ಜಿಲ್ಲಾ ಸುದ್ದಿ

ಬಿಹಾರ ಗೆಲುವು ದೇಶದ ಸುಭದ್ರ ಆಡಳಿತಕ್ಕೆ ಸಾಕ್ಷಿ – ಉಮೇಶ ಪಾಟೀಲ.

Share News

ಬಿಹಾರ ಗೆಲುವು ದೇಶದ ಸುಭದ್ರ ಆಡಳಿತಕ್ಕೆ ಸಾಕ್ಷಿ – ಉಮೇಶ ಪಾಟೀಲ.

ಗಜೇಂದ್ರಗಡ-ಸತ್ಯಮಿಥ್ಯ (ನ-16).

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರ ದೃಢ ನಿಶ್ಚಯ, ದೂರದೃಷ್ಠಿ ನಾಯಕತ್ವ ಮತ್ತು ಅಭಿವೃದ್ಧಿ ಪೂರಕ ನಾಯಕತ್ವದಲ್ಲಿ ಎನ್ ಡಿ ಎ ಮೈತ್ರಿಕೂಟ ಭರ್ಜರಿ ಜಯ ಸಾಧಿಸಿರುವುದು ದೇಶದ ಜನತೆ ನರೇಂದ್ರ ಮೋದಿಜಿಯವರ ಮೇಲಿನ ನಂಬಿಕೆಯ ಸಂಕೇತವಾಗಿದೆ.

ಈ ಗೆಲುವು ಜನಾಭಿವೃದ್ಧಿಗೆ , ಉತ್ತಮ ಆಡಳಿತಕ್ಕೆ, ಭದ್ರತೆಗೆ ಮತ್ತು ಜನಪರ ಕಾರ್ಯಕ್ರಮಗಳಿಗೆ ಕೈಜೋಡಿಸಿರುವ ದೃಢ ನಿರ್ಧಾರಕ್ಕೆ ಸಾಕ್ಷಿಯಾಗಿದೆ. ಬಿಹಾರದ ಜನರು “ಸಬ್ ಕಾ ಸಾಥ್ – ಸಬ್ ಕಾ ವಿಶ್ವಾಸ್” ಎಂಬ ಮಂತ್ರಕ್ಕೆ ಮತ್ತೊಮ್ಮೆ ಮಹತ್ವದ ಮನ್ನಣೆ ನೀಡಿದ್ದಾರೆ.

ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ರಾಷ್ಟ್ರ ಇಂದು ನೂತನ ದಿಕ್ಕಿನಲ್ಲಿ ಬೆಳೆಯುತ್ತಿದೆ. ಬಿಹಾರದಲ್ಲಿ ಎನ್ ಡಿ ಎ ಮೈತ್ರಿಕೂಟವು ಗಳಿಸಿದ ಜಯ, ಅಭಿವೃದ್ಧಿಯ ರಾಜಕೀಯವನ್ನು ಜನತೆ ಮತ್ತೊಮ್ಮೆ ಆರಿಸಿಕೊಂಡಿದ್ದಾರೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿ. ಜನಾಂಗದ ನಂಬಿಕೆಯನ್ನು ಗೌರವಿಸುವ ಈ ಇತಿಹಾಸಿಕ ಕ್ಷಣದಲ್ಲಿ ಎನ್ ಡಿ ಎ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ.

ಈ ಗೆಲುವು ಯುವಕರಿಗೆ ಹೊಸ ಉತ್ಸಾಹ, ರೈತರಿಗೆ ಹೊಸ ಭರವಸೆ ಮತ್ತು ದೇಶದ ಎಲ್ಲ ವರ್ಗಗಳಿಗೂ ನವಚೈತನ್ಯ ನೀಡಲಿದೆ ಎಂದು ಬಿಜೆಪಿ ಮುಖಂಡ ಮತ್ತು ಚನ್ನು ಪಾಟೀಲ ಪೌಂಡೇಶನ್ ಸಂಸ್ಥಾಪಕ ಉಮೇಶ ಚನ್ನು ಪಾಟೀಲ್ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ವರದಿ : ಸುರೇಶ ಬಂಡಾರಿ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!