ಜಿಲ್ಲಾ ಸುದ್ದಿ

ಶೈಕ್ಷಣಿಕ ಕ್ಷೇತ್ರದ ಹರಿಕಾರ ರಾಜಕೀಯ ಕ್ಷೇತ್ರದ ಭವಿಷ್ಯದ ನಾಯಕ ರವಿ ದಂಡಿನರಿಗೆ ಜನುಮದಿನದ ಸಂಭ್ರಮ.

Share News

ಶೈಕ್ಷಣಿಕ ಕ್ಷೇತ್ರದ ಹರಿಕಾರ ಭವಿಷ್ಯದ ರಾಜಕೀಯ ನಾಯಕ ರವಿ ದಂಡಿನರಿಗೆ ಜನುಮದಿನದ ಸಂಭ್ರಮ.
Oplus_131072
ರವೀಂದ್ರನಾಥ್ ದಂಡಿನ ಅವರ 53ನೇ ಜನ್ಮದಿನೋತ್ಸವದ ಪ್ರಯುಕ್ತ ವಿಶೇಷ ಲೇಖನ

ಗದಗ/ಸತ್ಯಮಿಥ್ಯ (ಅ-01)

ಸರಳ ಸಜ್ಜನಿಕೆಯ ವ್ಯಕ್ತಿತ್ವದ ನಾಯಕ – ಸಾಮಾಜಿಕ ಕಾರ್ಯಗಳಿಗೂ ಸೈ ಶಿಕ್ಷಣ ಕ್ರಾಂತಿಗೂ ಸೈ ಭವಿಷ್ಯದ ಜನನಾಯಕ ನಮ್ಮ ಹೆಮ್ಮೆಯ ಯುವ ಚೈತನ್ಯ ರವೀಂದ್ರನಾಥ್ ದಂಡಿನ.

ಸಮಾಜದಲ್ಲಿ ಯಾವುದೇ ವ್ಯಕ್ತಿಯು ಜನನಾಯಕನಾಗಬೇಕಾದರೆ ಅಂತಹ ವ್ಯಕ್ತಿಗಳಲ್ಲಿ ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡಿರಬೇಕು ಹಾಗೂ ಸದಾ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರಬೇಕು ಮತ್ತು ಪ್ರತಿಯೊಬ್ಬ ವ್ಯಕ್ತಿಯನ್ನು ಶಿಕ್ಷಣವಂತರನ್ನಾಗಿ ಮಾಡುವ ಧ್ಯೇಯವನ್ನು ಹೊಂದಿರಬೇಕು ಅಂದಾಗ ಮಾತ್ರ ಅವರನ್ನು ಜನನಾಯಕರೆಂದು ಪ್ರೀತಿ ಅಭಿಮಾನದ ಮೂಲಕ ಕಾಣುತ್ತಾರೆ ಅಂತಹ ವ್ಯಕ್ತಿಗಳಲ್ಲಿ ಸರಳ ಸಜ್ಜನಿಕೆಯ ವ್ಯಕ್ತಿತ್ವದ ನಾಯಕ ಸಾಮಾಜಿಕ ಕಾರ್ಯಗಳಿಗೂ ಸೈ ಶಿಕ್ಷಣ ಕ್ರಾಂತಿಗೂ ಸೈ ಭವಿಷ್ಯದ ಜನನಾಯಕ ನಮ್ಮ ಹೆಮ್ಮೆಯ ಜನನಾಯಕ ರವೀಂದ್ರನಾಥ್ ದಂಡಿನ ಅವರ 53ನೇ ಹುಟ್ಟು ಹಬ್ಬದ ಕುರಿತು ವಿಶೇಷ ಲೇಖನ.

ಕನಕದಾಸ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಡಾ. ಬಿ.ಎಫ್. ದಂಡಿನ ಅವರ ಮಗನಾದ ರವೀಂದ್ರನಾಥ ದಂಡಿನ ಅವರು ತಂದೆಗೆ ತಕ್ಕ ಮಗ ಎನ್ನುವಂತೆ ಕನಕದಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾಗಿ ಶಿಕ್ಷಣ ಕ್ರಾಂತಿಯನ್ನು ಮಾಡುವುದರ ಮೂಲಕ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿ ಸಾಮಾಜಿಕ ಕಾರ್ಯವನ್ನು ಮಾಡುತ್ತಿದ್ದಾರೆ.

ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಪ್ರತಿಭೆಯನ್ನು ಅನಾವರಣಗೊಳಿಸಲು ವೇದಿಕೆಯನ್ನು ಮಾಡಿ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ಜಿಲ್ಲೆ ರಾಜ್ಯ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತೇಜನವನ್ನು ನೀಡುವುದರ ಮೂಲಕ ರವೀಂದ್ರನಾಥ ದಂಡಿನವರು ಪ್ರೇರಣಾ ಶಕ್ತಿಯಾಗಿದ್ದಾರೆ.

ಸಮಾಜದಲ್ಲಿ ಬಡ ಹಾಗೂ ಮಾಧ್ಯಮ ವರ್ಗದ ಜನರ ಏಳಿಗೆಯನ್ನು ಬಯಸುವ ಅವರು ಬಡ ಮಾಧ್ಯಮ ವರ್ಗದವರ ಕಷ್ಟಗಳಿಗೆ ಸ್ಪಂದಿಸುವ ನಾಯಕರಾಗಿ ಜನ ವಿರೋಧಿ ನೀತಿಗಳನ್ನು ಅವರು ಖಂಡಿಸುತ್ತಾ ಬಡ ಹಾಗೂ ಮಾಧ್ಯಮ ವರ್ಗದವರ ಜನರ ದ್ವನಿಯಾಗಿ ಸಾಮಾಜಿಕ ಕಾರ್ಯವನ್ನು ಮಾಡುತ್ತಿದ್ದಾರೆ.

ಅವರ ಸರಳ ಸಜ್ಜನಿಕೆಯ ಮಾತುಗಳಿಂದ ಅವರ ಅಭಿಮಾನಿ ಬಳಗ ಹಾಗೂ ಅವರ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಉಪನ್ಯಾಸಕರು ಸಿಬ್ಬಂದಿಗಳು ಅವರ ಜೀವನವನ್ನು ಆದರ್ಶವನ್ನಾಗಿ ತೆಗೆದುಕೊಳ್ಳುವಂತಹ ವ್ಯಕ್ತಿತ್ವದ ವ್ಯಕ್ತಿಯಾಗಿದ್ದಾರೆ.

ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಅವರು ಪ್ರತಿಯೊಂದು ಸಮಾರಂಭದಲ್ಲಿ ಪಾಲ್ಗೊಳ್ಳುವುದರ ಮೂಲಕ ಸಮಾರಂಭವನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿ ಇತರರಿಗೆ ಆದರ್ಶರಾಗಿ ಸಮಾರಂಭದಲ್ಲಿ ಜನರಿಗೆ ಹಿತನುಡಿಗಳನ್ನು ಹೇಳುವುದರ ಮೂಲಕ ಜನಪ್ರಿಯ ವ್ಯಕ್ತಿಗಳಾಗಿದ್ದಾರೆ.

ರವಿ ದಂಡಿನ ಅವರ ಜೀವನವು ಸಮರ್ಪಣೆ ದೃಷ್ಟಿಕೋನ ಮತ್ತು ಸೇವೆಗೆ ಸಾಕ್ಷಿಯಾಗಿದೆ . ಶಿಕ್ಷಣ, ಸಮಾಜ ಕಲ್ಯಾಣ ಮತ್ತು ಸಾಂಸ್ಕೃತಿಕ ತೊಡಗಿಸಿಕೊಳ್ಳುವಿಕೆಯ ಮೂಲಕ ಅವರು ಜೀವನ ಮತ್ತು ಸಮುದಾಯಗಳನ್ನು ಪರಿವರ್ತಿಸುವುದನ್ನು ಮುಂದುವರೆಸಿದ್ದಾರೆ. ಕನಕದಾಸ ಶಿಕ್ಷಣ ಸಮಿತಿಯ ಮೂಲಕ ಅವರ ಕೆಲಸವು ಸಂತ ಕನಕದಾಸರ ಪರಂಪರೆಯನ್ನು ಗೌರವಿಸುವುದಲ್ಲದೆ, ಹೊಸ ಪೀಳಿಗೆಯನ್ನು ಜ್ಞಾನ, ಸಹಾನುಭೂತಿ ಮತ್ತು ಉದ್ದೇಶದೊಂದಿಗೆ ಮುನ್ನಡೆಸಲು ಪ್ರೇರೇಪಿಸುತ್ತದೆ.

ಯುವ ಸಬಲೀಕರಣದ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ದೃಢ ನಂಬಿಕೆಯುಳ್ಳ ರವಿ ದಂಡಿನ್, ದಶಕಗಳಿಂದ ಕೆಎಸ್ಎಸ್ ಮತ್ತು ಎಬಿವಿಪಿ (ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್) ನಡುವೆ ನಿಕಟ ಸಂಬಂಧವನ್ನು ಉಳಿಸಿಕೊಂಡಿದ್ದಾರೆ . ಈ ಸಂಪರ್ಕಗಳು ಸಾವಿರಾರು ವಿದ್ಯಾರ್ಥಿಗಳಲ್ಲಿ ನಾಯಕತ್ವ, ನಾಗರಿಕ ಬದ್ಧತೆ ಮತ್ತು ರಾಷ್ಟ್ರೀಯ ಹೆಮ್ಮೆಯನ್ನು ಬೆಳೆಸಿವೆ.

ಅವರ ಅಭಿಮಾನಿ ಬಳಗವು ಅವರ ಜನ್ಮದಿನಾಚರಣೆಯ ಪ್ರಯುಕ್ತ ರಕ್ತದಾನ ಶಿಬಿರ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಗಳ ಮೂಲಕ ಅವರ ಜನ್ಮದಿನಾಚರಣೆಯನ್ನು ಆಚರಣೆ ಮಾಡುತ್ತಿರುವುದು ಅವರ ಆದರ್ಶಕ್ಕೆ ಸಾಕ್ಷಿಯಾಗಿದೆ.

ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅವರು ಭವಿಷ್ಯದ ಜನನಾಯಕ ಹೊರಹೊಮ್ಮಲಿ ಎಂದು ಅವರ ಅಭಿಮಾನಿ ಬಳಗ ಅಪಾರ ಪ್ರೀತಿಯಿಂದ ಶುಭ ಹಾರೈಸಿದ್ದಾರೆ.

ಲೇಖನ :ಮುತ್ತು ಗೋಸಲ


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!