ಜಿಲ್ಲಾ ಸುದ್ದಿ

ಬೆಂಗಳೂರಿನ ಅಂತಾರಾಷ್ಟ್ರೀಯ ಡಿಜಿ ಇಮೇಜ್ ಸಮ್ಮೇಳನಕ್ಕೆ ಜಿಲ್ಲೆಯ ೭ ಜನ ಛಾಯಾ ಚಿತ್ರಗ್ರಾಹಕರು ಆಯ್ಕೆ.

Share News

ಬೆಂಗಳೂರಿನ ಅಂತಾರಾಷ್ಟ್ರೀಯ ಡಿಜಿ ಇಮೇಜ್ ಸಮ್ಮೇಳನಕ್ಕೆ ಜಿಲ್ಲೆಯ ೭ ಜನ ಛಾಯಾ ಚಿತ್ರಗ್ರಾಹಕರು ಆಯ್ಕೆ.

ನರೇಗಲ್ಲ- ಸತ್ಯಮಿಥ್ಯ(ಸೆ.೧೯): ಕರ್ನಾಟಕ ಛಾಯಾಚಿತ್ರಗಾರರ ಸಂಘದ ನೇತೃತ್ವದಲ್ಲಿ ಹತ್ತನೇ ವರ್ಷದ ಡಿಜಿ ಇಮೇಜ್ ೨೦೨೪ರ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಗದಗ ಜಿಲ್ಲೆಯ ಏಳು ಜನ ಛಾಯಾಚಿತ್ರಗಾರರು ಆಯ್ಕೆಯಾಗಿದ್ದಾರೆ ಎಂದು ಗಜೇಂದ್ರಗಡ ತಾಲೂಕಾ ಛಾಯಾಚಿತ್ರಗಾರರ ಸಂಘದ ಉಪಾಧ್ಯಕ್ಷ ಮಲ್ಲಯ್ಯ ಗುಂಡಗೋಪುರಮಠ ತಿಳಿಸಿದ್ದಾರೆ.

ನರೇಗಲ್ಲದಿಂದ ತಮಗೆ, ಗದಗನ ದೀಪಕ ಖೋನಾ, ಹಾತಲಗೇರಿಯ ಬಸವರಾಜ ಹಡಗಲಿ, ಕೊರ್ಲಹಳ್ಳಿ ನಾಗರಾಜ ಅರ್ಕಸಾಲಿ, ನರಗುಂದದ ರಾಮಚಂದ್ರಪ್ಪ ಬಡಿಗೇರ, ಲಕ್ಷ್ಮೇಶ್ವರದ ಶಿವರಾಜ ಗೋಸಾವಿ, ಕೊಂಚಿಗೇರಿಯ ಕಲ್ಲೇಶ ಯಣಿಗಾರ ಅವರಿಗೆ ರಾಜ್ಯಾಧ್ಯಕ್ಷ ನಾಗೇಶ್ ಎಚ್.ಎಸ್. ಪತ್ರ ಬರೆದು ವಿಶೇಷವಾಗಿ ಆಮಂತ್ರಿಸಿದ್ದಾರೆ ಎಂದು ಗುಂಡಗೋಪುರಮಠ ತಿಳಿಸಿದ್ದಾರೆ.

ಈಗ ಆಯ್ಕೆಯಾಗಿರುವ ಎಲ್ಲ ಛಾಯಾಚಿತ್ರಗಾರರೂ ಎರಡು ದಶಕಗಳು ಅಥವಾ ಹೆಚ್ಚಿನ ಅವಧಿಯಿಂದ ಸೇವೆ ಸಲ್ಲಿಸುತ್ತಿರುವುದನ್ನು ಗಮನಿಸಿ ಈ ಆಯ್ಕೆಯನ್ನು ಮಾಡಲಾಗಿದೆ ಎಂದು ಗುಂಡಗೋಪುರಮಠ ಹೇಳಿದರು.

ಈ ಸಮ್ಮೇಳನವು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಸೆ. ೨೦ರಿಂದ ಮೂರು ದಿನಗಳ ಕಾಲ ನಡೆಯುತ್ತಿದ್ದು, ಅಲ್ಲಿ ರಾಜ್ಯದ ಇತರೆ ಭಾಗಗಳಿಂದ ಬರುವ ಛಾಯಾಚಿತ್ರಗಾರರೊಂದಿಗೆ ನಮ್ಮೆಲ್ಲರನ್ನೂ ಸನ್ಮಾನಿಸುವುದಾಗಿ ರಾಜ್ಯಾಧ್ಯಕ್ಷರು ತಿಳಿಸಿದ್ದಾರೆ. ಅದಕ್ಕಾಗಿ ತಾವುಗಳು ನಾಳೆಯ ದಿನ ಬೆಂಗಳೂರಿಗೆ ತೆರಳುತ್ತಿರುವುದಾಗಿ ಜಿಲ್ಲಾಧ್ಯಕ್ಷ ಪವನ್ ಮೆರವಾಡಿ ತಿಳಿಸಿದರು.

ವರದಿ : ಸಂಗಮೇಶ ಮೆಣಸಗಿ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!