ಗಜೇಂದ್ರಗಡ: ಚು.ಸಾ.ಪ – ನೂತನ ಪದಾಧಿಕಾರಿಗಳ ಪದಗ್ರಹಣ.
ಚುಟುಕು ಸಾಹಿತ್ಯ ಪರಿಷತ್ ನಿಂತ ನೀರಾಗಬಾರದು-ಸೋಮನಕಟ್ಟಿಮಠ.

ಗಜೇಂದ್ರಗಡ: ಚು.ಸಾ.ಪ – ನೂತನ ಪದಾಧಿಕಾರಿಗಳ ಪದಗ್ರಹಣ.

ಚುಟುಕು ಸಾಹಿತ್ಯ ಪರಿಷತ್ ನಿಂತ ನೀರಾಗಬಾರದು-ಸೋಮನಕಟ್ಟಿಮಠ
ಗಜೇಂದ್ರಗಡ :ಸತ್ಯಮಿಥ್ಯ (ಜೂ -16).
ಗಜೇಂದ್ರಗಡ ತಾಲೂಕಾ ಚುಟುಕು ಸಾಹಿತ್ಯ ಪರಿಷತ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಿನ್ನೆ ಸಾಯಂಕಾಲ 05 ಗಂಟೆಗೆ ನಿಡಗುಂದಿ ಗ್ರಾಮದ ಭೀಮಾಂಭಿಕಾ ದೇವಸ್ಥಾನದಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ವಿ. ಬಿ. ಸೋಮನಕಟ್ಟಿ ಮುಖ್ಯಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತ. ಚುಟುಕು ಸಾಹಿತ್ಯ ಪರಿಷತ್ ನಿಂತ ನೀರಾಗಬಾರದು. ಕನ್ನಡ ನೆಲ -ಜಲ ಭಾಷಾ ಬೆಳವಣಿಗೆಯ ಜರಿಯಂತೆ ಎಂದು ಬತ್ತದ ಹಾಗೆ ನಿರಂತರವಾಗಿ ಹರಿಯುತ್ತಿರಬೇಕು ಎಂದರು.

ಹಿರಿಯ ಸಾಹಿತಿ ದಡೇಸೂರಮಠ ಮಾತನಾಡಿ ಸಾಹಿತ್ಯ ಸರ್ವವ್ಯಾಪಿಯಾಗಿ ನಾಡಿನದ್ಯಾಂತ ಪಸರಿಸಬೇಕು ಎಂದರೆ. ಪ್ರೇಮಾ ಇಟಗಿಯವರ ಅಭಿಪ್ರಾಯದಂತೆ ಚುಟುಕುಗಳ ಮೂಲಕ ಹಾಸ್ಯ, ವಿಡಂಬನೆ, ಸಾರ್ವಜನಿಕ ಸಮಸ್ಯೆ, ರಾಜಕೀಯ ಏರಿಳಿತ ಸೇರಿದಂತೆ ಅನೇಕ ವಿಷಯಗಳನ್ನು ನಾಲ್ಕೇ ಸಾಲುಗಳಲ್ಲಿ ಪ್ರಸ್ತುತ ಪಡಿಸಿದ್ದನ್ನು ಕಾಣಬಹುದಾಗಿದೆ.
ಮೊಬೈಲ್ ಗೀಳಿನಿಂದ ಇಂದಿನ ಯುವ ಪೀಳಿಗೆ ಸಾಹಿತ್ಯದ ಕಡೆ ಆಸಕ್ತಿ ಮೂಡಿಸಿಕೊಳ್ಳಲು ಚುಟುಕು ಸಾಹಿತ್ಯ ಪರಿಷತ್ ಸಹಕಾರಿಯಾಗಲಿದೆ ಎಂದು ವಿರುಪಮ್ಮ ಹಿರೇಮಠ ತಿಳಿಸಿದರು.
ಗಜೇಂದ್ರಗಡ ತಾಲೂಕಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ರೇಣುಕಾ ಏವೂರ ಮಾತನಾಡಿ. ಚು. ಸಾ. ಪ ಕನ್ನಡ ಅಸ್ಮಿತೆಯನ್ನು ಬೆಳಗಿಸುವ ಜ್ಯೋತಿಯಾಗಿ ಪ್ರಜ್ವಲಿಸಲಿದೆ. ಆ ನಿಟ್ಟಿನಲ್ಲಿ ನಾವೂ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದೇವೆ. ಅದಕ್ಕೆ ತಾಲೂಕಿನ ಎಲ್ಲ ಸಹಿತ್ಯಾಸಕ್ತರು ಸಹಕಾರ ನೀಡಬೇಕು ಎಂದರು.
ಕಾರ್ಯಕ್ರದ ದಿವ್ಯ ಸಾನಿಧ್ಯವನ್ನು ಭೀಮಾಂಬಿಕಾ ದೇವಸ್ಥಾನದ ಪೂಜ್ಯರು ವಹಿಸಿಕೊಂಡಿದ್ದರು.

ಈ ಸಂದರ್ಭದಲ್ಲಿ ಶರಣಪ್ಪ ಹಿರೇಮನಿ, ನಾಗರಾಜ್ ನಾಯಕ್, ಶಂಕರ ಏವೂರ್, ದರ್ಶನ್ ಡುಮ್ಮಾನವರ್, ಶರಣವ್ವ ಬೆಳದಡಿ, ನಾಗರತ್ನ, ಅನ್ನಪೂರ್ಣ ಜವಳಿಗೇರಿ, ರೋಶನ್ ಶಿರಗುಂಪಿ, ಪೂರ್ಣಿಮಾ ಇನ್ನಿತರರು ಪಾಲ್ಗೊಂಡಿದ್ದರು.
ವರದಿ : ಸುರೇಶ ಬಂಡಾರಿ