
ಕಲಿಕೆಯಲ್ಲಿ ವ್ಯಕ್ತಿತ್ವದ ಬೆಳವಣಿಗೆ ಮಹತ್ವದ ಪಾತ್ರ ವಹಿಸುತ್ತದೆ: ಸಿಟಿಓ ದಿನೇಶ ಶರ್ಮಾ

ಸಮೀರವಾಡಿಯಲ್ಲಿ ಸೈದಪೂರ ಕ್ಲಸ್ಟರ ಮಟ್ಟದ ಪ್ರತಿಭಾ ಕಾರಂಜಿ 2025-26
ಸಮೀರವಾಡಿ:ಸತ್ಯಮಿಥ್ಯ (ನ-19).
ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಪಠ್ಯ ಕಲಿಕೆ ಮಾತ್ರ ಸಾಲದು, ಸಮಾಜದಲ್ಲಿನ ಯಾವುದೇ ಪರಿಸ್ಥಿತಿಯನ್ನು ಎದುರಿಸುವ ವ್ಯಕ್ತಿತ್ವದ ಬೆಳವಣಿಗೆಯ ಜೊತೆಗೆ ಮಗುವಿನ ಅಂತಃಶಕ್ತಿಯ ಅಭಿವ್ಯಕ್ತಿಗೆ ಅವಕಾಶ ಒದಗಿಸಿ ಸೋಲನ್ನು ಸ್ವೀಕರಿಸುವ ಗುಣ ಬೆಳೆಸುವಂತ ಕಾರ್ಯಕ್ರಮ ಪ್ರತಿಭಾ ಕಾರಂಜಿ ಎಂದು ಗೋದಾವರಿ ಸಕ್ಕರೆ ಕಾರ್ಖಾನೆಯ ಸಿಟಿಓ ದಿನೇಶ ಶರ್ಮಾ ಹೇಳಿದರು.

ಅವರು ಸಮೀರವಾಡಿಯ ಸೋಮೈಯಾ ಶಿಶು ನಿಕೇತನ ಪ್ರಾಥಮಿಕ ಶಾಲೆಯಲ್ಲಿ ನ.17 ಸೋಮವಾರದಂದು ನಡೆದ ಸನ್ 2025-26 ನೇ ಸಾಲಿನ ಸೈದಾಪುರ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ಪರ್ಧೆ ಅನ್ನುವುದು ಸೋಲು ಗೆಲುವಿನ ಸೋಪಾನಾ ಆಗಿರುತ್ತವೆ, ಇದು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯು ಆತ್ಮವಿಶ್ವಾಸವನ್ನು ಬದ್ರಗೊಳಿಸುತ್ತದೆ. ಮಕ್ಕಳು ದೇಶವನ್ನು ಪ್ರತಿನಿಧಿಸುವ ಮಟ್ಟಕ್ಕೆ ಈ ಕಾರ್ಯಕ್ರಮಗಳು ಬುನಾದಿಯಾಗಲಿವೆ, ಇಲಾಖೆಯ ಈ ಮಹೋನ್ನತ ಕಾರ್ಯದ ಪೂರ್ಣ ಫಲ ಮಕ್ಕಳು ಪಡೆಯಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದರು.
ಬಳಿಕ ಸೈದಾಪೂರ ಗ್ರಾಮ ಪಂಚಾಯತಿಯ ಅಧ್ಯಕ್ಷ ಮಹಾಲಿಗಪ್ಪ ಸನದಿ ಮಾತನಾಡುತ್ತಾ, ಹಿಂದಿನ ಕಾಲದ ನಮ್ಮ ಬಾಲ್ಯದಲ್ಲಿ ಇಂದಿನ ದಿನಗಳ ಹಾಗೆ ಯಾವುದೇ ಸೌಲಭ್ಯಗಳೂ ನಮಗಿರಲಿಲ್ಲ ಆದರೆ ಇಂದಿನ ಮಕ್ಕಳು ಅದೃಷ್ಟವಂತರು. ಇಲಾಖೆ, ಸಮುದಾಯ, ಸಂಘ ಸಂಸ್ಥೆಗಳು ಇಂದು ಮಕ್ಕಳ ಶ್ರೇಯೋಭಿವೃದ್ಧಿಗೆ ದುಡಿಯುತ್ತಿರುವುದು ಸಂತಸ, ಈ ಭಾಗದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಸೋಮಯ್ಯಾ ಸಕ್ಕರೆ ಕಾರ್ಖಾನೆಯ ಪಾತ್ರ ತುಂಬಾ ದೊಡ್ಡದು. ಈ ಕಾರ್ಖಾನೆಯ ಅಭಿವೃದ್ಧಿಗೆ ಮತ್ತು ಅವರ ಕಾರ್ಯಗಳಿಗೆ ತಾವು ಸದಾ ಕೈಜೋಡಿಸುವುದಾಗಿ ಹೇಳಿದರು.
ಸಿಆರ್ ಪಿ ಬಿ.ಕೆ.ಸಬರದ ಪ್ರಾಸ್ತಾವಿಕವಾಗಿ ಮಾತನಾಡಿದರು.ದೀಪ ಬೇಳಗಿಸುವ ಮೂಲಕ ಮಹಾಲಿಂಗಪ್ಪ ಸನದಿ ಹಾಗೂ ದಿನೇಶ ಶರ್ಮಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯೆ ರೂಪಾ ಶಿಂಧೆ, ಕವಿತಾ ಕಾಂಬಳೆ, ಶಾಲೆಯ ಸಂಯೋಜಕ ಡಿ.ಎಚ್.ನದಾಫ್, ಮುಖ್ಯೋಪಾಧ್ಯಾಯರಾದ ವಿವೇಕಾನಂದ ಎಚ್. ಭಜಂತ್ರಿ, ಬಿ.ಡಿ.ನ್ಯಾಮಗೌಡ, ಪತ್ರಕರ್ತ ನಾರನಗೌಡ ಉತ್ತಂಗಿ ಇತರರಿದ್ದರು.
ಕಾವೇರಿ ಚವ್ಹಾಣ ಪ್ರಾರ್ಥಿಸಿ, ಶಿಕ್ಷಕ ಸೋಮು ಕನಕರಡ್ಡಿ ಹಾಗೂ ಸಂತೋಷ ಮುಗಳಿ ನಿರೂಪಿಸಿ, ಶಿಕ್ಷಕಿ ಶಶಿಕಲಾ ಮೋಜನಿದಾರ ವಂದಿಸಿದರು. ನಂತರ ಸೈದಾಪೂರ ಕ್ಲಸ್ಟರಿನ ಎಲ್ಲ ಪ್ರಾಥಮಿಕ ಶಾಲೆ ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಗಮನ ಸೆಳೆದರು.
ವರದಿ :ಸಂತೋಷ ಮುಗಳಿ




