ಜಿಲ್ಲಾ ಸುದ್ದಿ

ಗದಗ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ರಾಜು ಹೆಬ್ಬಳ್ಳಿ ಪುನರಾಯ್ಕೆ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾ ಘಟಕದ ಚುನಾವಣೆ.ಜಿಲ್ಲಾಧ್ಯಕ್ಷರಾಗಿ ರಾಜು ಎಂ. ಹೆಬ್ಬಳ್ಳಿ ಪುನರಾಯ್ಕೆ

Share News

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾ ಘಟಕದ ಚುನಾವಣೆ.
ಜಿಲ್ಲಾಧ್ಯಕ್ಷರಾಗಿ ರಾಜು ಎಂ. ಹೆಬ್ಬಳ್ಳಿ ಪುನರಾಯ್ಕೆ.

ಗದಗ:ಸತ್ಯಮಿಥ್ಯ (ನ-11).

ಪತ್ರಕರ್ತರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಗದಗ ಜಿಲ್ಲಾ ಘಟಕದ ೨೦೨೫-೨೦೨೮ ನೇ ಸಾಲಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ರಾಜು ಎಂ ಹೆಬ್ಬಳ್ಳಿ ಅವರು ನೂತನ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲಾ ಖಜಾಂಚಿ ಸ್ಥಾನಕ್ಕೆ ರಾಮಣ್ಣ ವಗ್ಗಿ (ಅವಿರೋಧ), ಪ್ರಧಾನ ಕಾರ್ಯದರ್ಶಿಯಾಗಿ ಶರಣು ದೊಡ್ಡೂರ, ರಾಜ್ಯ ಕಾರ್ಯಕಾರಿಣಿ ಸ್ಥಾನಕ್ಕೆ ಅರುಣಕುಮಾರ ಹಿರೇಮಠ ಆಯ್ಕೆಯಾಗಿದ್ದಾರೆ.

* ರಾಜ್ಯ ಕಾರ್ಯಕಾರಿಣಿ ಸ್ಥಾನಕ್ಕೆ ಅರುಣಕುಮಾರ ಹಿರೇಮಠ ಆಯ್ಕೆ

ಜಿಲ್ಲಾ ಕಾರ್ಯದರ್ಶಿಯಾಗಿ ಬನೇಶ ಕುಲಕರ್ಣಿ, ಚಂದ್ರಶೇಖರ ಕುಸ್ಲಾಪುರ, ಸಂಗಪ್ಪ ವ್ಯಾಪಾರಿ, ಜಿಲ್ಲಾ ಉಪಾಧ್ಯಕ್ಷರಾಗಿ ಪ್ರಭುಸ್ವಾಮಿ ಅರವಟಗಿಮಠ, ಅನೀಲ ತೆಂಬದಮನಿ, ವಿರೂಪಾಕ್ಷಪ್ಪ ಕಣವಿ ಚುನಾಯಿತರಾಗಿದ್ದಾರೆ.

* ಪ್ರಧಾನ ಕಾರ್ಯದರ್ಶಿಯಾಗಿ ಶರಣು ದೊಡ್ಡೂರ,

* ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿ ರುದ್ರಗೌಡ ಪಾಟೀಲ್ ಆಯ್ಕೆ

ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿ ಆನಂದಯ್ಯ ವಿರಕ್ತಮಠ, ರುದ್ರಗೌಡ ಪಾಟೀಲ, ಮಹಾಲಿಂಗಯ್ಯ ಹಿರೇಮಠ, ಸಂತೋಷಕುಮಾರ ಮುರಡಿ, ವೆಂಕಟೇಶ ಇಮರಾಪುರ, ಗಿರೀಶ ಕಮ್ಮಾರ, ಮಂಜುನಾಥ ಪತ್ತಾರ, ಮಲ್ಲಪ್ಪ ಕಳಸಾಪುರ, ಸಂತೋಷ ಕೊಣ್ಣೂರ, ಶಿವಕುಮಾರ ಶಶಿಮಠ, ನಿಂಗಪ್ಪ ಬೇವಿನಕಟ್ಟಿ, ಅಜಿತಕುಮಾರ ಹೊಂಬಾಳಿ, ಮೌನೇಶ್ವರ ಬಡಿಗೇರ, ಆದರ್ಶ ಕುಲಕರ್ಣಿ, ಯಲ್ಲಪ್ಪ ತಳವಾರ ಚುನಾಯಿತರಾಗಿದ್ದಾರೆ ಎಂದು ಕಾನಿಪ ಗದಗ ಜಿಲ್ಲಾ ಘಟಕದ ಜಿಲ್ಲಾ ಚುನಾವಣಾ ಅಧಿಕಾರಿ ಶಿವಾನಂದ ಹಿರೇಮಠ ತಿಳಿಸಿದ್ದಾರೆ.

ಯಾರಿಗೆ ಎಷ್ಟು ಮತ?

ಜಿಲ್ಲಾ ಅಧ್ಯಕ್ಷ

ರಾಜು ಎಂ. ಹೆಬ್ಬಳ್ಳಿ ೯೧,

ಪ್ರಧಾನ ಕಾರ್ಯದರ್ಶಿ

ಶರಣು ದೊಡ್ಡೂರ ೧೧೧

ರಾಜ್ಯ ಕಾರ್ಯಕಾರಿಣಿ ಸದಸ್ಯ

ಅರುಣಕುಮಾರ ಹಿರೇಮಠ ೧೦೬

ಜಿಲ್ಲಾ ಕಾರ್ಯದರ್ಶಿಗಳಾದ

ಬನ್ನೇಶ ಕುಲಕರ್ಣಿ ೧೦೪, ಚಂದ್ರಶೇಖರ ಕುಸ್ಲಾಪುರ ೯೨, ಸಂಗಪ್ಪ ವ್ಯಾಪಾರಿ ೮೭,

ಉಪಾಧ್ಯಕ್ಷ ಸ್ಥಾನ

ಪ್ರಭುಸ್ವಾಮಿ ಅರವಟಗಿಮಠ ೧೩೫, ವೀರುಪಾಕ್ಷಪ್ಪ ಕಣವಿ ೧೨೯, ಅನೀಲ ತೆಂಬದಮನಿ ೧೨೧,

ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿ.

ಆನಂದಯ್ಯ ವಿರಕ್ತಮಠ ೧೨೫, ರುದ್ರಗೌಡ ಪಾಟೀಲ ೧೨೨, ಮಹಾಲಿಂಗಯ್ಯ ಹಿರೇಮಠ ೧೧೮, ಸಂತೋಷಕುಮಾರ ಮುರಡಿ ೧೧೬, ವೆಂಕಟೇಶ ಇಮರಾಪೂರ ೧೧೦, ಗಿರೀಶ ಕಮ್ಮಾರ ೧೦೭, ಮಂಜುನಾಥ ಪತ್ತಾರ ೧೦೭, ಮಲ್ಲಪ್ಪ ಕಳಸಾಪೂರ ೧೦೫, ಸಂತೋಷ ಕೊಣ್ಣೂರು ೧೦೪, ಶಿವಕುಮಾರ ಶಶಿಮಠ ೧೦೪, ನಿಂಗಪ್ಪ ಬೇವಿನಕಟ್ಟಿ ೯೭, ಅಜಿತ್ ಕುಮಾರ ಹೊಂಬಾಳಿ ೯೫, ಮೌನೇಶ್ವರ ಬಡಿಗೇರ ೯೫, ಆದರ್ಶ ಕುಲಕರ್ಣಿ ೯೦, ಯಲ್ಲಪ್ಪ ತಳವಾರ ೮೬ ಮತಗಳನ್ನು ಪಡೆ ಆಯ್ಕೆಯಾಗಿದ್ದಾರೆ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!