ಆಸ್ತಿ ಬರೆಯಿಸಿಕೊಂಡು ಹಿರಿಯರನ್ನು ಪೋಷಣೆ ಮಾಡದಿದ್ದರೆ. ಮಕ್ಕಳಿಂದ ಮರಳಿ ಆಸ್ತಿ ಪಡೆಯಬಹುದು – ನ್ಯಾಯಮೂರ್ತಿ ಹುಲಗಪ್ಪ.ಡಿ.

ಆಸ್ತಿ ಬರೆಯಿಸಿಕೊಂಡು ಹಿರಿಯರನ್ನು ಪೋಷಣೆ ಮಾಡದಿದ್ದರೆ. ಮಕ್ಕಳಿಂದ ಮರಳಿ ಆಸ್ತಿ ಪಡೆಯಬಹುದು – ನ್ಯಾಯಮೂರ್ತಿ ಹುಲಗಪ್ಪ.ಡಿ.

ಗಜೇಂದ್ರಗಡ : ಸತ್ಯಮಿಥ್ಯ (ನ -17)
ಹಿರಿಯ ನಾಗರಿಕರು ತಮ್ಮ ಆಸ್ತಿಯನ್ನು ಮಕ್ಕಳಿಗೆ ವರ್ಗಾಯಿಸಿದ ನಂತರ.ಅವರನ್ನು ಪಾಲನೆ ಪೋಷಣೆ ಮಾಡುವದು ಮಕ್ಕಳ ಕರ್ತವ್ಯ. ಆ ಒಂದು ಜವಾಬ್ದಾರಿಯನ್ನು ಮಕ್ಕಳು ಪಾಲಿಸದೇ ಹಿರಿಯರನ್ನು ಕೀಳಾಗಿ ಕಾಣುತ್ತಿದ್ದರೆ ವರ್ಗಾವಣೆಯಾದ ಆಸ್ತಿಯನ್ನು ಮರಳಿ ಪಡೆಯಬಹುದು ಎಂದು ಹುಲಗಪ್ಪ.ಡಿ. ನುಡಿದರು.
ಅವರು ಸೋಮವಾರ ಪಟ್ಟಣದ ಬಿ ಎಸ್ ಎಸ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಕಂದಾಯ ಇಲಾಖೆ ಮತ್ತು ತಾಲೂಕಾ ಕಾನೂನು ಸೇವೆಗಳ ಸಮಿತಿ ಸೇರಿದಂತೆ ಅನೇಕ ಇಲಾಖೆಗಳ ಸಹಯೋಗದಲ್ಲಿ ನಡೆದ ಪೋಷಕರು ಮತ್ತು ಹಿರಿಯ ನಾಗರಿಕರ ಕಲ್ಯಾಣ ಕಾಯ್ದೆ 2007 ರ ಕುರಿತು ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿ ಎಮ್.ಎಸ್. ಹಡಪದ ಮಾತನಾಡಿ. ತಂದೆ ತಾಯಿಗಳು ತಮ್ಮ ಜೀವನವನ್ನೇ ಮಕ್ಕಳ ಏಳಿಗೆಗೆ ಮುಡಿಪಾಗಿಟ್ಟು ತಾವು ಗಳಿಸಿದ ಆಸ್ತಿಯನ್ನು ಮಕ್ಕಳಿಗೆ ವರ್ಗಯಿಸುತ್ತಾರೆ. ಆದರೆ ಆಸ್ತಿ ಪಡೆದುಕೊಂಡ ಮಕ್ಕಳು ತಮ್ಮ ಪಾಲಕರ ಪಾಲನೆ ಪೋಷಣೆ ಮಾಡದೇ ಅವರನ್ನು ಅತಂತ್ರ ಪರಿಸ್ಥಿತಿ ತಳ್ಳುತ್ತಿರು ಪ್ರಕರಣಗಳು ಹೆಚ್ಚುತ್ತಿವೆ. ಅಂತಹ ಅತಂತ್ರ ಸ್ಥಿತಿಯಲ್ಲಿರುವ ಪಾಲಕರು ಹಿರಿಯ ನಾಗರಿಕರ ಪೋಷಿಸುವ ಮತ್ತು ಪಾಲನೆಮಾಡುವ 2007 (Maintenance and Welfare of Parents and Senior Citizens Act, 2007) ಎಂಬ ಕಾನೂನಿನ ಅಡಿಯಲ್ಲಿ ದಾವೆ ಹುಡಿ ತಮ್ಮ ಆಸ್ತಿಯನ್ನು ಮರಳಿ ಪಡೆಯಬಹುದು. ನಿಮ್ಮ ಸುತ್ತಮುತ್ತ ಯಾರಾದರೂ ತೊಂದರೆ ಅನುಭವಿಸುತ್ತಿರುವ ಪಾಲಕರಿದ್ದರೆ ಅವರಿಗೆ ಈ ಕಾಯ್ದೆ ಬಗ್ಗೆ ತಿಳುವಳಿಕೆ ನೀಡಿ ಎಂದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ, ಪಿಎಸ್ಐ ಡಿ. ಪ್ರಕಾಶ, ಗಜೇಂದ್ರಗಡ ಪುರಸಭೆ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ನರೇಗಲ್ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಹೇಶ ನೀಡಶೇಸಿ ಸೇರಿದಂತೆ ಅನೇಕರು ಇದ್ದರು.
ವರದಿ: ಸುರೇಶ ಬಂಡಾರಿ.




