ಜಿಲ್ಲಾ ಸುದ್ದಿ

ನಗರಸಭೆ ಎಇಇ ಹುಚ್ಚಪ್ಪ ಬಂಡಿವಡ್ಡರನಿಂದ ಜೀವ ಬೆದರಿಕೆ ಹಾಗೂ ಲಂಚಕ್ಕೆ ಬೇಡಿಕೆ ಆರೋಪ ದೂರು ದಾಖಲು.

Share News

ನಗರಸಭೆ ಎಇಇ ಹುಚ್ಚಪ್ಪ ಬಂಡಿವಡ್ಡರನಿಂದ ಜೀವ ಬೆದರಿಕೆ ಹಾಗೂ ಲಂಚಕ್ಕೆ ಬೇಡಿಕೆ ಆರೋಪ ದೂರು ದಾಖಲು.

 ಗದಗ:ಸತ್ಯಮಿಥ್ಯ ( ಆಗಸ್ಟ್ -22)

ಇತ್ತಿಚಿನ ದಿನಗಳಲ್ಲಿ ಸದಾ ಸುದ್ದಿಯಲ್ಲಿರುವ ಗದಗ-ಬೆಟಗೇರಿ ನಗರಸಭೆಯಲ್ಲಿ ನಕಲಿ ಠರಾವು, ಫೋರ್ಜರಿ ಸಹಿ ಮಾಡಿ ಆಸ್ತಿ ಲೀಜ್ ಮಾಡಿದ್ದ ಪ್ರಕರಣ ದಿನದಿಂದ ದಿನಕ್ಕೆ ಬಿಗಿಯಾಗುತ್ತಿದ್ದು, ಈ ನಡುವೆ ಇನ್ನೊಂದು ಪ್ರಕರಣ ಬೆಟಗೇರಿ-ಗದಗಯಲ್ಲಿ ಇನ್ನೊಂದು ದೂರು ದಾಖಲಾಗಿದೆ.

ಗದಗ-ಬೆಟಗೇರಿ ನಗರಸಭೆಯಲ್ಲಿ ಎಇಇ ಆಗಿರುವ ಹುಚ್ಚಪ್ಪ ಎಂ. ಬಂಡಿವಡ್ಡರ ಅವರು, ಗದಗ ನಗರದ ಡಿಸಿ ಮಿಲ್ ಹತ್ತಿರ ಇರುವ ತಳಗೇರಿ ಓಣಿಯ ನಿವಾಸಿಯಾದ ಪ್ರಕಾಶ ತಂದೆ ಅಗ್ನೆಪ್ಪ ಕಲ್ಮನಿ(ಎಸ್ಸಿ) ಇವರು ೨೦೦೯ ರಲ್ಲಿ ಕೈಗೊಂಡ ಸುಮಾರು ೧ ಲಕ್ಷ ೩೦ ಸಾವಿರ ಕಾಮಗಾರಿಗೆ ಹಣದ ಬೇಡಿಕೆ ಇಟ್ಟು, ಕೊಡದಿದ್ದಕ್ಕೆ ಜೀವ ಬೆದರಿಕೆಯ ಹಾಗೂ ಮಾರಣಾಂತಿಕ ಹಲ್ಲೆ ನಡೆಸಿ, ಕಾಮಗಾರಿ ಬಿಲ್ಲ ತಡೆ ಹಿಡಿದಿರುವ ಬಗ್ಗೆ 21-8-2024 ರಂದು ಪ್ರಕಾಶ ಕಲ್ಮನಿಯವರು ದೂರು ದಾಖಲಿಸಿದ್ದಾರೆ.

ಸದ್ದಿಲ್ಲದೆ ಖಾಸಗಿ ವ್ಯಕ್ತಿಗಳಿಗೆ ಲೀಜ್ ನೀಡುವ ಮೂಲಕ ಸರ್ಕಾರಿ ಆಸ್ತಿ ನುಂಗುವ ಪ್ಲಾನ್ ಅಂತ ಗದಗ-ಬೆಟಗೇರಿ ಅವಳಿ ನಗರದ ಜನರು ಮಾತಾಡ್ತಾಯಿದ್ದಾರೆ. ಬಿಜೆಪಿ ಭದ್ರಕೋಟೆಯಲ್ಲೇ ಅವಳಿ ನಗರದ ಜನರು ಬಿಜೆಪಿಗೆ ಛೀ.., ಥೂ ಎನ್ನುವ ಪರಿಸ್ಥಿತಿ ಬಂದಿದೆ . ಬಿಜೆಪಿ ನಗರಸಭೆ ಆಡಳಿತದ ಅಂದಿನ ಅಧ್ಯಕ್ಷೆ ಉಷಾ ದಾಸರ, ಸದಸ್ಯರಾದ ಅನಿಲ್ ಅಬ್ಬಿಗೇರಿ, ಗೂಳಪ್ಪ ಮೂಷಿಗೇರಿ ಅಂಡ್ ಗ್ಯಾಂಗ್ ನಗರಸಭೆ ಅಧಿಕೃತ ಠಾರಾವು ಬುಕ್ ನಲ್ಲಿ ಇಲ್ಲದಿದ್ರೂ ನಕಲಿ ಠರಾವು ಮಾಡಿ ಸಿಕ್ಕಾಕಿಕೊಂಡಿದ್ದು, ಈ ನಡುವೆ ಎಇಇ ಬಂಡಿವಡ್ಡರ ನ ದರ್ಪ ದಬ್ಬಾಳಿಕೆ ನಡುವಳಿಕೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ .

ನಕಲಿ ಠರಾವು ಅದರೊಂದಿಗೆ ಜೀವ ಬೆದರಿಕೆ ಇದು ನಗರಸಭೆ ಕರ್ಮಕಾಂಡ:ನಕಲಿ ಠರಾವು, ಪೌರಾಯುಕ್ತರ ಫೋರ್ಜರಿ ಸಹಿ ಮಾಡಿ ಬಿಜೆಪಿ ಆಡಳಿತ ನೂರಾರು ಕೋಟಿ ಆಸ್ತಿ ಖಾಸಗಿ ವ್ಯಕ್ತಿಗಳಿಗೆ ಲೀಜ್ ನೀಡಿ ಕೋಟ್ಯಾಂತರ ಲೂಟಿ ಮಾಡಿದೆ. ಈ ವಿಷಯ ಗೊತ್ತಾದ ಬಳಿಕ ಅಂದಿನ ಪ್ರಭಾರ ಪೌರಾಯುಕ್ತ ಪ್ರಶಾಂತ್ ವರಗಪ್ಪನವರ ಅಧ್ಯಕ್ಷೆ ಉಷಾ ದಾಸರ, ಸದಸ್ಯರಾದ ಅನಿಲ್ ಅಬ್ಬಿಗೇರಿ, ಗೂಳಪ್ಪ ಮುಷಿಗೇರಿ ಹಾಗೂ ವಿಜಯಲಕ್ಷ್ಮೀ ಶಿಗ್ಲಿಮಠ ಹಾಗೂ ಸೆಕ್ರೆಟರಿ ದಿ. ಕಾಟನ್ ಮಾರ್ಕೆಟ್ ವರ್ಕ್ ಓನರ್ಸ್, ಅಸೋಸಿಯೇಷನ್ ಗದಗ ಸಂಸ್ಥೆಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ. ಈ ವಿಷಯ ಅವಳಿ ನಗರದಲ್ಲಿ ಭಾರಿ ಸಂಚಲನ ಮೂಡಿಸಿತ್ತು.‌ ಈ ನಡುವೆ ಬುಧವಾರ ನಗರಸಭೆ ಎಇಇ ಹುಚ್ಚಪ್ಪ ಬಂಡಿವಡ್ಡರ ೨೦೦೯ ರಂದು ಕೈಗೊಂಡ ಸುಮಾರು ೧ ಲಕ್ಷ ೩೦ ಸಾವಿರ ರೂಪಾಯಿ ಯ ಗುತ್ತಿಗೆ ಆಧಾರದ ಕಾಮಗಾರಿ ನಡೆಸಿರುವ ಗದಗ ನಗರದ ತಳಗೇರಿ ಓಣಿಯ ನಿವಾಸಿಯಾದ ಪ್ರಕಾಶ ತಂದೆ ಅದ್ರಪ್ಪ ಕಲ್ಮನಿ(ಎಸ್ಸಿ) ಹತ್ತಾರು ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟು, ಪ್ರಾಮಾಣಿಕ ಕೆಲಸಕ್ಕೆ ಬಿಲ್ ಪಾವತಿ ಮಾಡಿ ಎಂದು ಅಂಗಲಾಚಿರುವುದಕ್ಕೆ ಜೀವ ಬೆದರಿಕೆ ಸಹಿತ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಪ್ರಕಾಶ ಅವರು ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…

ಗದಗ ನಗರಸಭೆಯಲ್ಲಿದೆ ಬ್ರಹ್ಮಾಂಡ ಭ್ರಷ್ಟಾಚಾರ:ಗದಗ ಬೆಟಗೇರಿ ನಗರಸಭೆಯಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ ಕೆದಕಿದಷ್ಟೂ ಬ್ರಹ್ಮಾಂಡವಾಗುತ್ತಿದೆ. ಕಾಮಗಾರಿಯಲ್ಲಿ ಪರ್ಸಂಟೇಜ್ ಪಡೆಯುವುದರ ಜತೆಗೆ ಕಟ್ಟಡ ಪರವಾನಗಿ, ಫಾಮ್ ನಂ 3 (ಕಂಪ್ಯೂಟರ್ ಉತಾರ), ನಿರಾಕ್ಷೇಪಣೆ ಪತ್ರ (ಎನ್‌ಒಸಿ), ಮಗ್ಗಗಳಿಗೆ ಪರವಾನಗಿ ಸೇರಿ ಮತ್ತಿತರ ಕೆಲಸ ಕಾರ್ಯಗಳಿಗೆ ಜನರು ಅಲೆದರೂ ಪ್ರಮಾಣಪತ್ರ ಸಿಗುತ್ತಿಲ್ಲ. ಆದರೆ, ಎಇಇ ಬಂಡಿವಡ್ಡರ ಅಂತ ಬ್ರಷ್ಟ ಅಧಿಕಾರಿಗಳಿಗೆ ಲಂಚ ಕೊಟ್ಟರೆ ಸಂಜೆ ವೇಳೆಗೆ ಕಾರ್ಯಸಿದ್ಧಿ.

೨೦೨೧ ರಲ್ಲಿ ಗೃಹಭಾಗ್ಯ ಯೋಜನೆಯಡಿ ಪೌರ ಕಾರ್ಮಿಕರ ಸಮುಚ್ಚಯ ನಿರ್ವಣಕ್ಕಾಗಿ ಜಮೀನಿಂದ ಮಣ್ಣನ್ನು ಹೊರಸಾಗಿಸುವ ಕಾಮಗಾರಿಯ ಬಿಲ್ ಪಾವತಿಸುವ ಕುರಿತು ಲಂಚದ ಬೇಡಿಕೆಯಿಟ್ಟು ಬಲೆಗೆ ಬಿದ್ದಿರುವ, ನಗರಸಭೆ ಸಹಾಯಕ ಇಂಜಿನಿಯರ್ ವರ್ಧಮಾನ ಹುದ್ದಾರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಇಂಜಿನಿಯರ್ ಅನಿಲಕುಮಾರ ಮುದ್ದಾ ಅವರನ್ನು ಎಸಿಬಿ ಪೊಲೀಸರು ಬಂಧಿಸಿ ನಗರದ ಸಬ್‌ಜೈಲ್‌ನಲ್ಲಿ ಇರಿಸಿದ್ದರು. ಗದಗ-ಬೆಟಗೇರಿ ನಗರಸಭೆಯಲ್ಲಿ ಹೇಳೋರೋ ಕೇಳೋರು ಇಲ್ಲದಂತಾಗಿದೆ. ಇಲ್ಲಿ ಅಧಿಕಾರಿಗಳು ಆಡಿದ್ದೇ ಆಟವಾಗಿದೆ. ೨೦೨೩ ರಲ್ಲಿ ಅಧಿಕಾರಿಗಳು, ಅಧ್ಯಕ್ಷರು, ಉಪಾಧ್ಯಕ್ಷರುಗಳಿಗೆ ಸರ್ಕಾರಿ ಕೆಲಸಗಳಿಗೆ ಕಾರ್ ಬಾಡಿಗೆ ಪಡೆಯಲು ಸರ್ಕಾರ ಸುತ್ತೋಲೆ ಹೊರಡಿಸಿದೆ. ನಿಯಮ ಪ್ರಕಾರ ಟೆಂಡರ್ ಕಾಲ್ ಮಾಡಬೇಕು. ಹಳದಿ ಬೋರ್ಡ್ ಕಾರನ್ನೇ ಬಾಡಿಗೆ ಪಡೆಯಬೇಕು. ಆದ್ರೆ, ಗದಗ ನಗರಸಭೆ ಹಿಂದಿನ ಆಯುಕ್ತರು ಸರ್ಕಾರದ ಎಲ್ಲ ನಿಯಮಗಳು ಗಾಳಿಗೆ ತೂರಿ ಕೋಟೆಷನ್ ಮೇಲೆ ಕಾರ್ ಬಾಡಿಗೆ ಪಡೆದು ಹಣ ಲೂಟಿ ಮಾಡಿದ್ದಾರೆ. ಹಳದಿ ಬೋರ್ಡ್ ಅಲ್ಲ ವೈಟ್ ಬೋರ್ಡ್ ಕಾರನ್ನೇ ಪಡೆದು ಸರ್ಕಾರದ ನಿಯಗಳನ್ನು ಗಾಳಿಗೆ ತೂರಿದ್ದಾರೆ. ಪ್ರತಿ ತಿಂಗಳು ಒಂದು ಕಾರ್ ಗೆ 40 ರಿಂದ 70 ಸಾವಿರದ ವರೆಗೂ ಖರ್ಚು ಹಾಕಿ ಕೆ ಕೆ ಟೂರ್ಸ್ ಅಂಡ್ ಟ್ರಾವೆಲ್ಸ್ ಹೆಸರಿನಲ್ಲಿ ಬಿಲ್ ಹಾಕಿದ್ದಾರೆ. ಇದು ಕೇವಲ ಆರೋಪ ಅಲ್ಲ. ನಿಯಮ ಉಲ್ಲಂಘಿಸಿ ಹಣ ಖರ್ಚು ಹಾಕಿದ್ದು, ದಾಖಲೆ ಸಮೇತ ಬಯಲಾಗಿದೆ.

ಇಂತಹ ಭ್ರಷ್ಟಾಚಾರ ಕೂಪ ಆಗಿರುವ ಗದಗ ನಗರಸಭೆ ಕೂಟದಲ್ಲಿ ಬುಧವಾರ ದಾಖಲಾಗಿರು ಎಇಇ ಬಂಡಿವಡ್ಡರ ಮೇಲಿನ ಆರೋಪ ನಿಜಕ್ಕೂ ನಾಗರಿಕರ ಸಮಾಜ ತೆಲೆತಗ್ಗಿಸುವಂತದ್ದು, ಭ್ರಷ್ಟಾಚಾರ ಸಹಿಸಲ್ಲ. ಅದಕ್ಕೆ ಕಾಂಗ್ರೆಸ್ ಸರ್ಕಾರದಲ್ಲಿ ಅವಕಾಶವಿಲ್ಲ ಅಂತ ಹೇಳ್ತಿರೋ ಸರ್ಕಾರದಲ್ಲೇ ಇಷ್ಟೊಂದು ಭ್ರಷ್ಟಾಚಾರ ಮಾಡಿ ಸರ್ಕಾರದ ಹಣ ಲೂಟಿ ಆಗ್ತಾಯಿದ್ರೂ ಅಧಿಕಾರಿಗಳ ವಿರುದ್ಧ ಜೀವ ಬೆದರಿಕೆ ಪ್ರಕರಣ ದಾಖಲಾಗಿದ್ರೂ ಸರ್ಕಾರ, ಜಿಲ್ಲಾಡಳಿತ ಮೌನವಾಗಿದೆ

ಭ್ರಷ್ಟಾಚಾರದೊಂದಿಗೆ ಜೀವ ಬೆದರಿಕೆಗೆ ಮುಂದಾಗಿರುವ ನಗರಸಭೆ ಅಧಿಕಾರಿಗಳ ವಿರುದ್ಧ . ಇನ್ನಾದ್ರೂ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲರು ಎಚ್ಚೆತ್ತುಕೊಂಡು ನಗರಸಭೆಯಲ್ಲಿ ನಡೆಯುತ್ತಿರೋ ಭ್ರಷ್ಟಾಚಾರ ಹಾಗೂ ದರ್ಪ ದಬ್ಬಾಳಿಕೆಗೆ ಕಡಿವಾಣ ಹಾಕ್ತಾರಾ ಎಂಬುದನ್ನ ಕಾದು ನೋಡಲಿದೆ.

ವರದಿ:ಮುತ್ತು ಗೋಸಲ


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!