
ಭಾರತದ ಇತಿಹಾಸದಲ್ಲಿ ತುರ್ತು ಪರಿಸ್ಥಿತಿ ಕಪ್ಪು ಚುಕ್ಕೆ- ತಿಮ್ಮಣ್ಣ ವನ್ನಾಲ.
ಗಜೇಂದ್ರಗಡ:ಸತ್ಯಮಿಥ್ಯ (ಜೂ-25)
ತುರ್ತು ಪರಿಸ್ಥಿತಿ ಭಾರತದ ದೇಶದ ಇತಿಹಾಸದಲ್ಲಿನ ಕಪ್ಪು ಚುಕ್ಕೆ. ಇಂದಿರಾ ಗಾಂಧಿ ತನ್ನ ಸ್ವಂತ ಹಿತಕ್ಕಾಗಿ ದೇಶದ ಭವಿಷ್ಯವನ್ನು ರಕ್ತದಲ್ಲಿ ಬರೆಯುವ ಪ್ರಯತ್ನ ಮಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲು ಮಾಡಿ ಸರ್ವಾಧಿಕಾರಿ ಆಡಳಿತದಿಂದ ಲಕ್ಷಾಂತರ ಹೋರಾಟಗಾರರ ಬಂಧನ, ಪತ್ರಿಕಾ ಸ್ವಾತಂತ್ರ್ಯ ಹರಣ ಮಾಡುವ ಮೂಲಕ ಇಂದಿರಾ ಗಾಂಧಿ ತನ್ನ ದರ್ಪ ಮೆರೆದರು. ಪ್ರಸ್ತುತ ಸಂದರ್ಭದಲ್ಲಿ ಕೈ ಪಕ್ಷದ ನಾಯಕರು ಸಂವಿಧಾನ ಪುಸ್ತಕ ಪ್ರದರ್ಶನ ಮತ್ತು ಸಂವಿಧಾನ ರಕ್ಷಣೆ ಹಾಸ್ಯಸ್ಪದ ಸಂಗತಿ ಎಂದು ಆರ್ ಎಸ್ ಎಸ್ ಹಿರಿಯ ಮುಖಂಡ ತಿಮ್ಮಣ್ಣ ವನ್ನಾಲ ನುಡಿದರು.
1975 ಜೂನ್ 25 ರಂದು ಅಂದಿನ ಕಾಂಗ್ರೆಸ್ ಸರ್ಕಾರ ಇಂದಿರಾಗಾಂಧಿ ನೇತೃತ್ವದಲ್ಲಿ ತನ್ನ ಸ್ವಾರ್ಥಕ್ಕಾಗಿ ಭಾರತ ದೇಶದ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಿ ದೇಶದಲ್ಲಿ ಹೇರಿದ ತುರ್ತು ಪರಿಸ್ಥಿತಿಯ ಕರಾಳ ದಿನ 50 ವರ್ಷ ಪೂರೈಸಿದ ನಿಮಿತ್ಯ ಇಂದು ಭಾರತೀಯ ಜನತಾ ಪಾರ್ಟಿ ರೋಣ ಮಂಡಲದ ವತಿಯಿಂದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸೆರೆಮನೆ ವಾಸ ಅನುಭವಿಸಿ ಬಂದಿರುವ ಗಜೇಂದ್ರಗಡ ನಗರದ ಆರ್ ಎಸ್ ಎಸ್ ಹಿರಿಯ ಮುಖಂಡ ತಿಮ್ಮಣ್ಣ ವನ್ನಾಲ ಅವರ ನಿವಾಸಕ್ಕೆ ತೆರಳಿ ಅವರನ್ನು ಸನ್ಮಾನಿಸಿ ಗ್ರಂಥವನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಿದ ಸಂದರ್ಭದಲ್ಲಿ ಮಾತನಾಡುತ್ತ.ಕಾಂಗ್ರೇಸ್ ಇಂದಿಗೂ ತುರ್ತು ಪರಿಸ್ಥಿತಿ ಬಗ್ಗೆ ಕಿಂಚಿತ್ತೂ ವಿಷಾದ ವ್ಯಕ್ತಪಡಿಸದಿರುವದು ಖೇದಕರ ಎಂದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಶ್ರೀ ಉಮೇಶ್ ಮಲ್ಲಾಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಆರ್. ಕೆ.ಚೌಹಾನ್ , ಹಿರಿಯರಾದ ಶಿವಾನಂದ ಮಠದ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ವಕ್ಕರ, ಬಾಲಾಜಿರಾವ್ ಭೋಸಲೆ,ನಗರ ಘಟಕದ ಅಧ್ಯಕ್ಷ ರಾಜೇಂದ್ರ ಘೋರ್ಪಡೆ, ಮಹಾಂತೇಶ ಪೂಜಾರ, ರಂಗನಾಥ ಮೇಟಿ,ಸಂಜೀವಪ್ಪ ಲೆಕ್ಕಿಹಾಳ,ರವಿಂದ್ರಸಾ ಸಿಂಗ್ರಿ,ರವಿ ವನ್ನಾಲ, ಮಲ್ಲು ಕುರಿ,ಶಾಮಣ್ಣ ವನ್ನಾಲ, ಮತ್ತಿತರರು ಉಪಸ್ಥಿತರಿದ್ದರು.
ವರದಿ: ಚನ್ನು. ಎಸ್.