
ಕುಡಿಯುವ ನೀರು ಪೊರೈಕೆ ಪೈಪ್ ಒಡೆದು ರೈತರ ಬೆಳೆ ನಾಶ – ಪರಿಹಾರಕ್ಕೆ ಆಗ್ರಹ.
ಗಜೇಂದ್ರಗಡ : ಸತ್ಯಮಿಥ್ಯ (ಜ -27)
ರೋಣ ಪಟ್ಟಣಕ್ಕೆ ಸಮೀಪ ಇರುವ ಜಿಗಳೂರು ಕೆರೆಯಿಂದ ಗಜೇಂದ್ರಗಡ ನಗರಕ್ಕೆ ಪೈಪ್ ಲೈನ್ ಮೂಲಕ ಕುಡಿಯುವ ನೀರು ಪೊರೈಕೆ ಮಾಡಲಾಗುತ್ತಿದೆ.
ನಾಲ್ಕು ದಿನಗಳ ಹಿಂದೆ ದಿಂಡೂರ ಕ್ರಾಸ್ ಬಳಿ ಈ ಪೈಪ್ ಲೈನ್ ಒಡೆದು ಹೋಗಿದೆ. ಒಡೆದ ಪೈಪ್ ನಿಂದ ಹೊರಬರುವ ನೀರು ರೈತರ ಹೊಲಕ್ಕೆ ಹರಿದಿದ್ದರಿಂದ ಹೊಲದಲ್ಲಿ ಬಂದ ಪಸಲು ಹಾಳಾಗಿಹೋಗಿದೆ.
ಈ ಕುರಿತು ಮಾತನಾಡಿದ ರೈತ ಮಲ್ಲಿಕಾರ್ಜುನ ಸಂಗಳದ. ನಮ್ಮ ಹೊಲದಲ್ಲಿ ಜಿಗಳೂರು ಕೆರೆಯಿಂದ ಗಜೇಂದ್ರಗಡ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಪೈಪ್ ಲೈನ್ ಹಾದು ಹೋಗಿದೆ.ಈ ಪೈಪ್ ಲೈನ್ ನಾಲ್ಕು ತಿಂಗಳುಗಳ ಹಿಂದೆನೇ ಲೀಕೇಜ್ ಆಗುತ್ತಿತ್ತು. ಈ ಕುರಿತು ಗಜೇಂದ್ರಗಡ ಪುರಸಭೆ ಮುಖ್ಯಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಅಧಿಕಾರಿಗಳು ನೋಡುತ್ತೇವೆ ಮಾಡುತ್ತೇವೆ ಎನ್ನುವ ಉತ್ತರ ನೀಡಿದರೆ ವಿನಃ ಸಮಸ್ಯೆ ಪರಿಹಾರ ಮಾಡಲಿಲ್ಲ. ಆದರಿಗ ಅದೇ ಚಿಕ್ಕ ಲೀಕೇಜ್ ಇಂದು ದೊಡ್ಡ ಹಳ್ಳದಂತೆ ನೀರು ಹರಿಯುತ್ತಿದೆ. ಇದರಿಂದ ಹೊಲದಲ್ಲಿನ ಗಿಡಗಳು ನಾಶವಾಗಿವೆ. ಕೈಗೆ ಬಂದ ಪಸಲು ಬಾಯಿಗೆ ಬರದ ಹಾಗಾಗಿದೆ ಆದ್ದರಿಂದ ಸಂಬಂಧಪಟ್ಟ ಗಜೇಂದ್ರಗಡ ಪುರಸಭೆ ಮುಖ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ನೀಡಬೇಕು ಎಂದರು.
ರೈತ ಮಲ್ಲಿಕಾರ್ಜುನ ಸಂಗಳದ ಸಮಸ್ಯೆಯ ಬಗ್ಗೆ ನಾಲ್ಕು ತಿಂಗಳ ಹಿಂದೆಯೇ ಗಜೇಂದ್ರಗಡ ಮುಖ್ಯಾಧಿಕಾರಿಯವರ ಗಮನಕ್ಕೆ ತಂದಿದ್ದು ನಿಜವಾದರೆ. ಈ ಅಧಿಕಾರಿಯ ನಿರ್ಲಕ್ಷದಿಂದ ಅಂದಿನ ಚಿಕ್ಕ ಸಮಸ್ಯೆಗೆ ಇಂದು ದೊಡ್ಡ ಪ್ರಮಾಣದ ಹಣ ಖರ್ಚು ಮಾಡಿ ಪರಿಹಾರ ಮಾಡುವ ಪರಿಸ್ಥಿತಿ ಬಂದಿದೆ. ಅಲ್ಲದೇ ಬೆಳೆ ಹಾನಿಯಿಂದ ತೊಂದರೆಗೆ ಒಳಗಾದ ರೈತನಿಗೆ ಪರಿಹಾರ ನೀಡಬೇಕು. ಇದಕ್ಕೆಲ್ಲ ಜನಸಾಮಾನ್ಯನ ತೆರಿಗೆ ಹಣ ವ್ಯಯವಾಗುತ್ತಿದೆ. ತೆರಿಗೆಯ ಹಣ ಸದುಪಯೋಗಗೊಂಡರೆ ಉತ್ತಮ ಆದರೆ ಸರ್ಕಾರಿ ಅಧಿಕಾರಿಗಳ ನಿರ್ಲಕ್ಷದಿಂದ ಈ ರೀತಿಯಾದರೆ ಇದಕ್ಕೆಲ್ಲ ಯಾರು ಹೊಣೆ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
ವರದಿ : ಸುರೇಶ ಭಂಡಾರಿ.