35 ವರ್ಷದ ಕನಸು ನನಸು || ನೂತನ ಬಸ ನಿಲ್ದಾಣ ಉದ್ಘಾಟನೆ
ನೂತನ ಬಸ್ ನಿಲ್ದಾಣ ಉದ್ಘಾಟಿಸಿದ ಸಚಿವ ರಾಮಲಿಂಗಾರೆಡ್ಡಿ
ಸಾವಳಗಿ:ಸತ್ಯಮಿಥ್ಯ (ಸೆ -29)
ಸಾರ್ವಜನಿಕರು ಬಸ್ ನಿಲ್ದಾಣದ ಸದುಪಯೋಗ ಪಡೆದುಕೊಳ್ಳಿ, ಹಾಗೂ ಸರ್ಕಾರದಿಂದ ಸಿಗುವ ಸೌಲಭ್ಯಗಳ ಪಡೆದುಕೊಳ್ಳಿ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಭರವಸೆ ನೀಡಿದರು.
ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಶನಿವಾರ ನಡೆದ ನೂತನ ಬಸ್ ನಿಲ್ದಾಣ ಉದ್ಘಾಟನೆ ಆಗಮಿಸಿದ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಬಿಜೆಪಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಎಫ್.ಐ.ಆರ್ ಆಗಿದೆ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿ ತನಿಖೆ ಎದುರಿಸಿ ಎಂದು ಹೇಳುತ್ತಿದ್ದಾರೆ, ನಿರ್ಮಲ ಸೀತಾರಾಮನ್, ಯಡಿಯೂರಪ್ಪ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಎಫ್.ಐ.ಆರ್ ಆಗಿದೆ ಅವರು ರಾಜಿನಾಮೆ ಕೊಟ್ಟಿಲ್ಲಾ. ಯಾರು ಕೊಡದೆ ಇರುವಾಗ ಸಿದ್ದರಾಮಯ್ಯ ಅವರು ಯಾಕೆ ಕೊಡಬೇಕು. ಇವರು ಮಳ್ಳಿಗಳು ಇದ ಹೇಳ್ತಾರಲ್ಲ ಹಾಗೆ ಎಂದು ಬಿಜೆಪಿ ಅವರ ವಿರುದ್ಧ ವ್ಯಂಗ್ಯವಾಡಿದರು.
ಜಮಖಂಡಿ ಶಾಸಕ ಜಗದೀಶ ಗುಡಗುಂಟಿ ಮಾತನಾಡಿ ಜಮಖಂಡಿ ಹಾಗೂ ಸಾವಳಗಿ ಭಾಗಕ್ಕೆ ಬಸ್ ಹಾಗೂ ನಿರ್ವಾಹಕರ ಕೊರತೆ ಇದೆ, ಹಾಗೂ ಜಮಖಂಡಿ-ಸಾವಳಗಿಗೆ ಎಸಿ ಬಸ್, ಪಲ್ಲಕ್ಕಿ ಬಸಗಳು ಅವಶ್ಯಕತೆ ಇದೆ ಎಂದು ಸಚಿವರಲ್ಲಿ ಮನವಿ ಮಾಡಿದರು.
ಬಹು ದಿನಗಳ ಬೇಡಿಕೆ: ನಗರದಲ್ಲಿ ಬಹು ದಿನಗಳ ಬೇಡಿಕೆ ಹಾಗೂ 35 ವರ್ಷಗಳ ಕನಸು ಇಂದು ನನಸಾಗಿದೆ ನಗರದಲ್ಲಿ ನೂತನವಾಗಿ ಬಸ್ ನಿಲ್ದಾಣ ಶನಿವಾರ ಉದ್ಘಾಟನೆಗೊಂಡಿತು.
ಬಸ್ಸಗಳ ಚಾಲನೆ: ಸಾವಳಗಿ- ಬಾಗಲಕೋಟೆ ಹಾಗೂ ಸಾವಳಗಿ-ಧಾರವಾಡ ಎರಡು ಬಸ್ಸುಗಳ ಚಾಲನೆಯನ್ನು ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಬಾಗಲಕೋಟೆ ಉಸ್ತುವಾರಿ ಸಚಿವ ಆರ್. ಬಿ. ತಿಮ್ಮಾಪುರ, ಕಾಗವಾಡ ಶಾಸಕ ರಾಜು ಕಾಗೆ, ಜಮಖಂಡಿ ಮಾಜಿ ಶಾಸಕ ಆನಂದ್ ನ್ಯಾಮಗೌಡ, ಶ್ರೀಶೈಲ ದಳವಾಯಿ, ಸುಶೀಲ್ ಕುಮಾರ್ ಬೆಳಗಲಿ, ಗ್ರಾಮ ಪಂಚಾಯತ ಅಧ್ಯಕ್ಷೆ ಶ್ರೀಮತಿ ಕವಿತಾ ಪಾಟೋಳಿ, ಹಾಗೂ ಕೆ.ಎಸ್.ಆರ್.ಟಿ.ಸಿ ಇಲಾಖೆ ಅಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಸಚಿನ್ ಜಾದವ್