ದಾರೆ ಅಲ್ಲಿನ ಮಹಿಳೆಯರು ವರದಿಗಾರರಿಗೆ ತಿಳಿಸಿದ್ದಾರೆ..

ರಾಜವಾಳ ತಾಂಡದ ನೆರೇಗಾ ಕಾರ್ಮಿಕರನ್ನು ಟ್ಯಾಕ್ಟರಿಯಲ್ಲಿ ಸರಿ ಸುಮಾರು 30 ಜನರನ್ನು ಸ್ವಯಂ pdo ಸೋಮಶೇಖರ್ ಸಿಂಪಿರವರೇ ಕರೆದು ಕೊಂಡು ಬಂದಿದ್ದರವ ಘಟನೆ ಕಂಡು ಬಂದಿತ್ತಿ ಹಾಗೆ ಟ್ಯಾಕ್ಟತಿನಲ್ಲಿ ಅವರ ನೆರೆಗಾದ ಕೆಲಸದ ಸಾಮಾನಿನ ಸಮೇತ ಬಂದಿದ್ದರು.

ಸರಕಾರದ ಕೆಲಸ ದೇವರ ಕೆಲಸ್ ಎಂದು ಹೇಳುತ್ತಾರೆ ಅದ್ರೆ ತಮ್ಮ ತಪ್ಪು ಮುಚ್ಚಲು ಸಿದ್ದನಗೌಡರವರ ಮಾತುಗಳನ್ನು ಕೇಳಿ ನೆರೇಗಾದ ಕೆಲಸ ಮಾಡುತ್ತಿರುವರನ್ನು ಗ್ರಾಮ ಸಭೆಗೆ ಕರೆದಿದ್ದಾರೆ . ಬೈಲಕುಂಟಿ ( pdo ) ಸೋಮಶೇಖರ್ ಸಿಂಪಿರವರೇ ಮನಸೋ ಇಚ್ಛೆಯಿಂದ ಕೆಲಸಗಾರರನ್ನು ಸಭೆಗೆ ಕರೆಯೋದು ಎಷ್ಟರ ಮಟ್ಟಿಗೆ ಸರಿ. ಗ್ರಾಮ ಸಭೆಯ ನೂಡಲ ಆಫಿಸರ್ ಆಗಿ ಸೃತಿ ಮೇಡಂ ಸಮಾಜ ಕಲ್ಯಾಣ ಅಧಿಕಾರಿ ಬರಬೇಕಿತ್ತು ಅದ್ರೆ ಅವರಿದೆ ಗಮನಕ್ಕೆ ಇಲ್ಲದಂತೆ ಸಭೆಯನ್ನು ಸಿದ್ದನಗೌಡ ನಡೆಸುತ್ತಾರೆ ಅಂದರೆ ಸರ್ಕಾರ ನಿಯಮಗಳು ಎಷ್ಟರ ಮಟ್ಟಿಗೆ ಪಾಲಿಸುತ್ತಾರೆ ಇಂದು ತಿಳಿದುಕೊಳ್ಳುವಂತಾಗಿದೆ..

ಹಾಗೆ ಗ್ರಾಮ ಸಭೆಗೆ ಮೇಡಂ ಯಾಕೆ ಬಂದಿಲ್ಲ ಅಂತ ನಮ್ಮ ವರದಿಗಾರರು ಕೇಳಿದರೆ ನಮ್ಮ್ ಗಮನಕ್ಕೆ ಬಂದಿಲ್ಲ ಯಾಕೆ ಬಂದಿಲ್ಲಾ ಅಂತ ಗೊತ್ತಿಲ್ಲಾ ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಅವರ ಅನುಪಸ್ಥಿತಿಯಲ್ಲಿ ಒಬ್ಬ ಅಧ್ಯಕ್ಷರನ್ನು ಗುಂಡಪ್ಪ ಬಂಡೀ ನೇಮಕ ಮಾಡಿ ಗ್ರಾಮ್ ಸಭೆ ಮಾಡುತ್ತಾರೆ ಮತ್ತು ಸಾಮಾಜಿಕ ಪರಿಶೋಧನ ಕಾರ್ಯಕ್ರಮ ವ್ಯವಸ್ಥಾಪಕರು ಹುಣಸಗಿ ತಾಲ್ಲೂಕು ಸಿದ್ದನಗೌಡರವರು ಸಭೆ ನಡೆಸುತ್ತಾರೆ …

ಜನರು ಗ್ರಾಮ ಪಂಚಾಯಲ್ಲಿ ಮಾಡಿರುವ ಕಾಮಗಾರಿ ಯಾವುದು ಸರಿಯಾಗಿ ಮಾಡಿಲ್ಲ ನೀವು ಹೇಗೆ ಸುಳ್ಳು ದಾಖಲೆಯನ್ನು ಸೃಷ್ಟಿಸಿರಾ ಎಂದು ಗ್ರಾಮಸ್ಥರು ಕೇಳುತ್ತಾರೆ ಹಾಗೂ ಗ್ರಾಮ ಸಭೆಯನ್ನು ಬೈಯಾಸ್ಕರ ಮಾಡುತ್ತಾರೆ.. ಮತ್ತು ಜನರು ಸಭೆ ಮುಂಡೂಡಲ್ ಸೂಚಿಸಿದರು ಅಧಿಕಾರಿಗಳು ಒಪ್ಪಲಿಲ್ಲ. ಹಾಗೆ ಮೇಲಧಿಕಾರಿಗೆ ತಿಳಿಸುವದಾಗಿ ಸಾಮಾಜಿಕ ಪರಿಶೋಧನ ಕಾರ್ಯಕ್ರಮ ವ್ಯವಸ್ಥಾಪಕರು ಹುಣಸಗಿ ತಾಲ್ಲೂಕು ಸಿದ್ದನಗೌಡರವರು

ಇದೆ ಸಂಧರ್ಭದಲ್ಲಿ ಯಮನಪ್ಪ ಮಾರಾಳ ಭಾವಿ , ಗುಂಡಪ್ಪ ಬಂದಿ ,ಅದಿವ್ಯಪ್ಪ ಭಂಗಿ, ನಿಜಲಿಂಗಪ್ಪ ಬಂಡೀ , ಡಾ ಯಮನಪ್ಪ , ಬಸವರಾಜ್ ಬಿರಾದಾರ್, ಯಮನಪ್ಪ ಗೌಡ ಪಾಟೀಲ, ಶರಣಬಸವ ಹಣಮ ಸಾಗರ್ , ರಾಮು ರಾಠೋಡ್ ರಾಜವಾಳಿ ತಾಂಡ, ಚಂದ್ರು ರಾಠೋಡ್ . ಹಾಗೂ ಹುಣಸಗಿ ಪೋಲಿಸ್ ಸಿಬ್ಬಂಧಿ ಉಪಸ್ಥಿತರಿದ್ದರು.

ವರದಿ : ಶಿವು ರಾಠೋಡ್.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!