
ಮೂಡಲಗಿ:ಸತ್ಯಮಿಥ್ಯ (ಫೆ -08)
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಜೆಪಿಯನ್ನು ಬಾರಿ ಬಹುಮತದಿಂದ ಗೆಲ್ಲಿಸುವ ಮೂಲಕ ಆಮ್ ಆದ್ಮಿ ಪಕ್ಷವನ್ನು ತಿರಸ್ಕರಿಸಿದ್ದು, ಆ ಪಕ್ಷದ ನೇತಾರ ಮಾಜಿ ಮುಖ್ಯಮಂತ್ರಿ ಅರವಿಂದ್ ಕ್ರೇಜಿವಾಲ್ ಮತ್ತು ಉಪಮುಖ್ಯಮಂತ್ರಿ ಮನಿಷ್ ಸೀಸೋಡಿಯಾ ಸೋಲುವ ಮೂಲಕ ಬಾರಿ ಹಿನ್ನೆಡೆ ಉಂಟಾಗಿದೆ. ಹೀಗಾಗಿ ಬಿಜೆಪಿಗೆ ಆರ್ಶೀವದಿಸಿದ ಮತದಾರ ಬಂಧುಗಳಿಗೆ ಬಿಜೆಪಿಯನ್ನು ಗೆಲ್ಲಿಸುವಲ್ಲಿ ವಿಶೇಷ ಶ್ರಮವಹಿಸಿದ ದೆಹಲಿ ಬಿಜೆಪಿ ಕಾರ್ಯಕರ್ತರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.
ಶನಿವಾರರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಹೋರಾಟದ ಮೂಲಕ ಅಧಿಕಾರಿಕ್ಕೆ ಬಂದಿರುವ ಆಮ್ ಆದ್ಮಿ ಪಾರ್ಟಿಯ ಸಚಿವ ಸಂಪುಟದ ಹಲವಾರು ಸಚಿವರು ಭ್ರಷ್ಟಾಚಾರ ಕಳಕಿಂತರಾಗಿ ಜೈಲು ಪಾಲಾಗಿರುವುದು ಅತ್ಯಂತ ವಿಪರ್ಯಾಸದ ಸಂಗತಿ. ಸುಳ್ಳಿನ ಅರಮನೆಯನ್ನೇ ನಿರ್ಮಿಸಿ ಅಧಿಕಾರಕ್ಕೆ ಬಂದ ಅರವಿಂದ್ ಕ್ರೇಜಿವಾಲ್ ಅವರನ್ನು ದೆಹಲಿ ಜನ ತಿರಸ್ಕರಿಸಿದ್ದು, ಸನ್ಮಾನ್ಯ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಜನ ಆಯ್ಕೆ ಮಾಡುವ ಮೂಲಕ ದೆಹಲಿ ಅಭಿವೃದ್ಧಿ ಪರ್ವ ಪ್ರಾರಂಭವಾಗಲಿದೆ ಎಂದರು.
ಹೀಗಾಗಿ ಈ ಗೆಲುವಿಗೆ ಕಾರಣೀಭೂತರಾದ ದೆಹಲಿ ಮತದಾರ ಬಂಧುಗಳಿಗೂ ಹಾಗೂ ಗೆಲುವಿಗೆ ಪರಿಶ್ರಮ ವಹಿಸಿದ ಬಿಜೆಪಿ ದೆಹಲಿ ಕಾರ್ಯಕರ್ತರಿಗೂ ಹೃತ್ಪೂರ್ವಕವಾದ ಧನ್ಯವಾದಗಳು ತಿಳಿಸಿದ್ದಾರೆ.
ವರದಿ : ಶಿವಾನಂದ ಮುಧೋಳ್.