ಚಿಕ್ಕಪಡಸಲಗಿ ಪಡಸಲಗೇಶನ ಉತ್ಸವ – ವಿವಿಧ ಕಾರ್ಯಕ್ರಮ ಆಯೋಜನೆ.
ಚಿಕ್ಕಪಡಸಲಗಿ:ಇಂದಿನಿಂದ ಮಾರುತಿ ದೇವರ ಓಕುಳಿ.

ಚಿಕ್ಕಪಡಸಲಗಿ ಪಡಸಲಗೇಶನ ಉತ್ಸವ – ವಿವಿಧ ಕಾರ್ಯಕ್ರಮ ಆಯೋಜನೆ.
ಚಿಕ್ಕಪಡಸಲಗಿ:ಇಂದಿನಿಂದ ಮಾರುತಿ ದೇವರ ಓಕುಳಿ.
ಸಾವಳಗಿ:ಸತ್ಯಮಿಥ್ಯ (ಎ-18)
ಜಮಖಂಡಿ ತಾಲೂಕಿನ ಸಾವಳಗಿ ಹೋಬಳಿಯ ಚಿಕ್ಕಪಡಸಲಗಿ ಗ್ರಾಮದ ಮಾರುತಿ ದೇವರ ಓಕುಳಿ ಮಹೋತ್ಸವ ಇಂದು ಏ.19 ರಿಂದ 23 ರವರೆಗೆ ನಡೆಯಲಿದೆ.
ಜೈ ಹನುಮಾನ ಯುವ ಮಿತ್ರ ಮಂಡಳಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡೆಗಳು ಜರುಗಲಿವೆ. 19ರಂದು ಬೆಳಗ್ಗೆ 6ಕ್ಕೆ ಓಕುಳಿ ಕಂಬ ನಿಲ್ಲಿಸಿ ಕೃಷ್ಣಾ ನದಿ ದಡದಲ್ಲಿ ರಾಜು ಜೋಶಿ ಅವರಿಂದ ಮೂರ್ತಿಗೆ ಅಭಿಷೇಕ, ಸಂಜೆ 6ಕ್ಕೆ ಸಕಲವಾದ್ಯ ವೈಭವಗಳೊಂದಿಗೆ ಹನುಮಂತ ದೇವರ ಕಂಚಿನ ಮೂರ್ತಿ ಮೆರವಣಿಗೆ ವಿಜೃಂಭಣೆಯಿಂದ ನಡೆಸಲಾಗುವುದು.
ರಾತ್ರಿ 9ಕ್ಕೆ “ಗಂಗಿ ಮನ್ಯಾಗ ಗೌರಿ ಹೊಲದಾಗ” ನಾಟಕ ಪ್ರದರ್ಶನ ನಡೆಯಲಿದೆ.
20ರಂದು ಮಧ್ಯಾಹ್ನ 3ಕ್ಕೆ ನೀರೋಕುಳಿ, ರಾತ್ರಿ 8ಕ್ಕೆ ಪರು ತರುವುದು, ಗ್ರಾಮದ ದೇವರುಗಳ ಆಗಮನ, ರಾತ್ರಿ 9ಕ್ಕೆ ಅತ್ತಿಗೆಗೆ ತಕ್ಕ ಮೈದುನರು ನಾಟಕ ಪ್ರದರ್ಶನ ನಡೆಯಲಿದೆ.
21ರಂದು ಮಧ್ಯಾಹ್ನ 2ಕ್ಕೆ ಹಾಲೋಕುಳಿ, ಸಂಜೆ 4ಕ್ಕೆ ರಾಷ್ಟ್ರಮಟ್ಟದ ಜಂಗಿ ನಿಕಾಲಿ ಕುಸ್ತಿ ನಡೆಯಲಿವೆ.
ಧರ್ಮ ಜಾಗೃತಿ ಕಾರ್ಯಕ್ರಮ: ಗ್ರಾಮದ ಮಾರುತಿ ದೇವರ ಓಕುಳಿ ಮಹೋತ್ಸವ ನಿಮಿತ್ತ 23ರಂದು ಬೆಳಗ್ಗೆ 9ಕ್ಕೆ ಧರ್ಮಜಾಗೃತಿ ಹಾಗೂ ಭಾರತೀಯ ಸಂಸ್ಕೃತಿ ಕಾರ್ಯಕ್ರಮ ನಡೆಯಲಿದೆ.
ಇದೇ ಸಂದರ್ಭದಲ್ಲಿ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಶ್ರೀಗಳು, ಮರೇಗುದ್ದಿ ನಿರುಪಾದೇಶ್ವರ ಶ್ರೀಗಳು ಸಾನ್ನಿಧ್ಯವಹಿಸುವರು. ಹನುಮಾನ ದೇವಸ್ಥಾನದ ಅರ್ಚಕ ಗೋವಿಂದ ಪೂಜಾರಿ ಕಾರ್ಯಕ್ರಮ ಉದ್ಘಾಟಿಸುವರು.
ಶಿವರುದ್ರಯ್ಯ ಬಬಲಾದಿಮಠ ಜ್ಯೋತಿ ಬೆಳಗಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಜಗದೀಶ ಗುಡಗುಂಟಿ, ಮಾಜಿ ಶಾಸಕ ಆನಂದ ನ್ಯಾಮಗೌಡ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಹನುಮ ದೇವರ ಸ್ವರೂಪವಾದ ಪಡಸಲಗೇಶ ಚಿಕ್ಕಪಡಸಲಗಿಯ ಆರಾಧ್ಯ ದೈವನಾಗಿದ್ದಾನೆ. ಗ್ರಾಮದಅನೇಕ ಜನರು ಪಡಸಲಗೇಶನ ಭಕ್ತರಿದ್ದಾರೆ. ಭಕ್ತಿಯಿಂದ ನಡೆದುಕೊಳ್ಳುವ ಭಕ್ತರ ಸಂಕಟನಿವಾರಿಸುವ ಮಾರುತಿ ದೇವರ ಓಕುಳಿ ಮಹೋತ್ಸವವನ್ನು ಗ್ರಾಮದ ಗುರು-ಹಿರಿಯರ ಮಾರ್ಗದರ್ಶನದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಜೈ ಹನುಮಾನ ಯುವ ಮಿತ್ರ ಮಂಡಳಿನೇತೃತ್ವದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಸ್ಪರ್ಧೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ.
ಪರಮಗೊಂಡ ಬಾಳಪ್ಪ ದಾನಗೌಡ..
-ಅಧ್ಯಕ್ಷರು, ಜೈ ಹನುಮಾನ ಕಮಿಟಿ ಚಿಕ್ಕಪಡಸಲಗಿ.
ವರದಿ : ಸಚೀನ ಆರ್ ಜಾಧವ