
ಚೈತನ್ಯ ಸೊಸಾಯಿಟಿಯ 25ನೇ ವಾರ್ಷಿಕ ಸಭೆ 2.60 ಕೋಟಿ ಲಾಭ ಅಧ್ಯಕ್ಷ ತಮ್ಮಣ್ಣ ಕೆಂಚರಡ್ಡಿ.
ಮೂಡಲಗಿ : ಸತ್ಯಮಿಥ್ಯ (ಜು- 19).
ಶೇರದಾರರ ಹಾಗೂ ಠೇವುದಾರರ ಸಹಕಾರದಿಂದ ಸಂಘವು 2 .60 ಕೋಟಿ ಲಾಭ ಗಳಿಸಿದೆ ಎಂದು ಚೈತನ್ಯ ಸೊಸಾಯಿಟಿಯ ಅಧ್ಯಕ್ಷ ತಮ್ಮಣ್ಣ ಕೆಂಚರಡ್ಡಿ ಹೇಳಿದರು.
ಶನಿವಾರ ಚೈತನ್ಯ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸಾಯಿಟಿಯ ಸಭಾ ಭವನದಲ್ಲಿ ಸಂಸ್ಥೆಯ 25 ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
6939 ಸದಸ್ಯರನ್ನು ಹೊಂದಿ,1.85 ಕೋಟಿ ಶೇರು ಸಂಗ್ರಹಿಸಿ,12.43 ಕೋಟಿ ನಿಧಿಗಳನ್ನು ಹೊಂದಿ,106.47 ಕೋಟಿ ಠೇವುಗಳನ್ನು ಹೊಂದಿ,47.63 ವಿವಿಧ ಬ್ಯಾಂಕಿನಲ್ಲಿ ಗುಂತಾವಣಿ ಮಾಡಿ, 64.27 ಕೋಟಿ ಸಾಲ ವಿತರಿಸಿ 2.60 ಕೋಟಿ ಲಾಭ ಗಳಿಸಿದೆ ಎಂದರು,
ನಿವೃತ್ತ ಪ್ರಾಚಾರ್ಯ ಜಿ ವ್ಹಿ ನಾಗರಾಜ ಮಾತನಾಡಿ. ಮಾರುಕಟ್ಟೆಯಲ್ಲಿ ಗ್ರಾಹಕನೆ ರಾಜ. ಮೂಡಲಗಿ ಸಹಕಾರ ಸಂಘಗಳ ತವರೂರು ಆಗಿದೆ.ಇಲ್ಲಿನ ಸಂಸ್ಥೆಗಳ ಕುರಿತು ಸಂಶೋಧನೆಯಾಗಬೇಕು ಇಲ್ಲಿ ನಾಲ್ಕು ಜನ ಸಿ ಎ ಗಳಿದ್ದಾರೆ, ಹಣಕಾಸು ಸಂಸ್ಥೆಗಳು ಗ್ರಾಹಕರ ವಿಶ್ವಾಸ ಗಳಿಸಬೇಕು.ಸಹಕಾರ ಸಂಘಗಳ ಕಟಬಾಕಿದಾರ ಹಾಗೂ ಸೊಸಾಯಿಟಿಗಳ ವಾಜ್ಯ ಬಗೆಹರಿಸಲು ಶೀಘ್ರವಾದ ನ್ಯಾಯಾಲಯ ಬೇಕು, ಚೈತನ್ಯ ಶಿಕ್ಷಣ ಸಂಸ್ಥೆಗೆ ಈ ಸಂಸ್ಥೆಯು ಬೆನ್ನೆಲುಬು ಆಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಉಪನ್ಯಾಸಕ ಸಂಗಮೇಶ ಮಂಟೂರ ಮಾತನಾಡಿ. ವ್ಯಾಪಾರಿಗಳಿಗೆ.ರೈತರಿಗೆ ಆರ್ಥಿಕವಾಗಿ ಬೆಂಬಲವಾಗಿ ನಿತ್ತ ಈ ಸಂಸ್ಥೆಯ ಕಾರ್ಯ ಶ್ಲಾಘನೀಯ. ಸೊಸೈಟಿಯ ಸದಸ್ಯರ ಸಹಕಾರದಿಂದ ಸಂಸ್ಥೆಗಳು ಬೆಳೆಯುತ್ತವೆ ಎಂದರು.
ನಿವೃತ್ತ ಪ್ರೊ.ಎಸ್.ಎಂ. ಕಮದಾಳ ಸಹಕಾರ ಸಂಸ್ಥೆಗಳ ಬೆಳವಣಿಗೆಗಳ ಬಗ್ಗೆ ಮಾತನಾಡಿದರು,
ವೇದಿಕೆ ಮೇಲೆ ಜಿಲ್ಲಾ ಸಹಕಾರ ಯೂನಿಯನ್ ನಿರ್ಧೆಶಕ ವರ್ದಮಾನ ಭೋಳಿ. ಸೊಸಾಯಿಟಿಯ ಉಪಾಧ್ಯಕ್ಷ ಹಣಮಂತ ಗಾಣಿಗೇರ. ನಿರ್ಧೆಶಕರಾದ ಉದಯಕುಮಾರ ಜೋಕಿ.ವಿಜಯ ಹೊರಟ್ಟಿ. ಉದ್ದಪ್ಪ ಬಬಲಿ. ಗಿರಿಗೌಡ ಪಾಟೀಲ.ಭಾರತಿ ಪಾಟೀಲ್. ಸಾವಿತ್ರಿ ಲಿ. ಗೀತಾ ತೇಲಿ. ಶಾಂತಾ ಮೂಡಲಗಿ. ಲಕ್ಷ್ಮವ್ವ ಮಾಸನ್ನವರ.ಎಸ್ ಕೆ ಬಾಲನಾಯಿಕ ಹಾಗೂ ಬೆಟಗೇರಿ .ಧರ್ಮಟ್ಟಿ. ಯರಗಟ್ಟಿ.ಲೋಕಾಪೂರ.ಮುನ್ಯಾಳ.ಮಂಟೂರ ಶಾಖಾ ಸಲಹಾ ಸಮೀತಿಯ ಸದಸ್ಯರು ಇದ್ದರು.
ಪ್ರಧಾನ ವವ್ಯಸ್ಥಾಪಕ ಗಂಗಾಧರ ಬಿಜಗುಪ್ಪಿ ಸ್ವಾಗತಿಸಿ. ಪ್ರಾಸ್ತಾವಿಕವಾಗಿ ಮಾತನಾಡಿದರು, ವರದಿ ವಾಚನ ಉದಯಕುಮಾರ ಜೋಕಿ. ಕ್ರೋಡಿಕೃತ ಅಡಾವೆ ಪಾಂಡುರಂಗ ಅಂಬೇಕರ. ಲಾಭ ಹಾನಿ ಪ್ರಕಾಶ ಗಳತಗಿ. ಕ್ರೋಡಿಕೃತ ಲಾಭ ಹಾನಿ ಅಶ್ವಿನಿ ಘಟ್ನಟ್ಟಿ, ಲಾಭ ವಿಭಾಗಣೆ ವಿಠಲ ನೇಮಗೌಡರ. ಮಂಡಿಸಿದರು.ನಿತಿನ್ ಜೋಕಿ ನಿರೂಪಿಸಿದರು.ವಿಠಲ ಚಂದರಗಿ ವಂದಿಸಿದರು,
ವರದಿ : ಶಿವಾನಂದ ಮುಧೋಳ.