ನಗರದಲ್ಲಿರುವ ಗಜಾನನ ಮಂಡಳಿಯವರು ಒಗ್ಗಟ್ಟಿನೊಂದಿಗೆ ವೈಭವದೊಂದಿಗೆ ಗಣೇಶೋತ್ಸವವನ್ನು ಆಚರಿಸೋಣ : ರಾಜಣ್ಣ ಮಲ್ಲಾಡದ.

ನಗರದಲ್ಲಿರುವ ಗಜಾನನ ಮಂಡಳಿಯವರು ಒಗ್ಗಟ್ಟಿನೊಂದಿಗೆ ವೈಭವದೊಂದಿಗೆ ಗಣೇಶೋತ್ಸವವನ್ನು ಆಚರಿಸೋಣ : ರಾಜಣ್ಣ ಮಲ್ಲಾಡದ.
ಗದಗ : ಸತ್ಯಮಿಥ್ಯ (ಆ – 24)
ಅವಳಿ ನಗರದ ಎಲ್ಲಾ ಗಜಾನನ ಮಂಡಳಿಯವರು ಒಗ್ಗಟ್ಟಿನೊಂದಿಗೆ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸೋಣ ಎಂದು ನಗರದ ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಸಾರ್ವಜನಿಕ ಗಜಾನನ ಮಹಾಮಂಡಳಿಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕ ಶ್ರೀ ಗಜಾನನ ಮಂಡಳಿಯ ಅಧ್ಯಕ್ಷರಾದ ರಾಜಣ್ಣ ಮಲ್ಲಾಡದ ಅವರು ಹೇಳಿದರು.
ನಂತರ ಮಾತನಾಡಿದ ಅವರು ಗಣೇಶ ಹಬ್ಬವನ್ನು ವೈಭವದಿಂದ, ಶಾಂತಿ ಮತ್ತು ಸೌಹಾರ್ದತೆಯಿಂದ ಎಲ್ಲಾ ಗಜಾನನ ಮಂಡಳಿಯ ವತಿಯಿಂದ.ಗಣೇಶನ ಪ್ರತಿಷ್ಠಾಪನೆಯಿಂದ ಹಿಡಿದು ಗಣೇಶನ ವಿಸರ್ಜನೆಯವರೆಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಹಬ್ಬವನ್ನು ಆಚರಿಸೋಣ. ಗಣೇಶ ವಿಸರ್ಜನೆಯನ್ನು ರಾತ್ರಿ 11:00ಯ ಒಳಗೆ ಗಣೇಶನ ವಿಸರ್ಜನೆ ಮಾಡಬೇಕು ಗಣೇಶನ ವಿಸರ್ಜನೆ ಮೆರವಣಿಗೆ ಹೊರಡುವ ವೇಳೆಯಲ್ಲಿ ಕರೆಂಟ್ ತೆಗೆಯಬಾರದು ಗ್ರೀನ್ ಮಾರ್ಕೆಟ್ ತರುಣ ವ್ಯಾಪಾರಸ್ಥರ ಗಜಾನನ ಮಂಡಳಿಯ ವತಿಯಿಂದ ಗಣೇಶನ ವಿಸರ್ಜನೆ ಮಾಡುವ ದಿನದಂದು ಸಾರ್ವಜನಿಕರಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿದ್ದು ವಿಸರ್ಜನೆಗೆ ಆಗಮಿಸುವ ಎಲ್ಲ ಸಾರ್ವಜನಿಕರಿಗೂ ಪ್ರಸಾದದ ವಿತರಣೆಯನ್ನು ಮಾಡಲಾಗುತ್ತದೆ.
ಲಯನ್ಸ ಕ್ಲಬ್ ವತಿಯಿಂದ ಎಲ್ಲಾ ಗಜಾನನ ಮಂಡಳಿಯಲ್ಲಿ ರಕ್ತದಾನ ಶಿಬಿರ ಹಾಗೂ ತೀರಿಕೊಂಡವರ ಕಣ್ಣು ದಾನ ಶಿಬಿರವನ್ನು ಹಮ್ಮಿಕೊಳ್ಳಬೇಕು ರಕ್ತದಾನವನ್ನು ಹೆಚ್ಚಿಗೆ ಮಾಡಿದ ಗಜಾನನ ಮಂಡಳಿಗೆ ಪುರಸ್ಕಾರ ಹಾಗೂ ಸನ್ಮಾನವನ್ನು ಮಾಡಲಾಗುವುದು ಎಂದು ಹೇಳಿದರು.
ಗಣೇಶೋತ್ಸವದಲ್ಲಿ ಗಜಾನನ ಮಂಡಳಿಯವರು ರಕ್ತದಾನ ಹಾಗೂ ಕಣ್ಣು ದಾನದ ಶಿಬಿರವನ್ನು ಹಮ್ಮಿಕೊಳ್ಳುವಂತೆ ಪಿವಿಜಿ ಎಂಜಿಎಸ ಪೋತ್ನಿಸ್ ವಿನಂತಿಯನ್ನು ಮಾಡಿಕೊಂಡಿದ್ದಾರೆ ಎಂದು ಹೇಳಿದರು .
ಈ ಸಂದರ್ಭದಲ್ಲಿ ಸಾರ್ವಜನಿಕ ಮಹಾಮಂಡಳಿಯ ಅಧ್ಯಕ್ಷರಾದ ರಾಜಣ್ಣ ಮಲ್ಲಾಡದ ಅನಿಲ್ ಅಬ್ಬಿಗೇರಿ ರಾಜು ಮುಧೋಳ್ ಮಂಜಣ್ಣ ಅಬ್ಬಿಗೇರಿ ಮಂಜಣ್ಣ ಬೆಲೇರಿ ಅಜ್ಜಣ್ಣ ಮಲ್ಲಾಡದ ರಮೇಶ ಶಿಗ್ಲಿ ಶಂಕರ್ ಮುಳುಗುಂದ ವಾಸು ಜೋಗಿನ ತಿಮ್ಮಣ್ಣ ಕೋನರೆಡ್ಡಿ ಅನಿಲ ಮುಳ್ಳಾಳ, ಕಿರಣ್ ಹಿರೇಮಠ ಸಚಿನ್ ಮಲ್ಲಾಡದ ಆದಿತ್ಯ ಮಲ್ಲಾಡದ ನಂದೀಶ ಮಲ್ಲಾಡದ ಪ್ರಮೋದ್ ವಾರಕರ ಮಾಂತೇಶ್ ಖಾತರಿಕಿ ಹಾಗೂ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಮಹಾಮಂಡಳಿಯ ಎಲ್ಲಾ ಸದಸ್ಯರು ಗಜಾನನ ಮಹಾಮಂಡಳಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ : ಮುತ್ತು ಗೋಸಲ