
ಚಂದನವನ ರೈತ ಉತ್ಪಾದಕ ಕಂಪನಿಯ ನಾಲ್ಕನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಸಭೆ
ಡಂಬಳ : ಸತ್ಯಮಿಥ್ಯ (ಸೆ-26)
ಗ್ರಾಮದ ಚಂದನವನ ರೈತ ಉತ್ಪಾದಕ ಕಂಪನಿಯ ನಾಲ್ಕನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಸಭೆ ಡಂಬಳ ಗ್ರಾಮದ ತೋಂಟದಾರ್ಯ ಕಲಾ ಭವನದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರವಿ ಸಜ್ಜನ್ ಹುನಗುಂದ ತೋಟಗಾರಿಕೆ ರೈತ ಉತ್ಪಾದಕ ಕಂಪನಿ ( ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಎಪ್ ಪಿ ಓ) ರೈತರು ಹೆಚ್ಚೆಚ್ಚು ವ್ಯವಹಾರಗಳನ್ನು ರೈತ ಉತ್ಪಾದಕ ಕಂಪನಿ ಜೊತೆ ಮಾಡಿದಾಗ ಮಾತ್ರ ಕಂಪನಿ ಪ್ರಗತಿ ಸಾಧಿಸಬಲ್ಲದು, ರೈತರು ಕಂಪನಿಗಳ ಮೇಲೆ ನಂಬಿಕೆ ಇಡಬೇಕು ಆ ನಂಬಿಕೆಗಳನ್ನು ರೈತ ಉತ್ಪಾದಕ ಕಂಪನಿ ಕಳೆದುಕೊಳ್ಳಬಾರದು ಅಂದಾಗ ಮಾತ್ರ ಸಮನ್ವಯ ಸಾಧಿಸಬಹುದು ಒಂದು ಕಂಪನಿ ಸ್ಥಾಪಿಸುವದು ಸುಲಭದ ಮಾತಲ್ಲಾ ಕಂಪನಿ ಸ್ಥಾಪಿಸಿದ ನಂತರ ಬಹಳಷ್ಟು ಜವಾಬ್ದಾರಿಗಳು ಹೆಚ್ಚಾಗುತ್ತಿವೆ ಎಂದು ಹೇಳಿದರು.
ಚಂದನವನ ರೈತ ಉತ್ಪಾದಕ ಕಂಪನಿ ಕೂಡ ಉತ್ತಮ ಪ್ರಗತಿಯತ್ತ ಸಾಗುತ್ತಿದೆ ಅದಕ್ಕೆ ನಾನು ಕಂಪನಿಯ ಆಡಳಿತ ಮಂಡಳಿಯನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಶ್ರೀಮತಿ ಸ್ಪೂರ್ತಿ ಜಿ ಎಸ್ ಕೃಷಿ ಉಪ ನಿರ್ದೇಶಕರು ಗದಗ ರೈತರಿಗೆ ಕಷ್ಟ ಪಟ್ಟು ಬೆಳೆ ತೆಗೆಯುವುದು ಮಾತ್ರ ಗೊತ್ತು ಆದರೆ ಮಾರಾಟ ಹಾಗೂ ಮಾರುಕಟ್ಟೆಯ ಮಾಹಿತಿ ಕೊರತೆಯಿಂದ ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುತ್ತಿಲ್ಲ ಆದ್ದರಿಂದ ರೈತರು ಆರ್ಥಿಕವಾಗಿ ನಷ್ಟ ಅನುಭವಿಸುವಂತಾಗಿದೆ ಆದ್ದರಿಂದ ಕೇಂದ್ರ ಸರ್ಕಾರ ಇಂತಹ ರೈತ ಉತ್ಪಾದಕ ಕಂಪನಿಗಳನ್ನು ಸ್ಥಾಪಿಸಿದೆ ಇದರಿಂದ ಮಧ್ಯವರ್ತಿಗಳ ಹಾವಳಿಯನ್ನು ತಡೆಗಟ್ಟಲು ಸಹಾಯವಾಗಬಹುದು ಎಂದು ಹೇಳಿದರು ಜೊತೆಗೆ ರೈತ ಬೆಳೆದ ಬೆಳೆಗಳನ್ನು ನೇರವಾಗಿ ಮಾರಾಟ ಮಾಡದೆ ಮೌಲ್ಯ ವರ್ಧನೆ ಮಾಡಿ ಮಾರಾಟ ಮಾಡಿದರೆ ರೈತರಿಗೆ ಹೆಚ್ಚಿನ ಲಾಭವನ್ನು ಪಡೆಯಬಹುದು ಎಂದು ಹೇಳಿದರು.
ಮಹಿಳೆಯರು ಸ್ವಾವಲಂಬಿ ಬದುಕು ಸಾಗಿಸಲು ಆಹಾರ ಉತ್ಪಾದನಾ ಘಟಕಗಳನ್ನು ಸ್ಥಾಪಿಸಬೇಕೆಂದು ತಿಳಿಸಿದರು ಈ ವಿಷಯವಾಗಿ ಚಂದನವನ ರೈತ ಉತ್ಪಾದಕ ಕಂಪನಿಯ ಕಾರ್ಯ ಚಟುವಟಿಕೆಗಳನ್ನು ಮೆಚ್ಚುಗೆ ವ್ಯಕ್ತಪಡಿಸಿದರು.
ಐಸಾಪ್ ಇಂಡಿಯಾ ಪೌಂಡೇಶನ್ ಸ್ಟೇಟ್ ಹೆಡ್ ಶ್ರೀ ಆದರ್ಶ ಅವರು ತಮ್ಮ ಕಂಪನಿ ರೈತ ಉತ್ಪಾದಕ ಕಂಪನಿಯ ಜೊತೆಗಿನ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು ಮತ್ತು ಬರುವ ದಿನಗಳಲ್ಲಿ ಚಂದನವನ ರೈತ ಉತ್ಪಾದಕ ಕಂಪನಿಗೆ ಮತ್ತಷ್ಟು ನೆರವು ನೀಡುವ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಸವರಾಜ ಬೇವಿನಮರದ ಮಾತನಾಡಿ ಕಳೆದ ಮೂರು ವರ್ಷಗಳಿಂದ ಕಂಪನಿಗೆ ಸಹಾಯ ಸಹಕಾರ ನೀಡಿದ ಸ್ಕೊಡ್ ವೆಸ್ ಸಂಸ್ಥೆಯವರನ್ನ ಕೃಷಿ ಇಲಾಖೆಯವರನ್ನ ಐಸಾಪ್ ಇಂಡಿಯಾ ಪೌಂಡೇಶನ್ ಅವರನ್ನು ಮತ್ತು ವಿವಿಧ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷರು, ಸಿಇಓ, ಹಾಗೂ ಷೇರುದಾರ ರೈತ ಬಂಧುಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ನಿಧ್ಯ ವಹಿಸಿದ್ದ ಪೂಜ್ಯ ಶ್ರೀ ಶ್ರೀ ಜಿ ವ್ಹಿ ಹಿರೇಮಠ ಅವರು ರೈತರು ರಾಸಾಯನಿಕ ಗೊಬ್ಬರ ಬಳಸದೆ ಸಾವಯವ ಕೃಷಿಯತ್ತ ಒಲವು ತೋರಿಸಿ ಸುಸ್ಥಿರ ಕೃಷಿ ಮಾಡಲು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸೂಡಿ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷರಾದ ಶಶಿಧರ ವಕ್ಕಲರ ಲಕ್ಷ್ಮೇಶ್ವರ ರೈತ ಉತ್ಪಾದಕ ಕಂಪನಿಯ ನಿರ್ದೇಶಕರಾದ ಸೋಮಣ್ಣ ಸೊಪ್ಪಿನ, ಕಣಗಿನಹಾಳ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷರಾದ ಪಕ್ಕೀರಯ್ಯ ಹಿರೇಮಠ, ಹಾವೇರಿ ಜಿಲ್ಲೆಯ ಸವಣೂರು ತಾಲೂಕು ಕಳಲಕೊಂಡ ರೈತ ಉತ್ಪಾದಕ ಕಂಪನಿಯ ಸಿಇಒ, ಖಂಡಪ್ಪ ನೆಗಳೂರು, ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಶ್ರೀಮತಿ ಶೀವಲೀಲಾ ಬಂಡಿಹಾಳ ಉಪಾಧ್ಯಕ್ಷರಾಗಿ ಶ್ರೀಮತಿ ಲಕ್ಮವ್ವ ಕಾಶಬೋವಿ,ಸ್ಕೊಡ್ ವೆಸ್ ಸಂಸ್ಥೆಯ ಜಗದೀಶ,ಮುಂಡರಗಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ ಪ್ರಾಣೇಶ ಹಾದಿಮನಿ ಡಂಬಳ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಾಗಿ ಎಸ್ ಬಿ ರಾಮೇನಳ್ಳಿ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಾದ ಶ್ರೀ ಕುಂಬಾರ ಉಪಸ್ಥಿತರಿದ್ದರು ಮತ್ತು ಇಸಾಪ್ ಇಂಡಿಯಾ ಪೌಂಡೇಶನ್ ನ ಸುಮಿತ್ ಜಂಬಗಿ,ಸೆಲ್ಕೊ ಫೋಡೇಶನ ಮಲ್ಲನಗೌಡ ಪಾಟೀಲ ತೋಟಗಾರಿಕೆ ಇಲಾಖೆಯ ಕುಂಬಾರ, ಮತ್ತು ಚಂದನವನ ರೈತ ಉತ್ಪಾದಕ ಕಂಪನಿಯ ನಿರ್ದೇಶಕರಾದ ಶ್ರೀ ಬಸವರಾಜ ಹಮ್ಮಿಗಿ, ಪರಡ್ಡಿ ಬಾವಿ, ಶರಣಮ್ಮ ಪ್ಯಾಟಿ, ರಮೇಶ ಯಂಡಿಗೇರಿ, ತಿಮ್ಮಣ್ಣ ರಾಟಿ ಅನೀಲಕುಮಾರ ಪಲ್ಲೇದ, ಶಂಕರಗೌಡ ಪಾಟೀಲ, ಸಿಇಓ ಬೀರಪ್ಪ ಬಚೇನಳ್ಳಿ, ಹಾಗೂ ಷೇರುದಾರ ರೈತ ಮತ್ತು ರೈತ ಮಹಿಳೆಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಚಂದನವನ ರೈತ ಉತ್ಪಾದಕ ಕಂಪನಿಯ ಲೋಗೋ ಮತ್ತು ಬ್ರಾಂಡ್ ಅನ್ನು ಕೃಷಿ ಉಪ ನಿರ್ದೇಶಕರಾದರು ಶ್ರೀಮತಿ ಸ್ಪೂರ್ತಿ ಜಿ ಎಸ್ ಅವರು ಅನಾವರಣ ಮಾಡಿದರು
ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಕಂಪನಿಯ ಜೊತೆ ಉತ್ತಮ ಒಡನಾಟ ಹಾಗೆ ವ್ಯವಹಾರ ಮಾಡಿದ ರೈತರಿಗೆ ಹಾಗೂ ರೈತ ಮಹಿಳೆಯರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಶ್ರೀಮತಿ ಲಲಿತಾ ಜೊಂಡಿ ಹಾಗೂ ರಾಕೇಶ ಕದಾಂಪೂರ ನಡೆಸಿಕೊಟ್ಟರು ಸ್ವಾಗತವನ್ನು ಶಂಕರಗೌಡ ಪಾಟೀಲ ಮಾಡಿದರು ವಂದನಾರ್ಪಣೆಯನ್ನು ಶ್ರೀ ಪರಡ್ಡಿ ಬಾವಿ ಮಾಡಿದರು.
ವರದಿ : ಮುತ್ತು ಗೋಸಲ.