
ಜನಮೆಚ್ಚುಗೆ ಪಡೆದ ಗಜಾನನ ಯುವಕ ಮಂಡಳಿಯ ಕ್ವೀಜ್ ಕಾರ್ಯಕ್ರಮ.
ಕುಷ್ಟಗಿ : ಸತ್ಯಮಿಥ್ಯ (ಸ-01).
ಕ್ವೀಜ್ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿಯಾಗುತ್ತವೆ.ಇಂತಹ ಆದರ್ಶಪ್ರಾಯ ಕಾರ್ಯಕ್ರಮಗಳನ್ನು ಗ್ರಾಮೀಣ ಭಾಗದಲ್ಲಿ ಹಮ್ಮಿಕೊಂಡಿರುವ ಬಾದಿಮನಾಳ ಗಜಾನನ ಯುವಕ ಮಂಡಳ ಕಾರ್ಯ ಜನಪ್ರಿಯವಾದದ್ದು ಎಂದು ಯುವ ಮುಖಂಡ ಮಹಾಂತೇಶ ಗಣವಾರಿ ನುಡಿದರು.
ಅವರು ತಾಲೂಕಿನ ಬಾದಿಮನಾಳ ಗ್ರಾಮದ ಗಜಾನನ ಯುವಕ ಮಂಡಳ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಕ್ವೀಜ್ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡುತ್ತ. ಹಬ್ಬಗಳು ಪರಸ್ಪರ ವ್ಯಕ್ತಿಗಳನ್ನು ಒಂದು ಮಾಡಿ ಸೌಹಾರ್ದಯುತ ವಾತಾವರಣ ನಿರ್ಮಾಣ ಮಾಡಲು ಸಹಕಾರಿಯಾಗಿವೆ.ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೊರಕವಾಗುವ ಕಾರ್ಯಕ್ರಮಗಳಿಗೆ ನಮ್ಮ ಸಹಕಾರವಿರುತ್ತದೆ ಎಂದರು.
ಜಿಲ್ಲೆಯಾದ್ಯಾಂತ 180 ಕ್ಕೂ ಹೆಚ್ಚು ಪ್ರತಿಭಾನ್ವಿತ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಸಿದ್ದರು ಇದರಲ್ಲಿ ಗರಿಷ್ಠ ಅಂಕಗಳಿಸದ ಮೂವರು ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಲಾಗಿಯಿತು.ಅಲ್ಲದೇ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಮಾಡಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಶ್ರೀ ಶ್ರೀ ಶಿವಸಿದ್ದೇಶ್ವರ ಮಹಾಸ್ವಾಮಿಗಳು ಕನಕ ಗುರುಪೀಠ ಬಾದಿಮನಾಳ ಶ್ರೀಗಳು ವಹಿಸಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ತುಮರಿಕೊಪ್ಪ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಅಶೋಕ ವಾಲಿಕಾರ, ರವಿ ಪರಸಾಪುರ, ದ್ಯಾಮಣ್ಣಮುದೇನಗುಡಿ, ಯಮನೂರು ಕೋಣಿ, ಮಂಜುನಾಥ್ ಕೀಲಿ, ಮಹದೇವ ಮಾನುಟಗಿ ಶ್ರೀಮತಿ ಪೂಜಾ ವೀರಾಪುರಮಠ, ಮಹಾದೇವಪ್ಪ ಆಡುರ, ಎಸ್. ಎಸ್. ಜಿಗಳೂರ, ಕಳಕಪ್ಪ ನಾಗೂರ, ಶರಣಪ್ಪ ಪರಸಾಪುರ, ಭರಮಪ್ಪ ಪರಸಾಪುರ ಸೇರಿದಂತೆ ಗಜಾನನ ಯುವಕ ಮಂಡಳದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ವರದಿ: ಚನ್ನು. ಎಸ್.