ಜಿಲ್ಲಾ ಸುದ್ದಿರಾಜ್ಯ ಸುದ್ದಿ

ಬಗರ್ ಹುಕುಂ ಸಾಗುವಳಿದಾರರಿಂದ – ಸೆ 15ರಿಂದ ಅನಿರ್ದಿಷ್ಟವಧಿ ಹಗಲು ರಾತ್ರಿ ಧರಣಿ ಸತ್ಯಾಗ್ರಹ.

Share News

ಬಗರ್ ಹುಕುಂ ಸಾಗುವಳಿದಾರರಿಂದ – ಸೆ 15ರಿಂದ ಅನಿರ್ದಿಷ್ಟವಧಿ ಹಗಲು ರಾತ್ರಿ ಧರಣಿ ಸತ್ಯಾಗ್ರಹ.

ಗಜೇಂದ್ರಗಡ:ಸತ್ಯಮಿಥ್ಯ (ಸೆ14)

ಬಗರ್ ಹುಕುಂ ಸಾಗುವಳಿದಾರರ ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸಿದ್ದು ಬಗರ್ ಹುಕುಂ ಸಾಗುವಳಿ ಚೀಟಿ, ಹಕ್ಕುಪತ್ರ ನೀಡುವಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರುತ್ತಿದ್ದು ಇದರ ವಿರುದ್ದ ಸೆಪ್ಟೆಂಬರ್ 15 ರಿಂದ ತಹಶಿಲ್ದಾರರ ಕಚೇರಿ ಮುಂಭಾದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಅನಿರ್ದಿಷ್ಟವಧಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಜಿ.ನಾಗರಾಜ್ ಹೇಳಿದರು.

ನಗರದ ಸೇವಾಲಾಲಾ ಸಭಾಭವನದಲ್ಲಿ ಸಭೆ ಉದ್ದೇಶಿಸಿ ಮಾತನಾಡಿದ ಅವರು

ಮಾರ್ನಾಲ್ಕು ತಲೆಮಾರುಗಳಿಂದ ಉಳುವೆ ಮಾಡುತ್ತಾ ಅದೇ ಜಮೀನಿನಲ್ಲಿ ತಮ್ಮ ಬದುಕು ಕಟ್ಟಿಕೊಂಡಿರುವ ರೈತರಿಗೆ ಭೂಮಿ‌ ನೀಡಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಿನಾಮೇಷ ಎಣಿಸುತ್ತಿರುವುದು ನಾಚೀಕೆಗೇಡಿನ ಸಂಗತಿಯಾಗಿದೆ. ಉಳುಮೆ ಮಾಡುವ ರೈತರಿಗೆ ಜಮೀನು ನೀಡಲು ಏನೇನೋ ಸಬೂಬು ಹೇಳುವ ಅಧಿಕಾರಿಗಳು, ದೊಡ್ಡ-ದೊಡ್ಡ ಪ್ಯಾನ್ ಕಂಪನಿಗಳಿಗೆ ಬೇಕಾದಷ್ಟು ಭೂಮಿಯನ್ನು ಧಾರಾಳವಾಗಿ ಬರೆದುಕೊಡುತ್ತಿರುವುದು ರೈತರ ಮೇಲಿನ ಕಾಳಜಿ ಎಂತಹದ್ದು ಎನ್ನುವುದನ್ನು ತೋರಿಸುತ್ತಿದ್ದೆ ಎಂದರು.

ಕೃಷಿಕೂಲಿಕಾರರ ಸಂಘದ ತಾಲೂಕಾಧ್ಯಕ್ಷ ಬಾಲು ರಾಠೋಡ ಮಾತನಾಡಿ ಬಗರ್ ಹುಕಂ ಸಾಗುವಳಿದಾರರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಅನೇಕ ಬಾರಿ ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿ, ಎಸಿ ಸೇರಿ ವಿವಿಧ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಯಾರೂ ಗಮನ ಹರಿಸಿಲ್ಲ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಯಾವುದೇ ರೈತರನ್ನು ಒಕ್ಕಲೆಬ್ಬಿಸದೇ ಕಾಯ್ದೆಯಡಿ ಪರಿಶೀಲಿಸಿ ಹಕ್ಕುಪತ್ರ, ಸಾಗುವಳಿ ಚೀಟಿ ನೀಡಬೇಕು ಆದರೆ ತಾಲೂಕಿನಲ್ಲಿ 511 ಅರ್ಜಿಗಳು ಸಲ್ಲಿಕೆಯಾಗಿದ್ದು ಅವುಗಳನ್ನು ತಿರಸ್ಕರಿಸಲಾಗಿದ್ದು ಬಗರ ಹುಕುಂ ಭೂ ಮಂಜೂರಾತಿ ಸಮಿತಿಯ ಅಧ್ಯಕ್ಷರು ಶಾಸಕರೇ ಇರುವುದರಿಂದ ತಹಶಿಲ್ದಾರ ಅವರು ಕಾರ್ಯದರ್ಶಿಯಾಗಿದ್ದು ಯಾವುದೇ ರೀತಿಯ ಚೌಕಾಸಿ ನಡೆಸದೇ ಅರ್ಜಿಗಳನ್ನು ತಿರಸ್ಕರಿಸಿ ಅರ್ಹ ರೈತರಿಗೆ ಸಿಗಬೇಕಾದ ಭೂಮಿಯನ್ನು ಕಸಿದುಕೊಂಡು ಕಂಪನಿಗಳಿಗೆ ನೀಡುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.

ಪ್ರಾಸ್ತಾವಿಕವಾಗಿ ಪೀರು ರಾಠೋಡ ಮಾತನಾಡಿದರು.ಈ ವೇಳೆ ಮುಖಂಡರಾದ ಚೆನ್ನಪ್ಪ ಗುಗಲೋತ್ತರ, ದಾವಲಸಾಬ ತಾಳಿಕೋಟಿ, ರೂಪೇಶ ಮಾಳೋತ್ತರ, ಮೆಹಬೂಬ್ ಹವಾಲ್ದಾರ್, ಮಾರುತಿ ರಾಠೋಡ, ದೇವಲಪ್ಪ ರಾಠೋಡ, ದುರ್ಗಪ್ಪ ಮಾಳೋತ್ತರ, ಗೋವಿಂದಪ್ಪ ಗುಗುಲೋತ್ತರ, ವೀರೇಶ ರಾಠೋಡ, ಕುಮಾರ ರಾಠೋಡ, ವಿರೇಶ ಮಾಳೋತ್ತರ, ರತ್ನವ್ವ ಮಾಳೋತ್ತರ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಬಗರ್ ಹುಕುಂ ಸಾಗುವಳಿದಾರರು ಉಪಸ್ಥಿತರಿದ್ದರು.

ವರದಿ : ಸುರೇಶ ಬಂಡಾರಿ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!