
ಮೂರು ವರ್ಷಕ್ಕೊಮ್ಮೆ ನಡೆಯುವ ಸಿಡಿ ಉತ್ಸವ – ವಿಭಿನ್ನ ವಿಶಿಷ್ಟ ಭಕ್ತಿ ಮಾರ್ಗಕ್ಕೆ ಕ್ಷಣಗಣನೆ.
ಗಜೇಂದ್ರಗಡ/ಇಟಗಿ.: ಸತ್ಯಮಿಥ್ಯ (agust-17).
ಇಟಗಿಯಲ್ಲಿ ವಿಶಿಷ್ಟ ಆಚರಣೆ: ಜೋಗತಿ ವೇಶದಲ್ಲಿ ಯುವರ ಸಿಡಿಯಾಟ ನೋಡಲು ಬಲು ಚಂದ ಕನ್ನಡ ನಾಡಿನಲ್ಲಿ ಹಬ್ಬ ಹರಿದಿನ ಆಚರಣೆಗೆ ಒಂದೊಂದು ವಿಶಿಷ್ಟತೆಯಿದೆ. ತಾಲೂಕಿನ ಇಟಗಿ ಗ್ರಾಮದಲ್ಲಿ ಧರ್ಮದೇವತೆ ಭೀಮಾಂಬಿಕೆ ಜೀವಿತಾವಧಿಯಿಂದಲೂ ಇಂದಿನವರೆಗೆ ಪ್ರತಿ 3 ವರ್ಷಕ್ಕೊಮ್ಮೆ ಸಿಡಿಯಾಟ ಆಡುತ್ತಿರುವುದು ಸಂಸ್ಕೃತಿಯ ಕೇಂದ್ರ ಬಿಂದು. ಆ.19ರಂದು ನಡೆಯುವ ವೈಶಿಷ್ಟ್ಯ ಪೂರ್ಣ ಸಿಡಿ ಸಂಭ್ರಮೋತ್ಸವ ನಡೆಯಲಿದೆ.
ಸಿಡಿಯಾಟದ ಹಿನ್ನೆಲೆ : ಜನರು ಕಷ್ಟಗಳಿಗೆ ಸಿಲುಕಿ ನರಳುತ್ತಿದ್ದ ಸಂದರ್ಭದಲ್ಲಿ ಗ್ರಾಮದ ಪ್ರಮುಖರು ತಾಯಿ ಭೀಮಾಂಬಿಕೆ ಬಳಿ ಹೋಗಿ ತಮ್ಮ ದುಖಃ ಹೇಳಿ ಪರಿಹರಿಸಲು ಬೇಡಿದರಂತೆ. ಆಗ ಭೀಮಾಂಬಿಕೆ ಓಣಿ ಯುವಕರು ಸಿಡಿಯಾಡುವ ಮೂಲಕ ದೇವಿ ಯಲ್ಲಮ್ಮನ್ನು ಪೂಜಿಸಿ ಎಂದು ಸೂಚಿಸಿದಳಂತೆ. ಪ್ರತಿ 3ವರ್ಷಕ್ಕೊಮ್ಮೆ ಸಿಡಿಯಾಡಿ ತಾಯಿ ಯಲ್ಲಮ್ಮನಲ್ಲಿ ಕಷ್ಟ ಪರಿಹರಿಸು ಎಂದು ಬೇಡಿಕೊಳ್ಳುವ ಪ್ರತಿಬಿಂಬವೇ ಈ ಸಿಡಿಯಾಟ.
ಸಿಡಿ ಎಂದರೇನು?: ಮೇಲಿನ ಓಣಿಯ 20ರಿಂದ 35ವಯಸ್ಸಿನ ಯುವಕರು ಸಿಡಿಯಾಡುತ್ತಾರೆ. ಈ ಯುವಕರಲ್ಲೆ 6ಜನ ಗಂಡು ಜೋಗಪ್ಪನ ವೇಶ, ಸುಮಾರು 25ರಿಂದ 30ಯುವಕರು ಹೆಣ್ಣು ಜೋಗತಿಯಾಗುತ್ತಾರೆ. ಶಾವಣ ಮಾಸ ಪ್ರಾರಂಭದಿಂದ ಸಿಡಿಯಾಟಕ್ಕೆ ಪೂರ್ವ ಸಿದ್ಧತೆಯಲ್ಲಿ ತೊಡಗಿ ನಾನಾ ಕಸರತ್ತು ಕಲಿಯುತ್ತಾರೆ. ನಂತರ ಸಿಡಿಯಾಟ ನಿಗದಿತ ದಿನದಂದು ಪ್ರದರ್ಶನ ಮಾಡುತ್ತಾರೆ.
ಸಿಡಿಯಾಟಕ್ಕೆ ಕೊಡ ಪವಿತ್ರ: ಸಿಡಿ ಕೊಡ ಸ್ಪರ್ಶ ಮಾಡಬೇಕಾದರೆ ಸ್ನಾನ ಪೂಜೆ ಮಾಡಿ ಮಡಿಯಿಂದ ಭೀಮಾಂಬಿಕೆ ಗದ್ದುಗೆಗೆ ನಮಸ್ಕರಿಸಿ ಸಿಡಿ ಕೊಡ ಮುಟ್ಟಬೇಕು.ನಿತ್ಯ ತಾಲಿಮು ಮಾಡುವ ಯುವಕರು ದುಶ್ಚಟಗಳಿಂದ ದೂರವಿರಬೇಕು. ಧರ್ಮ ಮಠದ ಆವರಣದಲ್ಲಿ ತಾಲಿಮು ನಡೆಯುತ್ತದೆ.
ಧರ್ಮರ ಮಠದಿಂದ ಪ್ರಾರಂಭ: ಸಿಡಿ ಕೊಡ ಹೊತ್ತ ಯುವಕರು ಪ್ರಥಮ ಅಕ್ಕಸಾಲಿಗರ ಮನೆಗೆ ಮಡಿಯಿಂದ ತೆರಳಿ ಸಿಡಿಕೊಡಕ್ಕೆ ಕಟ್ಟುವ ಯಲ್ಲಮ್ಮನ ಮೂರ್ತಿ ತರುತ್ತಾರೆ. ನಂತರ ದೇಸಾಯಿಯವರ ಮನೆಗೆ ಹೋಗಿ ಶೃಂಗರಿಸಿ ದೇಸಾಯಿ ಕುಟುಂಬದವರು ಪೂಜೆ ಸಲ್ಲಿಸುತ್ತಾರೆ.
ಚವುರ, ಚಾಮರ ನೀಡುತ್ತಾರೆ. ಸಿಡಿಕೊಡ ಹೊರುವ ಯುವಕರು ಕೊಡ ಹೊತ್ತು ಮೋಜು, ಮಜಲುಗಳಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಾನಾ ಕಸರತ್ತು ನಡೆಸುತ್ತಾ ತಾಯಿ ಭೀಮಾಂಬಿಕೆಯ ದೇವಸ್ಥಾನಕ್ಕೆ ತೆರಳುತ್ತಾರೆ.
ಸಾಹಸ ಪ್ರದರ್ಶನಗಳು : ಹೆಣ್ಣು ಜೋಗತಿ ವೇಶ ಧರಿಸಿದ ಯುವಕರು ತಲೆ ಮೇಲೆ ನೀರು ತುಂಬಿದ ಕೊಡ ಹೊತ್ತು ಚೌಡಕಿ, ತುಂತನಿ ತಾಳಕ್ಕೆ ತಕ್ಕಂತೆ ರೇಣುಕಾ ಯಲ್ಲಮ್ಮನ ಭಕ್ತಿಗೀತೆಗಳಿಗೆ ಕುಣಿಯುತ್ತಾ ನೆರೆದ ಭಕ್ತ ಸಮೂಹ ನೆಲದ ಮೇಲೆ 100ರಿಂದ 500ವರೆಗೆ ಇಟ್ಟ ನೋಟು ಬಾಯಿಯಿಂದ ತಗೆಯುತ್ತಾರೆ. ಇದನ್ನು ತಗೆಯುವಾಗ ಯಾರು ಸಹಾಯ ಮಾಡುವಂತಿಲ್ಲ.ತಲೆ ಮೇಲಿನ ಕೊಡ ಮುಟ್ಟದೆ ಹಣ ತಗೆದುಕೊಳ್ಳುವ ಪ್ರದರ್ಶನ ಪ್ರಮುಖ ಸ್ಥಳಗಳಲ್ಲಿ ನಡೆಯುತ್ತಿದೆ.
ತಲೆ ಮೇಲೆ ಇಟ್ಟ ನೀರು ತುಂಬಿದ ಕೊಡ ಭುಜಕ್ಕೆ ಜಾರಿಸಿಕೊಳ್ಳುತ್ತಾರೆ. ನಂತರ ಬಲಬುಜದಿಂದ ಎಡಭುಜಕ್ಕೆ ತಿರುಗಿಸಿ ಮತ್ತೆ ಎದೆ ಮೇಲೆ ಬರುತ್ತದೆ. ಹಾಗೆಯೇ ಕೈ ಮುಟ್ಟದೆ ತಲೆ ಮೇಲೆ ಸರಸಿಕೊಳ್ಳುತ್ತಾರೆ.
ತಲೆ ಮೇಲೆ ತುಂಬಿದ ಕೊಡ ಹೊತ್ತ ಸಿಡಿಯಾಡುವ ಯುವಕ ಮತ್ತೊಂದು ತುಂಬಿದ ಕೊಡ ಯಾರ ಸಹಾಯವಿಲ್ಲದೆ ತಂದು ಇಟ್ಟು ಅದರ ಮೇಲೆ ನಿಂತು ನತ್ಯ ಮಾಡುತ್ತಾನೆ.
ಅನೇಕ ಸಾಹಸ ಮಾಡುವ ಈ ಸಿಡಿಯಾಟದಲ್ಲಿ ವೈಶಿಷ್ಟ್ಯವೆಂಬತೆ ಒಬ್ಬನು 5ತುಂಬಿದ ಕೊಡ ಹೊರುತ್ತಾನೆ.ಒಂದು ಬಾಯಿಯಲ್ಲಿ ಇನ್ನೊಂದು ತಲೆ ಮೇಲೆ,ಬಗಲಲ್ಲಿ,ಒಂದು ತೋರು ಬೆರಳಿನಲ್ಲಿ, ಮತ್ತೊಂದು ಹೆಬ್ಬಟ್ಟಿನ ಮೇಲೆ ಹೊತ್ತು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾರೆ.
ಕೊಡ ಹೊತ್ತ ಯುವಕ ಮತ್ತೊಂದು ತುಂಬಿದ ಕೊಡ ತಗೆದುಕೊಂಡು ಅದರ ಮೇಲೆ ಶಾವಗಿ ಮನೆ ಇಟ್ಟು ಅದರ ಮೇಲೆ ಹತ್ತಿ ಕುಳಿತು ನಿಂತು ಮಲಗಿ ದಿಡ ನಮಸ್ಕಾರ ಹಾಕುತ್ತಾನೆ.
ಸಿಡಿಯಾಟದಲ್ಲಿ ಹೆಣ್ಣು ಜೋಗತಿಯರ ವೇಷದಲ್ಲಿ ಮುತ್ತಪ್ಪ ಹದ್ದಣ್ಣನವರ, ಮಂಜುನಾಥ ಪೂಜಾರ, ಸಚಿನ ಜಡೆದೇಲಿ,ಧರ್ಮಪ್ಪ ಜಡೆದೇಲಿ, ಸಂತೋಷ ಹಂಡಿ, ಸಚಿನ್ ಹಂಡಿ,ಮಂಜುನಾಥ ಜಡೆದೇಲಿ, ಮಹಾಂತೇಶ ನಾಗರಾಳ, ಭೀಮಪ್ಪ ವಡಗೇರಿ, ಧರ್ಮಪ್ಪ ನಾಗರಾಳ, ಭರತ ಭೋವಿ, ಪ್ರವೀಣ್ ಕಿಲ್ಲೆದ, ಭೀಮಪ್ಪ ಗೋಸಲ, ಮುತ್ತಪ್ಪ ಗುರಿಗಾರ, ಶಿವಕುಮಾರ್ ಜಡೆದೇಲಿ, ಸಂಗನಗೌಡ ಪಾಟೀಲ, ಧರ್ಮಪ್ಪ ಜಡೆದೇಲಿ ಮಹೇಶ್ ಹುದಾರ ಮುತ್ತಪ್ಪ ಜಡೆದೇಲಿ,ಚಂದ್ರ ಜಡೆದೇಲಿ,ನಿರ್ವಹಿಸುವರು.
ಗಂಡು ಜೋಗಪ್ಪನ ವೇಷದಲ್ಲಿ ನಾಗರಾಜ ಧರ್ಮರಮಠ,ನಾಗಪ್ಪಜ್ಜ ಧರ್ಮರಮಠ,ಕಾಳಿಂಗಪ್ಪಜ್ಜ ಧರ್ಮರ ಹರಿಶ್ಚಂದ್ರಪ್ಪ ಧರ್ಮರ ನೀಲಪ್ಪ ಮಾಸ್ತರ ಜಡದೇಲಿ ಪ್ರಕಾಶ್ ಬಡಿಗೇರ ಶರಣಪ್ಪ ಜಡದೇಲಿ ಲಾಡಸಾಬ ಪಿಂಜಾರ ಧರ್ಮಪ್ಪ ಓಲಿ,ಸಂಗಪ್ಪ ಮಡಿವಾಳರ,ಹೊನ್ನಪ್ಪ ಜಡೆದೇಲಿ ಚಂದ್ರಪ್ಪ ಪಲ್ಲೇದ, ನಿರ್ವಹಿಸುವರು
ಪಂಜಿನ ಜೋಗಪ್ಪಗಳ ವೇಷದಲ್ಲಿ: ಅರ್ಜುನಪ್ಪ ಕಿಲ್ಲೇದ,ವೀರಪ್ಪ ತೆಗ್ಗಿನಕೇರಿ, ನಿರ್ವಹಿಸುತ್ತಾರೆ.
ಚೌರಬೀಸುವವರು:ಬಾಳಪ್ಪ ಭೋವಿ,ಶರಣಪ್ಪ ಮಳಗಿ,ನವೀನ ಮಳಗಿ ಬೀಮಪ್ಪ ಹುದ್ದಾರ,ನಿರ್ವಹಿಸುವರು ಸಿಡಿಯಾಟ ಸಂಭ್ರಮದಲ್ಲಿ ಮಹಾರಾಷ್ಟ್ರ,ಆಂಧ್ರಪ್ರದೇಶ,ತಮಿಳುನಾಡು,ಗೋವಾದಿಂದ ಭಕ್ತರು ಪಾಲ್ಗೊಳ್ಳುತ್ತಾರೆ.
ಆ.19 ರಂದು ಸಿಡಿಯಾಟ: 2ವರ್ಷ ಮುಗಿದು 3ನೇ ವರ್ಷಕ್ಕೆ ಕಾಲಿಡುವ ಸಂದರ್ಭದಲ್ಲಿ ಶ್ರಾವಣ ಮಾಸದ ಮಂಗಳವಾರ ಆ,19ರಂದು ಬೆಳಗ್ಗೆ 10ಕ್ಕೆ ಸಿಡಿಯಾಟ ನಡೆಯುತ್ತದೆ. ಸಂಜೆ 6ರವರೆಗೂ ನಿರಂತರ ನಡೆಯುತ್ತದೆ.ಇದಕ್ಕೊಂದು ಸಿಡಿ ಕಂಬ ನಿರ್ಮಿಸುತ್ತಾರೆ. ಶ್ರೀ ಭೀಮಾಂಬಿಕೆ ವಂಶಸ್ಥ ಧರ್ಮರ ಮನೆತನದವರು ಕುಳಿತಿರುತ್ತಾರೆ.
ಲೇಖನ :ಮುತ್ತು ಗೋಸಲ.