
ಶಿಕ್ಷಕರೆ ರಾಷ್ಟ್ರ ರಕ್ಷಕರು – ವಸಂತರಾವ್.
ಗಜೇಂದ್ರಗಡ ನಗರದ ಪುರ್ತಗೇರಿ ಕ್ರಾಸ್ ಬಳಿಯಿರುವ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸೋಮವಾರ ಮಧ್ಯಾಹ್ನ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು
ಗಜೇಂದ್ರಗಡ:ಸತ್ಯಮಿಥ್ಯ (ಸೆ-08)
ಮಕ್ಕಳಿಗೆ ಉತ್ತಮ ಸಂಸ್ಕಾರ ಹಾಗೂ ಗುಣಾತ್ಮಕ ಶಿಕ್ಷಣವನ್ನು ನೀಡಿ ಸಮಾಜದ ಹಾಗೂ ದೇಶದ ಅಭಿವೃದ್ಧಿಗೆ ನಿಸ್ವಾರ್ಥಿಯಾಗಿ ಸೇವೆ ಸಲ್ಲಿಸುವ ಸಮರ್ಥ ಶಿಕ್ಷಕರೇ ರಾಷ್ಟ್ರ ರಕ್ಷಕರಾಗುತ್ತಾರೆ ಎಂದು ಪಿಯು ಪ್ರಾಚಾರ್ಯ ವಸಂತರಾವ್ ಆರ್. ಗಾರಗಿ ಹೇಳಿದರು.
ಗಜೇಂದ್ರಗಡ ನಗರದ ಪುರ್ತಗೇರಿ ಕ್ರಾಸ್ ಬಳಿಯಿರುವ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸೋಮವಾರ ಮಧ್ಯಾಹ್ನ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದರು.
ಮಕ್ಕಳ ಭವಿಷ್ಯ ರೂಪಿಸುವರು ಶಿಕ್ಷಕರಾಗಿದ್ದಾರೆ. ಎಂಜನಿಯರ್ ಕಾರ್ಯದಲ್ಲಿದೋಷವಾದರೆ ಕಟ್ಟಡಕ್ಕೆ ಹಾನಿಯಾಗುವುದು. ವೈದ್ಯನ ವೃತ್ತಿಯಲ್ಲಿದೋಷವಾದರೆ ರೋಗಿಗೆ ಹಾನಿಯಾಗುವುದು. ಆದರೆ ಶಿಕ್ಷಕನ ಕರ್ತವ್ಯದಲ್ಲಿ ಚ್ಯುತಿ ಉಂಟಾದರೆ ಇಡೀ ವಿದ್ಯಾರ್ಥಿ ಸಮೂಹದ ಭವಿಷ್ಯವೇ ಹಾಳಾಗುವುದು. ಆದ್ದರಿಂದ ಶಿಕ್ಷಕರ ಜವಾಬ್ದಾರಿ ಅತ್ಯಂತ ಗುರುತರವಾದದ್ದು ದಕ್ಷತೆ, ಪ್ರಾಮಾಣಿಕತೆಯಿಂದ ಶಿಕ್ಷಕರು ಕರ್ತವ್ಯ ನಿರ್ವಹಿಸುವುದು ಅತೀ ಅವಶ್ಯವಿದೆ ಎಂದರು. ಶ್ರೀ ಅನ್ನದಾನೇಶ್ವರ ಮಠದ ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ನಮ್ಮ ವಿದ್ಯಾಸಂಸ್ಥೆಯಲ್ಲಿ ಶೀಕ್ಷಕರು ಕಲಿಸುವಿಕೆಗೆ ಕಂಕಣಬದ್ಧರಾಗಿ ಕರ್ವತ್ಯವವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಇದರ ಫಲವಾಗಿ ಅನೇಕ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿದ್ದಾರೆ ಎಂದರು. ಏಳು ಜನ್ಮದ ಪುಣ್ಯದಿಂದ ಒಬ್ಬ ಮನುಷ್ಯನು ಶಿಕ್ಷಕನಾಗುತ್ತಾನೆ. ಹೀಗಾಗಿ ಸಿಕ್ಕ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋದವನು ಮಾತ್ರ ನಿಜವಾದ ಶಿಕ್ಷಕನಾದ ಗೌರವ ಲಭಿಸುತ್ತದೆ. ಆ ನಿಟ್ಟಿನಲ್ಲಿ ಶಿಕ್ಷಕರಾದವರು ಕ್ಷಣ-ಕ್ಷಣಕ್ಕೂ ವಿನೂತನ ವಿಷಯಗಳ ಬಗ್ಗೆ ಮಾಹಿತಿಗಳು ಪಡೆಯುವ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮವಾದ ಜ್ಞಾನಾರ್ಜನೆ ಮಾಡಬೇಕು ಎಂದು ಹೇಳಿದರು.
ಪದವಿ ಪ್ರಾಚಾರ್ಯ ಬಸಯ್ಯ ಎಸ್. ಹಿರೇಮಠ ಮಾತನಾಡಿ, ಶಿಕ್ಷಕರಾದವರು ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಪ್ರೀತಿಸುವ ಮೂಲಕ ನೈಜ ಶಿಕ್ಷಣ ನೀಡಿದರೆ, ಅವರ ಬದುಕಿಗೆ ಸ್ಫೂರ್ತಿ ಸಿಗುತ್ತದೆ ಎಂದರು. ಶಿಕ್ಷಕರಾದವರು ಭಾವನಾತ್ಮಕವಾಗಿ, ಎಚ್ಚರಿಕೆಯಿಂದ ಪಾಠ ಹೇಳುವ ಮನೋಭಾವನೆಯನ್ನು ರೂಢಿಸಿಕೊಳ್ಳಬೇಕು ಮತ್ತು ಬೇರುಮಟ್ಟದ ಶಿಕ್ಷಣ ನೀಡಬೇಕು ಎಂದರು. ಶಿಕ್ಷಕರು ನಮ್ಮ ಜೀವನದ ಅವಿಭಾಜ್ಯ ಅಂಗ, ಮೊದಲಿಂದಲೂ ಶಿಕ್ಷಣವೆಂದರೆ ನನಗೆ ಒಲವು, ನಾವು ಉನ್ನತ ಪದವಿ ಹೊಂದಲು ಶಿಕ್ಷಕರೇ ಕಾರಣ. ಹಾಗಾಗಿ ನಮ್ಮ ಗುರುಗಳಿಗೆ ನಮನ ಹೇಳಬೇಕು. ನಿಸ್ವಾರ್ಥವಾಗಿ ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಟ್ಟು ಜೀವನ ಮಾಡುತ್ತಿರು ವವರು ಶಿಕ್ಷಕರು. ಪ್ರತಿಯೊಂದು ವಿಷಯದಲ್ಲಿಯೂ ಗುರುಗಳನ್ನು ಕಾಣುವಂತಹ ಸಂಸ್ಕೃತಿ ನಮ್ಮದು. ಗುರುವಿನಿಂದ ಶಿಕ್ಷಣ ಕಲಿಯುವುದೇ ನಿಜವಾದ ಕಲಿಕೆ ಎಂದರು.
ಈ ವೇಳೆ ಅನೇಕ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಂದ ಉಪನ್ಯಾಸಕರಿಗೆ ವಿವಿಧ ಚಟುವಟಿಕೆಗಳು ನಡೆದಿವು. ನಂತರ ಸನ್ಮಾನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ಗೋಪಾಲ ಟಿ. ರಾಯಬಾಗಿ, ಸಂಗಮೇಶ ವಸ್ತ್ರದ, ಪ್ರತಿಭಾ ಲಕ್ಷಕೊಪ್ಪದ, ಸಂಗೀತಾ ನಾಲತವಾಡ, ವಿಜಯಲಕ್ಷ್ಮೀ ಅರಳಿಕಟ್ಟಿ, ಪ್ರೀತಿ ಹೊಂಬಳ, ಮಂಜುನಾಥ ಕುಂಬಾರ, ಬಾಲು ಪಿ. ವಾಲ್ಮೀಕಿ, ಬಿ. ಎಚ್. ಪೂಜಾರ, ಭಾಗ್ಯಶ್ರೀ ಮಾದರ, ಪ್ರಶಾಂತ ಗಾಳಿಪೂಜೆಮಠ, ಸಿಬ್ಬಂದಿಗಳಾದ ಶಿವಾನಂದ ಹಳ್ಳದ, ಈರಣ್ಣ ಹಡಪದ ಇದ್ದರು.
ವರದಿ:ಸುರೇಶ ಬಂಡಾರಿ.