
ಸಾಂಪ್ರದಾಯಕ ಇತಿಹಾಸಕ್ಕೆ ಮೆರಗು ತಂದ ಸಿಡಿ ಉತ್ಸವ.
ನೋಡುಗರ ಕಣ್ಮನ ಸೆಳೆದ ಜೋಗತಿ ಜೋಗಮ್ಮರ ಕುಣಿತ.
ಗಜೇಂದ್ರಗಡ /ಇಟಗಿ : ಸತ್ಯಮಿಥ್ಯ (ಆ-19).
ರೋಣ ತಾಲೂಕು ಇಟಗಿ ಗ್ರಾಮದಲ್ಲಿ ಮೂರು ವರ್ಷಕ್ಕೊಮ್ಮೆ ಜರಗುವ ಸಿಡಿ ಉತ್ಸವ ತನ್ನದೇ ಆದ ಸಾಂಪ್ರದಾಯಕ ಇತಿಹಾಸವನ್ನು ಹೊಂದಿದ್ದು ಗ್ರಾಮದ ಆರಾಧ್ಯ ದೇವಿಯಾದ ಧರ್ಮದೇವತೆ ಶ್ರೀ ಭೀಮಾಂಬಿಕೆ ದೇವಿಯ ಜೀವಿತಾವಧಿಯಿಂದಲೂ ಇಂದಿನವರೆಗೂ ಮೂರು ವರ್ಷಕ್ಕೊಮ್ಮೆ ಸಿಡಿ ಉತ್ಸವ ವಿಜೃಂಭಣೆಯಿಂದ ಜರುಗುತ್ತಿದೆ.
ಅದರಂತೆ ಇಂದು ಸಾಂಪ್ರದಾಯಕ ಇತಿಹಾಸಕ್ಕೆ ಗ್ರಾಮದಲ್ಲಿ ಸಿಡಿ ಉತ್ಸವವು ನೋಡುಗರ ಕಣ್ಮನ ಸೆಳೆಯುವ ರೀತಿಯಲ್ಲಿ ತಲೆ ಮೇಲೆ ತುಂಬಿದ ಕೊಡ ಹೊತ್ತು ಜೋಗತಿ ಜೋಗಮ್ಮರ ವೇಶದಲ್ಲಿ ಯುವರ ಕುಣಿತವು ವಿಜೃಂಭಣೆಯಿಂದ ಜರುಗಿತು.
ಸಿಡಿ ಉತ್ಸವವು ಧರ್ಮರ ಮಠದಿಂದ ಪ್ರಾರಂಭಿಸಿ ಸಿಡಿ ಕೊಡ ಹೊತ್ತ ಯುವಕರು ಪ್ರಥಮ ಅಕ್ಕಸಾಲಿಗರ ಮನೆಗೆ ಮಡಿಯಿಂದ ತೆರಳಿ ಸಿಡಿಕೊಡಕ್ಕೆ ಕಟ್ಟುವ ಯಲ್ಲಮ್ಮನ ಮೂರ್ತಿ ಕಟ್ಟಿ ದೇಸಾಯಿಯವರ ಮನೆಗೆ ಹೋಗಿ ಶೃಂಗರಿಸಿ ದೇಸಾಯಿ ಕುಟುಂಬದವರು ಪೂಜೆ ಸಲ್ಲಿಸಿ ಪ್ರಾರಂಭಿಸಲಾಯಿತು.
ಸಿಡಿ ಕೊಡ ಹೊತ್ತು ಯುವಕರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೋಜು, ಮಜಲುಗಳಿಂದ ನಾನಾ ಕಸರತ್ತುಗಳಿಂದ ಸಿಡಿ ಉತ್ಸವವನ್ನು ನೋಡಲು ಬಂದ ಜನರು ಮೆಚ್ಚುವ ರೀತಿಯಲ್ಲಿ ನೃತ್ಯ ಮಾಡಿದರು
ಅಲ್ಲದೆ ಸಿಡಿ ಉತ್ಸವದಲ್ಲಿ ಹೆಣ್ಣು ಜೋಗತಿ ವೇಶ ಧರಿಸಿದ ಯುವಕರು ತಲೆ ಮೇಲೆ ನೀರು ತುಂಬಿದ ಕೊಡ ಹೊತ್ತು ಚೌಡಕಿ, ತುಂತನಿ ತಾಳಕ್ಕೆ ತಕ್ಕಂತೆ ರೇಣುಕಾ ಯಲ್ಲಮ್ಮನ ಭಕ್ತಿಗೀತೆಗಳಿಗೆ ಕುಣಿಯುತ್ತಾ ನೆರೆದ ಭಕ್ತ ಸಮೂಹ ನೆಲದ ಮೇಲೆ 100ರಿಂದ 500ವರೆಗೆ ಇಟ್ಟ ನೋಟು ಬಾಯಿಯಿಂದ ತಗೆಯುವಾಗ ಯಾರು ಸಹಾಯ ಮಾಡುದೆ ತಲೆ ಮೇಲಿನ ಕೊಡ ಮುಟ್ಟದೆ ಹಣ ತಗೆದುಕೊಳ್ಳುವ ಸಾಹಸ ಪ್ರದರ್ಶನಗಳು ಜರುಗಿದವು.
ಸಿಡಿ ಉತ್ಸವದಲ್ಲಿ ಕೊಡ ಹೊತ್ತ ಜೋಗತಿ ಜೋಗಮ್ಮನ ವೇಷದಲ್ಲಿ ಯುವಕರು ಕುಣಿತ ಹಾಗೂ ಸಾಹಸ ಪ್ರದರ್ಶನಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.
ಸಿಡಿಯಾಟದಲ್ಲಿ ಹೆಣ್ಣು ಜೋಗತಿಯರ ವೇಷದಲ್ಲಿ ಮುತ್ತಪ್ಪ ಹದ್ದಣ್ಣನವರ, ಮಂಜುನಾಥ ಪೂಜಾರ, ಸಚಿನ ಜಡೆದೇಲಿ,ಧರ್ಮಪ್ಪ ಜಡೆದೇಲಿ, ಸಂತೋಷ ಹಂಡಿ, ಸಚಿನ್ ಹಂಡಿ,ಮಂಜುನಾಥ ಜಡೆದೇಲಿ, ಮಹಾಂತೇಶ ನಾಗರಾಳ, ಭೀಮಪ್ಪ ವಡಗೇರಿ, ಧರ್ಮಪ್ಪ ನಾಗರಾಳ, ಭರತ ಭೋವಿ, ಪ್ರವೀಣ್ ಕಿಲ್ಲೆದ, ಭೀಮಪ್ಪ ಗೋಸಲ, ಮುತ್ತಪ್ಪ ಗುರಿಗಾರ, ಶಿವಕುಮಾರ್ ಜಡೆದೇಲಿ, ಸಂಗನಗೌಡ ಪಾಟೀಲ, ಧರ್ಮಪ್ಪ ಜಡೆದೇಲಿ ಮಹೇಶ್ ಹುದಾರ ಮುತ್ತಪ್ಪ ಜಡೆದೇಲಿ,ಚಂದ್ರ ಜಡೆದೇಲಿ, ನಿರ್ವಹಿಸಿದರು
ಗಂಡು ಜೋಗಪ್ಪನ ವೇಷದಲ್ಲಿ ನಾಗರಾಜ ಧರ್ಮರಮಠ,ನಾಗಪ್ಪಜ್ಜ ಧರ್ಮರಮಠ,ಕಾಳಿಂಗಪ್ಪಜ್ಜ ಧರ್ಮರ ಹರಿಶ್ಚಂದ್ರಪ್ಪ ಧರ್ಮರ ನೀಲಪ್ಪ ಮಾಸ್ತರ ಜಡದೇಲಿ ಪ್ರಕಾಶ್ ಬಡಿಗೇರ ಶರಣಪ್ಪ ಜಡದೇಲಿ ಲಾಡಸಾಬ ಪಿಂಜಾರ ಧರ್ಮಪ್ಪ ಓಲಿ,ಸಂಗಪ್ಪ ಮಡಿವಾಳರ,ಹೊನ್ನಪ್ಪ ಜಡೆದೇಲಿ ಚಂದ್ರಪ್ಪ ಪಲ್ಲೇದ, ನಿರ್ವಹಿಸಿದರು
ಪಂಜಿನ ಜೋಗಪ್ಪಗಳ ವೇಷದಲ್ಲಿ: ಅರ್ಜುನಪ್ಪ ಕಿಲ್ಲೇದ,ವೀರಪ್ಪ ತೆಗ್ಗಿನಕೇರಿ, ನಿರ್ವಹಿಸುತ್ತಾರೆ.
ಚೌರಬೀಸುವವರು:ಬಾಳಪ್ಪ ಭೋವಿ,ಶರಣಪ್ಪ ಮಳಗಿ,ನವೀನ ಮಳಗಿ ಬೀಮಪ್ಪ ಹುದ್ದಾರ, ನಿರ್ವಹಿಸಿದರು.
ಸಿಡಿ ಉತ್ಸವ ವಿಜೃಂಭಣೆಯಿಂದ ಜರಗುವಂತೆ ಮಾಡಿದ ಶೇಕಪ್ಪ ಅವಾರಿ ಶಿವಲಿಂಗಪ್ಪ ಹುದ್ದಾರ,ಬಸವರಾಜ ಹುದ್ದಾರ, ಮೈಲಾರಪ್ಪ ಜಡದೇಲಿ ಶರಣಪ್ಪ ತಳವಾರ ಶಿವರಾಜ ಹುದ್ದಾರ ಇಸ್ಮಯಿಲ್ ಸಾಬ ಗಣಿ ಆನಂದಪ್ಪ ಬಿಳೇಕಲ ಬಸವರಾಜ ತೊಂಡಿಹಾಳ ಮಲ್ಲಿಕಾರ್ಜುನ ಕೋಮಾರ ಬಸವರಾಜ ತಗ್ಗಿನಕೇರಿ ಶಂಕರ ರೆಡ್ಡೇರ ಬಸವರಾಜ ಹುದ್ದಾರ ಪ್ರಭುಗೌಡ ಗೌಡ್ರ ಮುತ್ತಪ್ಪ ಕೋರಿ ಮಂಜುನಾಥ್ ಕೋರಿ ರಮೇಶ್ ಪೂಜಾರ್ ಈರಯ್ಯ ವಸ್ತ್ರದ ದೇವೇಂದ್ರಪ್ಪ ಪಾಚಾಪುರ ಚಂದುಸಾಬ ಗಣಿ ಶ್ರೀ ಇಟಗಿ ಭೀಮಾಂಬಿಕಾ ದೇವಿ ಸೇವಾ ಸಮಿತಿಯ ಸರ್ವ ಸದಸ್ಯರು ಹಾಗೂ ಇಟಗಿ ಗ್ರಾಮದ ಸಮಸ್ತ ಸದ್ಭಕ್ತ ಮಂಡಳಿ ಸಹಕಾರ ಮಾಡಿದರು
ಸಿಡಿಯಾಟ ಸಂಭ್ರಮದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಯಿಂದ ಜಿಲ್ಲೆಯ ವಿವಿಧ ತಾಲೂಕು ಹಳ್ಳಿಗಳಿಂದ ಹಾಗೂಮಹಾರಾಷ್ಟ್ರ,ಆಂಧ್ರಪ್ರದೇಶ,ತಮಿಳುನಾಡು,ಗೋವಾದಿಂದ ಭಕ್ತರು ಪಾಲ್ಗೊಳ್ಳಲಾಯಿತು.
ವರದಿ:ಮುತ್ತು ಗೋಸಲ.