ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಸಂವಹನ ಕೌಶಲ್ಯ ಮತ್ತು ಸಮಯಪ್ರಜ್ಞೆ ಬಗ್ಗೆ ಪರಿಕಲ್ಪನೆ ಮುಖ್ಯ- ಡಾ.ಎಂ.ಸಿ.ನಿಗಶೆಟ್ಟಿ.

ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಸಂವಹನ ಕೌಶಲ್ಯ ಮತ್ತು ಸಮಯಪ್ರಜ್ಞೆ ಬಗ್ಗೆ ಪರಿಕಲ್ಪನೆ ಮುಖ್ಯ- ಡಾ.ಎಂ.ಸಿ.ನಿಗಶೆಟ್ಟಿ.
ಸಾವಳಗಿ:ಸತ್ಯಮಿಥ್ಯ (ಆ-15).
ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಸಮಯ ನಿರ್ವಹಣೆ, ಸಂವಹನ ಕೌಶಲ್ಯ, ದೃಡತೆ, ಮತ್ತು ನಿಶ್ಚಲವಾದ ಗುರಿ ಅಂಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಂದೇಶ ಸಾರಿ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಉತ್ತಮ ನಾಗರಿಕರಾಗಿ ಎಂದು ಶಾಂತವೀರ ಕಲಾ ಮತ್ತು ವಾಣಿಜ್ಯ ಕಾಲೇಜು, ಬಬಲೇಶ್ವರದ ನಿವೃತ್ತ ಶಿಕ್ಷಕ ಡಾ.ಎಂ.ಸಿ.ನಿಗಶೆಟ್ಟಿ ಹೇಳಿದರು.
ನಗರದ ಸಿ.ಎನ್.ನಿರಾಣಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಐಕ್ಯೂಏಸಿ ವತಿಯಿಂದ ವಿದ್ಯಾರ್ಥಿಗಳಿಗೆ ಒಂದು ದಿನದ ಕಾರ್ಯಗಾರ “ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂವಹನ ಕೌಶಲ್ಯ” ಕಾರ್ಯಕ್ರವನ್ನು ನಿವೃತ್ತ ಸಹ ಪ್ರಾಧ್ಯಾಪಕರು, ಸಮಾಜಶಾಸ್ತ್ರ ವಿಭಾಗ, ಜಿ.ವಿ.ವಿ.ಎಸ್ ಶಾಂತವೀರ ಕಲಾ ಮತ್ತು ವಾಣಿಜ್ಯ ಕಾಲೇಜು, ಬಬಲೇಶ್ವರ ಡಾ.ಎಂ.ಸಿ.ನಿಗಶೆಟ್ಟಿ, ಕಾರ್ಯಗಾರವನ್ನು ನಡೆಸಿ ಮಾತನಾಡಿದ ಅವರು ಆಧುನಿಕ ಪ್ರಪಂಚದಲ್ಲಿ ವ್ಯಕ್ತಿತ್ವದ ಜೊತೆಗೆ ಕೌಶಲ್ಯದ ಪ್ರಾಮುಖ್ಯತೆಯನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳು ಅಭಿವ್ಯಕ್ತ ಪಡಿಸಿದರು.
ಈ ಕಾರ್ಯಗಾರವು ಎರಡು ಅಧಿವೇಶನಗಳನ್ನು ಒಳಗೊಂಡಿದ್ದು ಮೊದಲನೆಯ ಅಧಿವೇಶನ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಮತ್ತು ಎರಡನೇ ಅಧಿವೇಶನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂವಹನ ಕೌಶಲ್ಯc ಕುರಿತು ಸಂಪನ್ಮೂಲ ವ್ಯಕ್ತಿಗಳು ಸುದೀರ್ಘವಾಗಿ ವಿದ್ಯಾರ್ಥಿಗಳಿಗೆ ವಿವರಿಸಿದರು. ಈ ಕಾರ್ಯಗಾರ ಪ್ರಸ್ತುತ ಸಮಾಜದಲ್ಲಿ ವಿದ್ಯಾರ್ಥಿಗಳ ಬಹುಮುಖ ಮತ್ತು ಶೈಕ್ಷಣಿಕ ಸಾಧನೆಗೆ ವ್ಯಕ್ತಿತ್ವ ಮತ್ತು ಕೌಶಲ್ಯ ಸೂಚಕಗಳಾಗಿ ಕಾರ್ಯನಿರ್ವಹಿಸುತ್ತದೆ ಎಂಬ ಸಂದೇಶದ ಮುನ್ನುಡಿಯಾಯಿತು.
ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಸೈಯದಾ ಬಾನು ಮುಲ್ಲಾ, ಐಕ್ಯೂಎಸಿ ಸಂಚಾಲಕ ಕುಮಾರಿ ಶಶಿಕಲಾ ಸಿ, ಕಾಲೇಜಿನ, ಐಕ್ಯೂಎಸಿ ಸಹ ಸಂಚಾಲಕರು ಡಾ. ಸಬಿಹಾಬಾನು ಮಿರ್ಚೋಣಿ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಸಂತೋಷ್ ಖೈರವ್, ಮಹೇಶ್ ಯಾದವ, ಸಹ ಪ್ರಾಧ್ಯಾಪಕರು, ಪ್ರಾಧ್ಯಾಪಕಿಯರು, ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
“ಇಂತಹ ಕಾರ್ಯಗಾರ ಮಾಡುವುದರಿಂದ ಮಕ್ಕಳಲ್ಲಿ ಜ್ಞಾನ ಸಮೃದ್ಧಿ ಆಗುವುದು ಇನ್ನುಳಿದ ವಿಷಯಗಳನ್ನು ತಿಳಿದುಕೊಳ್ಳುತ್ತಾರೆ”
ಡಾ. ಸೈಯದಾ ಬಾನು ಮುಲ್ಲಾ-ಪ್ರಾಂಶುಪಾಲರು. ಚನ್ನಪ್ಪಣ್ಣ ನಿಂಗಪ್ಪ ನಿರಾಣಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಾವಳಗಿ.
“ವಿದ್ಯಾರ್ಥಿಗಳು ಸರ್ವತೋಮುಖ ಬೆಳವಣಿಗೆಗೆ ಅತಿ ಅವಶ್ಯಕವಾದ ವ್ಯಕ್ತಿತ್ವ ವಿಕಸನ ಮತ್ತು ಸ್ಪರ್ಧಾತ್ಮಕ ಕೌಶಲ್ಯಗಳನ್ನು ಯಶಸ್ವಿಯಾಗಿ ಅಳವಡಿಸಿಕೊಳ್ಳಬೇಕೆಂದು”
ಡಾ.ಎಂ .ಸಿ. ನಿಗಶೆಟ್ಟಿ- ನಿವೃತ್ತ ಶಿಕ್ಷಕ.ಶಾಂತವೀರ ಕಲಾ ಮತ್ತು ವಾಣಿಜ್ಯ ಕಾಲೇಜು, ಬಬಲೇಶ್ವರ.
ವರದಿ :ಸಚಿನ್ ಜಾದವ್.