ಜಿಲ್ಲಾ ಸುದ್ದಿ

ಹೆತ್ತ ತಾಯಿಯನ್ನೇ ಹತ್ಯೆಗೈದ ಮಗ.

Share News

ಹೆತ್ತ ತಾಯಿಯನ್ನೇ ಹತ್ಯೆಗೈದ ಮಗ.

ನಗರದ ದಾಸರ ಓಣಿಯಲ್ಲಿ ಬುದ್ಧಿ ಹೇಳಿದ್ದಕ್ಕೆ ಮಗನೊಬ್ಬ ಹೆತ್ತ ತಾಯಿಯನ್ನೇ ಹತ್ಯೆಗೈದಿರುವ ಘೋರ ಘಟನೆ

ಗದಗ:ಸತ್ಯಮಿಥ್ಯ (ಅಗಸ್ಟ್ -28)

ಬುದ್ಧಿ ಹೇಳಿದ್ದಕ್ಕೆ ಮಗನೊಬ್ಬ ಹೆತ್ತ ತಾಯಿಯನ್ನೇ ಹತ್ಯೆಗೈದಿರುವ ಘೋರ ಘಟನೆ ಗದಗ ನಗರದ ದಾಸರ ಓಣಿಯಲ್ಲಿ ನಡೆದಿದೆ.

ಶಾರದಮ್ಮ ಅಗಡಿ (85) ಕೊಲೆಯಾದ ಮಹಿಳೆ. ಮಾನಸಿಕ ಅಸ್ವಸ್ಥ ಮಗ ಸಿದ್ಧಲಿಂಗ ಎಂಬಾತ ತಾಯಿಯನ್ನೇ ಕೊಂದು ಸಹೋದರಿಯರಿಗೆ ಕರೆ ಮಾಡಿ ಹೇಳಿದ್ದಾನೆ.

ಸಿದ್ಧಲಿಂಗ ಪಕ್ಕದ ಮನೆಯವರ ಜೊತೆ ಜಗಳವಾಡಿದ್ದ. ಈ ವೇಳೆ ಮಗ ಮಾನಸಿಕ ಅಸ್ವಸ್ಥ ಆತನನ್ನು ಬಿಟ್ಟುಬಿಡಿ ಎಂದು ಜಗಳ ಬಿಡಿಸಿದ್ದ ತಾಯಿ, ಮಗನನ್ನು ಕರೆದು ಬುದ್ಧಿ ಹೇಳಿದ್ದರು. ಇದಕ್ಕೆ ತಾಯಿ ಮಲಗಿದ್ದ ವೇಳೆ ಆಕೆಯನ್ನು ಹತ್ಯೆಗೈದ ಸಿದ್ಧಲಿಂಗ ಬಳಿಕ ಸಹೋದರಿಯರಿಗೆ ಕರೆ ಮಾಡಿದ್ದಾನೆ.

ಚಿತ್ರ : ಮೃತ ತಾಯಿ ಶಾರದಮ್ಮ ಅಗಡಿ 

ತಾಯಿ ಸತ್ತು ಹೋಗಿದ್ದಾರೆ ಎಂದು ಹೇಳಿದ್ದಾನೆ. ಆದರೆ ಸಹೋದರನ ಬುದ್ಧಿ ಸರಿಯಿಲ್ಲ ಎಂದು ನಂಬದ ಸಹೋದರಿಯರು ನಿರ್ಲಕ್ಷ್ಯ ಮಾಡಿ ಸುಮ್ಮನಾಗಿದ್ದಾರೆ. ವಿಷಯ ತಿಳಿದು ನೆರೆಮನೆಯವರು ಪೊಲಿಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಗದಗ ಶಹರ ಠಾಣೆ ಪೊಲೀಸರು ಪರಿಶೀಲಿಸಿದಾಗ ಮಹಿಳೆ ಸಾವನ್ನಪ್ಪಿರುವುದು ದೃಢವಾಗಿದೆ. ಬಳಿಕ ಸಹೋದರಿಯರಿಗೆ ಪೊಲೀಸರೇ ವಿಷಯ ಹೇಳುತ್ತಿದ್ದಂತೆ ಶಾಕ್ ಆಗಿ ಓಡೋಡಿ ಬಂದಿದ್ದಾರೆ.

ವರದಿ : ಮುತ್ತು.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!