
ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ನವೀಕೃತ ಕಟ್ಟಡ ಅನಾವರಣ.
ಗದಗ : ಸತ್ಯಮಿಥ್ಯ ( ಜೂ-30).
ನಗರದ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ನವೀಕೃತ ಕಟ್ಟಡದ ಅನಾವರಣವನ್ನು ಗದಗ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಬಿ,ಎಸ್ ನೇಮಗೌಡ ಅವರು ಉದ್ಘಾಟಿಸಿದರು.
ಉದ್ಘಾಟಿಸಿ ಮಾತನಾಡಿದ ಅವರು ಪೊಲೀಸ್ ಠಾಣೆಯ ಜನಸ್ನೇಹಿ ಪೊಲೀಸ್ ಠಾಣೆಯನ್ನಾಗಿ ಸಾರ್ವಜನಿಕರಿಗೆ ಕಾನೂನಿನ ರಕ್ಷಣೆಯ ಕುರಿತು ಹಾಗೂ ಪ್ರಕರಣದಲ್ಲಿ ತ್ವರಿತವಾಗಿ ಪತ್ತೆ ಹಚ್ಚಿ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಹೇಳಿದರು.
31 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ದೀರ್ಘಕಾಲ ಸೇವೆಯನ್ನು ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಂ ಬಿ ಸಂಕದ ಅವರಿಗೆ ಹೂ ಮಳೆಯನ್ನು ಸುರಿಸುವುದರ ಮೂಲಕ ಇದೇ ಸಂದರ್ಭದಲ್ಲಿ ಪೊಲೀಸ್ ಠಾಣೆಯ ವತಿಯಿಂದ ಕೊಡಲಾಯಿತು.
ಪೊಲೀಸ್ ಠಾಣೆಯ ನವೀಕೃತ ಅನಾವರಣದಲ್ಲಿ ಪೊಲೀಸ್ ಠಾಣೆಯನ್ನು ಕಂಗೊಳಿಸುವಂತೆ ಅಲಂಕಾರವನ್ನು ಮಾಡಲಾಗಿತ್ತು.
ಪೊಲೀಸ್ ಠಾಣೆಯ ನವೀಕೃತ ಅನಾವರಣದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಬಿ,ಎಸ್ ನೇಮಗೌಡ ಹೆಚ್ಚುವರಿ ಪೊಲೀಸ ವರಿಷ್ಠಾಧಿಕಾರಿ ಎಂ ಬಿ ಸಂಕದ
ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಮುರ್ತುಜಾ ಖಾದ್ರಿ ಸಿಪಿಐ ಧೀರಜ್ ಶಿಂಧೆ, ಬಡಾವಣೆ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಬಿ,ಟಿ ರಿತ್ತಿ ಬಡಾವಣೆ ಪೊಲೀಸ್ ಠಾಣೆಯ ಪಿಎಸ್ಐ ಮಾರುತಿ ಜೋಗದಂಡಕರ ಬೆಟಗೇರಿ ಪೊಲೀಸ್ ಠಾಣೆ ಪಿ ಎಸ ಐ ಲಕ್ಷ್ಮಣ ಆರಿ ಪಿಎಸ್ಐ ಜೂಲಿಕಟ್ಟಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ:ಮುತ್ತು ಗೋಸಲ.