
ಸಾರಾಯಿ ಅಂಗಡಿ ಲೈಸೆನ್ಸ್ ಗಾಗಿ ತಹಸೀಲ್ದಾರ್ ಕಚೇರಿ ಎತ್ತಂಗಡಿ? ಆಕ್ರೋಶ.
ಗಜೇಂದ್ರಗಡ: ಸತ್ಯಮಿಥ್ಯ (ಜೂ – 23).
ರಾಜಕೀಯ ಷಡ್ಯಂತ್ರದಿಂದ ಖಾಸಗಿ ವ್ಯಕ್ತಿಯ ಸಾರಾಯಿ ಅಂಗಡಿ ಲೈಸೆನ್ಸ್ ಗಾಗಿ ಗಜೇಂದ್ರಗಡ ತಹಸೀಲ್ದಾರ್ ಕಚೇರಿ ಸ್ಥಳಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಇಂದು ಗಜೇಂದ್ರಗಡದ ಪ್ರಮುಖ ಕಾಲಕಾಲೇಶ್ವರ ವೃತ್ತದಲ್ಲಿಂದು ಬೆಳಿಗ್ಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಾ. ಎನ್ ಮೂರ್ತಿ ಸ್ಥಾಪಿತ), ಡಾ. ಬಾಬು ಜಗಜೀವನರಾಮ್ ಆದಿ ಜಾಂಬವ ಯುವ ಬ್ರಿಗೇಡ್, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ಸಂಘಟನೆಗಳ ವತಿಯಿಂದ ಕಚೇರಿ ಸ್ಥಳಾಂತರ ವಿರೋಧಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದರು.
ನಂತರ ತಹಸೀಲ್ದಾರ್ ಕಚೇರಿಗೆ ಆಗಮಿಸಿ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿಯವರಿಗೆ ಮನವಿ ಸಲ್ಲಿಸಿ ಮಾತನಾಡಿದ ಕರ್ನಾಟಕ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಡಿ.ಜಿ.ಕಟ್ಟಿಮನಿ. ಗಜೇಂದ್ರಗಡ ತಹಶೀಲ್ದಾರ್ ಕಚೇರಿಯು ಊರಿನ ಹೃದಯ ಭಾಗದಲ್ಲಿದ್ದು ತಾಲೂಕಿನಾದ್ಯಾಂತ ಕಚೇರಿಗೆ ಆಗಮಿಸುವ ಜನತೆಗೆ ಬಹಳಷ್ಟು ಉಪಕಾರಿಯಾಗಿದೆ.ಇಂತಹ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಏಕಾಏಕಿ ಕಚೇರಿ ಸ್ಥಳಾಂತರಕ್ಕೆ ಆದೇಶಿಸಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಂತಿದೆ. ತಹಶೀಲ್ದಾರ್ ಕಚೇರಿ ಬೇರೆ ಕಡೆ ಸ್ಥಳಾಂತರ ಮಾಡುವುದರಿಂದ ವಯೋವೃದ್ಧರಿಗೆ,ಅಂಗವಿಕಲರಿಗೆ ಸೇರಿದಂತೆ ಬೇರೆ ಬೇರೆ ಗ್ರಾಮಗಳಿಂದ ಕಚೇರಿಗೆ ಆಗಮಿಸುವ ಜನರಿಗೆ ಬಹಳಷ್ಟು ತೊಂದರೆಯಾಗಲಿದೆ.ಕೂಡಲೇ ಕಚೇರಿ ಸ್ಥಳಾಂತರ ವಿಚಾರ ಕೈಬಿಡಬೇಕು. ರಾಜಕೀಯ ನಾಯಕರ ಲಾಭಕ್ಕಾಗಿ ಕಛೇರಿ ಸ್ಥಳಾಂತರಕ್ಕೆ ಮುಂದಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ದಲಿತ ಮುಖಂಡ ಡಾ.ಬಾಬು ಜಗಜೀವನರಾಮ್ ಯುವ ಬ್ರಿಗೇಡ್‌ನ ಬೆಳಗಾವಿ ವಿಭಾಗದ ಸಂಚಾಲಕ ಮಂಜುನಾಥ ಬುರುಡಿ ಮಾತನಾಡಿ. ಖಾಸಗಿ ವ್ಯಕ್ತಿಯೊಬ್ಬರ ಬಾರ್ ಲೈಸೆನ್ಸ್ ಅನುಕೂಲಕ್ಕಾಗಿ ತಹಶೀಲ್ದಾರ್ ಕಚೇರಿಯನ್ನು ಸ್ಥಳಾಂತರ ಮಾಡುತ್ತಿರುವುದು ಖೇದಕರ ಸಂಗತಿ. ತಹಸೀಲ್ದಾರ್ ಕಛೇರಿ ಸ್ಥಳಾಂತರ ಮಾಡುವುದರಿಂದ ತಾಲೂಕಿನ ಜನತೆಗೆ ಬಹಳಷ್ಟು ತೊಂದರೆಯಾಗಲಿದೆ.ಕಚೇರಿ ಸ್ಥಳಾಂತರ ಮಾಡುವುದೇ ಆದರೆ ತಾಲೂಕಾ ಪಂಚಾಯತ್ ಕಚೇರಿ ಸ್ಥಳಾಂತರ ಮಾಡಿ ಜನತೆ ಅನುಕೂಲ ಮಾಡಿಕೊಡಲೇ. ಅದನ್ನು ಬಿಟ್ಟು ತಹಸೀಲ್ದಾರ್ ಕಚೇರಿ ಸ್ಥಳ ಬದಲಾವಣೆ ಮಾಡಿದರೆ ತಾಲೂಕಿನ ಪ್ರತಿ ಗ್ರಾಮದ ಜನತೆಯನ್ನು ಕರೆತಂದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಾರ್ ಲೈಸೆನ್ಸ್ ಕೊಡಿಸಲು ತಹಸೀಲ್ದಾರ್ ಕಚೇರಿ ಎತ್ತಂಗಡಿ ಮಾಡುತ್ತಿದ್ದಾರೆ ಎಂಬ ವಿಷಯ ಸಾರ್ವಜನಿಕ ವಲಯದಲ್ಲಿ ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಸ್ಥಳಾಂತರಕ್ಕೆ ಕ್ಷೇತ್ರದ ಶಾಸಕರು ಮತ್ತು ಕರ್ನಾಟಕ ಸ್ಟೇಟ್ ಮಿನರಲ್ ಕಾರ್ಪೊರೇಷನ್ ಲಿ. ಬೆಂಗಳೂರು ಎರಡು ಕಾರಣಗಳನ್ನು ನೀಡಿದ್ದಾರೆ ಒಂದು ತಹಸೀಲ್ದಾರ್ ಕಚೇರಿ ಶಿಥಿಲಾವಸ್ಥೆಯಲ್ಲಿದೆ ಮತ್ತೊಂದು ಕಾರ್ಯಾಲಯದ ಆವರಣದಲ್ಲಿ ನಿಲುಗಡೆಗೆ ತೊಂದರೆಯಾಗುತ್ತಿದೆ ಎಂಬುವುದಕ್ಕೆ ಸಾರ್ವಜನಿಕರು ಕಚೇರಿಯನ್ನು ಸಂಪೂರ್ಣವಾಗಿ ಸ್ಥಳಾಂತರ ಮಾಡುವಷ್ಟು ಶಿಥಿಲಾವಸ್ಥೆ ಪರಿಸ್ಥಿತಿಯಲ್ಲಿ ಕಚೇರಿ ಇಲ್ಲಾ ಮತ್ತೊಂದು ಕಚೇರಿ ಹೊರಗಡೆ ವಿಶಾಲವಾದ ಸ್ಥಳವಿದ್ದರೂ ಅಲ್ಲಲ್ಲಿ ಡಂಬುಗಳನ್ನು ನೆಟ್ಟು ತಹಸೀಲ್ದಾರರೆ ಆವರಣ ಚಿಕ್ಕದಾಗಿಸಿದ್ದಾರೆ ಎಂಬ ಉತ್ತರಗಳು ಕೇಳಿ ಬರುತ್ತಿವೆ.ಇದಕ್ಕೆ ತಹಸೀಲ್ದಾರ್ ಮತ್ತು ಶಾಸಕ ಜಿ. ಎಸ್. ಪಾಟೀಲರೇ ಉತ್ತರ ಒದಗಿಸಬೇಕಾಗಿದೆ.

ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ತಲುಪಿಸುವ ಬರವಸೆಯನ್ನು ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ನೀಡಿದರು.
ಸಂದರ್ಭದಲ್ಲಿ ಮಾರುತಿ ಹಾದಿಮನಿ, ಶಿವು ಬುಮದ್, ರವಿ ಮಾದರ, ಮಾರುತಿ ಹಾದಿಮನಿ, ಶಿವಪ್ಪ ಮಾದರ, ಯಮನೂರಪ್ಪ ಹರಿಜನ, ಯಮೂನರ ಮಾದರ, ಚೆನ್ನಪ್ಪ ಪುಜಾರ, ದುರಗೇಶ ಹಿರೇಮನಿ, ಆನಂದ ಮಾದರ, ಪ್ರವೀಣ ತೆಗ್ಗಿನಮನಿ, ಭೀಮೇಶ್ ಮಾದರ, ಮೈಲಾರಪ್ಪ ಮಾದರ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸದಸ್ಯರು ಹಾಗೂ ಪಟ್ಟಣದ ಮುಖಂಡರು ಭಾಗಿಯಾಗಿದ್ದರು.
ವರದಿ : ಚನ್ನು. ಎಸ್.