
ಬಸವ ಪುರಾಣ ಮಹಾಮಂಗಲೋತ್ಸವಕ್ಕೆ ಕ್ಷಣಗಣನೆ.
ಗಜೇಂದ್ರಗಡ : ಸತ್ಯಮಿಥ್ಯ (ಡಿ -25).
ನಗರದ ಸರ್ಕಾರಿ ಆಸ್ಪತ್ರೆ ಮುಂದಿನ ಬಯಲು ಜಾಗ ಎಲ್ಲಿ. ಸತತ ಒಂದು ತಿಂಗಳುಗಳ ಕಾಲ ಅದ್ದೂರಿಯಾಗಿ ಜರುಗುತ್ತಿರುವ ಬಸವ ಪುರಾಣ ಕಾರ್ಯಕ್ರಮದ ಮಹಾಮಂಗಲೋತ್ಸವ ನಾಳೆ ಗುರುವಾರ ಅದ್ದೂರಿಯಾಗಿ ಜರುಗಲಿದೆ ಎಂದು ಹಾಲಕೇರಿ ಅನ್ನದಾನೇಶ್ವರ ಸಂಸ್ಥಾನಮಠದ ಪೂಜ್ಯ ಶ್ರೀಮನ್ ನಿರಂಜನ ಜಗದ್ಗುರು ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ನುಡಿದರು.

ಪಟ್ಟಣದ ಶ್ರೀ ಅನ್ನದಾನೇಶ್ವರ ಐಟಿಐ ಕಾಲೇಜಿನಲ್ಲಿ ಮಂಗಳವಾರ ಜರುಗಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ. 25ನೇ ನವೆಂಬರ್ 2024 ರಿಂದ 2024 ಡಿಸೆಂಬರ್ 26ರ ವರೆಗೆ ಬಸವ ಪುರಾಣ ಕಾರ್ಯಕ್ರಮ ಅತ್ಯಂತ ವೈಭವದಿಂದ ಜರುಗಿದ್ದು. ಗಜೇಂದ್ರಗಡ ಸೇರಿದಂತೆ ಸುತ್ತಲಿನ ಗ್ರಾಮದ ಜನತೆ ಮತ್ತು ನಾಡಿನ ನಾನಾ ಭಾಗದಿಂದ ಕಾರ್ಯಕ್ರಮಕ್ಕೆ ತನು ಮನ ಧನದೊಂದಿಗೆ ಪ್ರೋತ್ಸಾಹ ನೀಡಿದ್ದಾರೆ.

ನಾಳೆ ಡಿಸೇಂಬರ್ 26 ಗುರುವಾರ ಮದ್ಯಾಹ್ನ 2 ಗಂಟೆಗೆ ಆನೆಯ ಮೇಲೆ ಅಂಬಾರಿಯನ್ನಿರಿಸಿ ಅದರಲ್ಲಿ ಅದರಲ್ಲಿ ಬಸವಪುರಾಣ ಮಹಾಕಾವ್ಯ ಪ್ರತಿಷ್ಠಾಪಿಸಿ. 3 ಸಾವಿರಕ್ಕಿಂತಲೂ ಹೆಚ್ಚಿಗೆ ಮಹಿಳೆಯರ ಮಸ್ತಕದ ಮೇಲೆ ವಚನ ಗ್ರಂಥ ಹೊತ್ತು ಸಕಲ ವಾದ್ಯಗಳೊಂದಿಗೆ ಮೆರವಣಿಗೆ ಜರುಗಿಸಲಾಗುವದು ಎಂದು ಹೇಳಿದರು.
ಬಸವ ಪುರಾಣ ಮಹಾಮಂಗಲೋತ್ಸವ ಜರಾಗುವ ಮಾರ್ಗಗಳು :ಮೈಸೂರು ಮಠದಿಂದ ಪ್ರಾರಂಭವಾಗುವ ಮಹಾಮಂಗಲೋತ್ಸವ ಬಸವೇಶ್ವರ ಸರ್ಕಲ್- ಬಜರಂಗದಳ ಸರ್ಕಲ್ – ಕೊಳ್ಳಿಯವರ ಕ್ರಾಸ್ – ಜಗದಂಬಾ ದೇವಸ್ಥಾನ ಮುಂದಿನ ರಸ್ತೆ ಮೂಲಕ -ಕಟ್ಟಿ ಬಸವೇಶ್ವರ ದೇವಸ್ಥಾನ ಮೂಲಕ – ಹಿರೇಬಜಾರ ವಿರುಪಾಕ್ಷಿಶ್ವರ ದೇವಸ್ಥಾನ ಮಾರ್ಗವಾಗಿ -ದುರ್ಗಾಸರ್ಕಲ್ -ಕಾಲಕಾಲೇಶ್ವರ ವೃತ್ತದ ಮೂಲಕ ಬಸವಪುರಾಣ ವೇದಿಕೆ ತಲುಪಲಿದೆ.
ಬಸವಪುರಾಣ ಮಹಾಮಂಗಲೋತ್ಸವ ಮೆರವಣಿಗೆಗೆ ಮಾಜಿ ಸಂಸದ ಆರ್. ಎಸ್. ಪಾಟೀಲ ಚಾಲನೆ ನೀಡಲಿದ್ದಾರೆ.
ಬಸವ ಪುರಾಣ ಮಹಾಮಂಗಲೋತ್ಸವ.
ಕಾರ್ಯಕ್ರಮದ ದಿವ್ಯ ಸಾನಿಧ್ಯ.
* ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಡಾ. ಗುರುಸಿದ್ಧ ರಾಜಯೋಗಿಂದ್ರ ಮಹಾಸ್ವಾಮಿಗಳು ಮೂರು ಸಾವಿರ ಮಠ ಹುಬ್ಬಳ್ಳಿ ಹಾಗೂ ಅಧ್ಯಕ್ಷರು ಶ್ರೀ ಶಿವಯೋಗ ಮಂದಿರ ಸಂಸ್ಥೆ.
* ಪೂಜ್ಯ ಶ್ರೀ ಮನ್ ನಿರಂಜನ ಜಗದ್ಗುರು ವಿಜಯಮಹಾಂತ ಮಹಾಸ್ವಾಮಿಗಳು ಮೈಸೂರು ಮಠ-ಕುದುರೆಮೋತಿ ವಹಿಸಿಕೊಳ್ಳಲಿದ್ದಾರೆ.
ದಿವ್ಯ ನೇತೃತ್ವವನ್ನು.
* ತ್ರಿಕಾಲ ಲಿಂಗಪೂಜಾನಿಷ್ಠರಾದ ಪೂಜ್ಯಶ್ರೀ ಮ. ನಿ. ಪ್ರ ಸಿದ್ದಲಿಂಗ ಮಹಾಸ್ವಾಮಿಗಳು ಶ್ರೀ ಸುವರ್ಣಗಿರಿ ವಿರಕ್ತಮಠ ವಳಬಳ್ಳಾರಿ ನದಿಚಾಗಿ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು.
* ಪೂಜ್ಯಶ್ರೀ ಮ. ನಿ. ಪ್ರ. ಸದಾಶಿವ ಮಹಾಸ್ವಾಮಿಗಳು. ಶ್ರೀ ಹುಕ್ಕೇರಿ ಮಠ ಹಾವೇರಿ ಹಾಗೂ ಉಪಾಧ್ಯಕ್ಷರು ಶ್ರೀ ಶಿವಯೋಗಮಂದಿರ ಸಂಸ್ಥೆ.
ಸಮ್ಮುಖ :
* ಪೂಜ್ಯಶ್ರೀ ಮ. ನಿ. ಪ್ರ. ಪಂಚಮ ಸಿದ್ದಲಿಂಗ ಮಹಾಸ್ವಾಮಿಗಳು ಶ್ರೀ ಪಶ್ಚಿಮಾದ್ರಿ ಸಂಸ್ಥಾನ ವಿರಕ್ತಮಠ ನೇರಡಗುಂಬ (ತೆಲಂಗಾಣ).
* ಪೂಜ್ಯಶ್ರೀ ಷ.ಬ್ರ. ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು. ಶ್ರೀ ಮಹಾಂತೇಶ್ವರ ಹಿರೇಮಠ ಕರೇಗುಡ್ಡ.
* ಪೂಜ್ಯಶ್ರೀ ಷ .ಬ್ರ. ಬಸವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಧರ ಮುರಡಿ ಹಿರೇಮಠ ಯಲಬುರ್ಗಾ.
* ಪೂಜ್ಯಶ್ರೀ ಮ. ನಿ. ಪ್ರ. ಬಸವಲಿಂಗ ಮಹಾಸ್ವಾಮಿಗಳು ಶ್ರೀ ಸುವರ್ಣಗಿರಿ ವಿರಕ್ತಮಠ ವಳಬಳ್ಳಾರಿ.
* ಪೂಜ್ಯಶ್ರೀ ಮ. ನಿ. ಪ್ರ. ಅಭಿನವ ಚೆನ್ನಬಸವ ಮಹಾಸ್ವಾಮಿಗಳು ಶಾಖಾ ಶಿವಯೋಗಮಂದಿರ- ನಿಡಗುಂದಿ ಕೊಪ್ಪ.
* ಪೂಜ್ಯಶ್ರೀ ಮ. ನಿ. ಪ್ರ. ಶಿವಲಿಂಗ ಮಹಾಸ್ವಾಮಿಗಳು ಶ್ರೀ ಶಿವಲಿಂಗೇಶ್ವರ ಸಂಸ್ಥಾನ ವಿರಕ್ತಮಠ ಖೇಳಗಿ.
* ಪೂಜ್ಯಶ್ರೀ ಷ. ಬ್ರ. ಗುರುಸಿದ್ಧ ಶಿವಾಚಾರ್ಯ ಮಹಾಸ್ವಾಮಿಗಳು ಜಿಗೇರಿ.
* ಪೂಜ್ಯಶ್ರೀ ಷ. ಬ್ರ. ಕಾಡಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮರಡಿಮಠ ಗುಳೇದಗುಡ್ಡ.
* ಪೂಜ್ಯಶ್ರೀ ಮ. ನಿ. ಪ್ರ. ಮಹಾದೇವ ಮಹಾಸ್ವಾಮಿಗಳು ಶ್ರೀ ಅನ್ನದಾನೇಶ್ವರ ಮಠ ಕುಕನೂರು.
* ಪೂಜ್ಯಶ್ರೀ ಚಂದ್ರಶೇಖರ ದೇವರು ಶ್ರೀ ಕೆಂಪಿನಸ್ವಾಮಿ ಮಠ ಹೊಸಪೇಟೆ.
ಗೌರವಾನ್ವಿತ ಮುಖ್ಯ ಅತಿಥಿಗಳಾಗಿ.
* ರೋಣ ಮತಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಜಿ.ಎಸ್. ಪಾಟೀಲ್.
* ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಕಳಕಪ್ಪ ಜಿ ಬಂಡಿ.
* ವಿಧಾನ ಪರಿಷತ್ ಸದಸ್ಯರಾದ ಸನ್ಮಾನ್ಯ ಶ್ರೀ ಎಸ್.ವಿ. ಸಂಕನೂರ.
* ಹಗರಿಬೊಮ್ಮನಹಳ್ಳಿ ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ನೇಮಿರಾಜ ನಾಯಕ್ ಆಗಮಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ವಿಜಯಪುರ ಜಿಲ್ಲಾಧಿಕಾರಿಗಳಾದ ಸನ್ಮಾನ್ಯ ಶ್ರೀ ಎಂ.ಎಸ್. ದಿವಾಕರ್ ಭಾಗವಹಿಸಲಿದ್ದಾರೆ.
ಅತಿಥಿಗಳಾಗಿ ಗಜೇಂದ್ರಗಡ ಪುರಸಭೆಯ ಅಧ್ಯಕ್ಷರಾದ ಶ್ರೀ ಸುಭಾಷ್ ಮ್ಯಾಗೇರಿ, ವೀರಶೈವ ಲಿಂಗಾಯತ ಸಮಾಜ ಗಜೇಂದ್ರಗಡ ಅಧ್ಯಕ್ಷರಾದ ಶ್ರೀ ಸಿದ್ದಣ್ಣ.ಜಿ. ಬಂಡಿ, ಗಜೇಂದ್ರಗಡ ಪುರಸಭೆಯ ಉಪಾಧ್ಯಕ್ಷರಾದ ಶ್ರೀಮತಿ ಸವಿತಾ.ಶ್ರೀಧರ್. ಬಿದರಳ್ಳಿ, ಗಜೇಂದ್ರಗಡ ಪುರಸಭೆಯ ಸ್ಥಾಯಿ ಸಮಿತಿ ಛೇರ್ಮನ್ನರಾದ ಶ್ರೀ ಮುದಿಯಪ್ಪ ಮುಧೋಳ್. ಗಜೇಂದ್ರಗಡ ಸರ್ವ ಸಮಾಜದ ಅಧ್ಯಕ್ಷರಾದಿಯಾಗಿ ಪುರಸಭೆಯ ಸರ್ವ ಸದಸ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಬಸವ ಮಹಾಮಂಗಲೋತ್ಸವದ ವಿಶೇಷತೆಗಳು.
* 25 ಸಾವಿರಕ್ಕಿಂತಲೂ ಹೆಚ್ಚಿಗೆ ಜನ ಸೇರುವ ಸಾಧ್ಯತೆ.
* ಮೂರುಸಾವಿರ ಮಹಿಳೆಯರ ಮಸ್ತಕದ ಮೇಲೆ ವಚನ ಗ್ರಂಥ ಮೆರವಣಿಗೆ.
* ಆನೆಯಮೇಲೆ ಅಂಬಾರಿ ಅಂಬಾರಿಯೊಳಗೆ ಬಸವಪುರಾಣ ಮಹಾಕಾವ್ಯ ಪ್ರತಿಷ್ಠಾಪನೆ.
* ಮಂಡ್ಯ ಜಿಲ್ಲೆಯ ನಂದೀಕೋಲು ತಂಡ ಆಗಮನ.
* ಸುತ್ತಮುತ್ತಲಿನ ಗ್ರಾಮದಿಂದ ಗರಿಷ್ಠ ಪ್ರಮಾಣದಲ್ಲಿ ಸ್ಥಳೀಯ ವಾದ್ಯಗಳ ಆಗಮನ.
* ನಾಡಿನ ನಾನಾ ಭಾಗಗಳಿಂದ ಪರಮಪೂಜ್ಯರ ಆಗಮನ.
* ಗಜೇಂದ್ರಗಡದ ಸರ್ವಧರ್ಮದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಪ್ರತಿಮನೆಯಲ್ಲೂ ಹಬ್ಬದ ವಾತಾವರಣ.
* ನಾನಾ ತರಹದ ಭೋಜನ ವ್ಯವಸ್ಥೆ.
* ಇನ್ನೂ ಹತ್ತುಹಲವು ಕುತೂಹಲಕ್ಕೆ ನಾಳೆ ಗಜೇಂದ್ರಗಡ ನಗರ ಸಾಕ್ಷಿಯಾಗಲಿದೆ.
ಪತ್ರಿಕಾಗೋಷ್ಠಿಯಲ್ಲಿ ಸಿದ್ದಪ್ಪ ಬಂಡಿ, ಪ್ರಭಣ್ಣ ಚವಡಿ, ಎ. ಪಿ. ಗಾಣಿಗೇರ, ವಸಂತರಾವ್ ಗಾರಗಿ,ಪ್ರಭುರಾಜ ಹಿರೇಮಠ, ಎಚ್. ಎಸ್. ಸೋಂಪುರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಚನ್ನು. ಎಸ್.