ಜಿಲ್ಲಾ ಸುದ್ದಿ

ದೇವದಾಸಿ ಮಹಿಳೆಯರು  ಕಡ್ಡಾಯವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು: ಯು.ಬಸವರಾಜ.

Share News

ದೇವದಾಸಿ ಮಹಿಳೆಯರು  ಕಡ್ಡಾಯವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು: ಯು.ಬಸವರಾಜ.

ಗದಗ: ಸತ್ಯಮಿಥ್ಯ (ಸೆ-19).

ದೇವದಾಸಿ ಮಹಿಳೆಯರು, ಮಕ್ಕಳು, ಮರಿ ಮೊಮ್ಮಕ್ಕಳು ಸಮೀಕ್ಷೆಯಿಂದ ಹೊರಗೆ ಉಳಿಯಬಾರದು. ಸರಕಾರ ಮತ್ತೊಮ್ಮೆ ಸರ್ವೇ ಮಾಡುವುದಿಲ್ಲವೆಂದು ಹೇಳಿದೆ. ಹಾಗಾಗಿ ಇದೇ ತಿಂಗಳು 15ರಿಂದ ಸರ್ವೇ ಆರಂಭವಾಗಿದ್ದು, ಆನ್ಲೈನ್  ಮೂಲಕ ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕು ” ಎಂದು ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ರಾಜ್ಯ ಗೌರವಧ್ಯಕ್ಷ ಯು.ಬಸವರಾಜ ಹೇಳಿದರು.

ಗದಗ ಪಟ್ಟಣದ ನಗರಭೆ ಪಕ್ಕದ ಆವರಣದಲ್ಲಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಜಿಲ್ಲಾ ಸಮಾವೇಶದಲ್ಲಿ ವತಿಯಿಂದ ಸಭೆಯಲ್ಲಿ ಮಾತನಾಡಿದರು.ಈ ಹಿಂದೆ ದೇವದಾಸಿ ಪದ್ಧತಿಯನ್ನು ಅನಿಷ್ಟ ಪದ್ಧತಿ ಎಂದು ಸರಕಾರ ಕರೆಯುತ್ತಿದೆ. ದೇವದಾಸಿಯಾದರೆ ಅವರನ್ನು ಜೈಲಿಗೆ ಹಾಕುತ್ತವೆಂದು ಕಾನೂನು ಹೇಳುತ್ತದೆ. ನಾವಾಗಿ ದೇವದಾಸಿಯಾರಾಗಿಲ್ಲ, ಸಾಮಾಜಿಕ ವ್ಯವಸ್ಥೆ ದೇವದಾಸಿಯನ್ನಾಗಿ ಮಾಡಿ ದೌರ್ಜನ್ಯ ಎಸಗುತ್ತಿದೆ. ಚಂದ್ರಗುತ್ತಿ ದೇವಸ್ಥಾನದಲ್ಲಿ ಬೆತ್ತಲೆ ಸೇವೆ ಆಚರಣೆಗೆ ಈ ದೇವದಾಸಿ ಪದ್ಧತಿ ಉಳಿಸಿಕೊಂಡು ಬಂದಿದೆ. ಹರಪನಹಳ್ಳಿ ಒಂದರಲ್ಲಿ ದೇವದಾಸಿಯರು ಸಿಡಿಗಂಬವನ್ನು ಸುತ್ತುವರಿಸಬೇಕಿತ್ತು. ಹೀಗೆ ಮಾಡಿದರೆ ನಮ್ಮಗೆ ಒಳ್ಳೇದು ಆಗುತ್ತೆ ಎಂದು ದೇವದಾಸಿ ಪದ್ದತಿಯನ್ನು ಸಾಮಾಜಿಕ ವ್ಯವಸ್ಥೆಯಲ್ಲಿ ಮುಂದುವರಿಸುತ್ತಾ ಬಂದಿದ್ದಾರೆ. ಇಂತಹವುಗಳನ್ನು ನಾವು ಸಂಘಟನೆ ಮೂಲಕ ವಿರೋಧಿಸಿ ತಡೆಗುಟ್ಟುತ್ತಾ ಬಂದಿದ್ದೇವೆ.ಸರಕಾರ ದೇವದಾಸಿ ನಿಷೇದ ಮಾಡಿದ್ದೇವೆ ಎಂದು ಹೇಳುತ್ತಿದೆ. ಆದರೆ ಅವರ ಹೆಣ್ಣು ಮಕ್ಕಳು ಮದುವೆ ಆದರೆ ಇನ್ನೂ ಅಪಮಾನ, ಅವಮಾನ ಅನುಭವಿಸುತ್ತಿದ್ದಾರೆ. ಹಾಗಾಗಿ ಅವರು ಹೆಣ್ಣುಮಕ್ಕಳು ಮಕ್ಕಳಿಗೂ ದೇವದಾಸಿ ಸೌಲಭ್ಯಗಳು ದೊರೆಯಬೇಕು.ದೇವದಾಸಿ ಮಹಿಳೆಯರಿಗೆ ಅಷ್ಟೇ ಅಲ್ಲ, ಅವರ ಮಕ್ಕಳ ಮೇಲೆಯೂ ದೌರ್ಜನ್ಯ ಎಸಗುತ್ತಿದ್ದಾರೆ. ಇದರ ವಿರುದ್ಧ ಕಾನೂನು ತಿದ್ದುಪಡಿ ಆಗಬೇಕು. ತಂದೆಯ ಆಸ್ತಿಯಲ್ಲಿ ಪಾಲು ಸಿಗಬೇಕು” ಎಂದು ಕಾಯ್ದೆಯಲ್ಲಿ ಹೇಳುತ್ತದೆ.ದೇವದಾಸಿ ಮಕ್ಕಳು ಅಪಮಾನಕ್ಕೆ ಒಳಗಾಗುತ್ತಿದ್ದಾರೆ. ಮದುವೆ ಆದ ಹೆಣ್ಣುಮಕ್ಕಳು ದೇವದಾಸಿಯರಾಗಿ ಮುಂದುವರೆಸುತ್ತಿದ್ದಾರೆ. ದೇವದಾಸಿ ಹೆಣ್ಣುಮಕ್ಕಳಿಗೂ ಸೌಲಭ್ಯಗಳು ಸರಕಾರ ಕೊಡಬೇಕು” ಎಂದರು.

ನಿರಂತರ ಹೋರಾಟ, ಚಳುವಳಿಗಳನ್ನು ಮಾಡಿದ್ದರ ಪರಿಣಾಮ ದೇವದಾಸಿ ಮಗಳು, ದೇವದಾಸಿ ಮಗ ಮದುವೆ ಆದರೆ ಸರಕಾರದಿಂದ ಎಂಟು ಲಕ್ಷ ಕೊಡುತ್ತದೆ ಮೂರು ತಲೆಮಾರಿನ ಮೊಮ್ಮಕ್ಕಳು ಸೇರಿದಂತೆ ಎಲ್ಲರೂ ಕಡ್ಡಾಯವಾಗಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು. ಆಗ ಸರಕಾರದಿಂದ ಜಮೀನು, ಜಾಗ, ಪುನರ್ವಸತಿ, ಉದ್ಯೋಗ, ಸಾಲ ಸೌಲಭ್ಯ, ಪರಿಹಾರ ಪಡೆಯಲು ಅನುಕೂಲ ಆಗುತ್ತದೆ ಎಂದು ಹೇಳಿದರು.

ಸಂಘದ ಜಿಲ್ಲಾಧ್ಯಕ್ಷ ಬಾಲು ರಾಠೋಡ ಪ್ರಸ್ತಾವಿಕ ಮಾತನಾಡಿ,ದೇವದಾಸಿ ಕುಟುಂಬಕ್ಕೆ ಸಾಕಷ್ಟು ಸೌಲಭ್ಯಗಳಿವೆ. ಅವುಗಳನ್ನು ಹೋರಾಟದ ಮೂಲಕ ಪಡೆದುಕೊಳ್ಳಬೇಕು. ಸರಕಾರದ ಮೇಲೆ ಹೋರಾಟದ ಮೂಲಕ ಮತ್ತೆ ಮತ್ತೆ ಒತ್ತಡ ಹೇರವ ಮೂಲಕ ನಮ್ಮ ಹಕ್ಕುಗಳನ್ನು ಪಡೆಯಬೇಕು. ದೇವದಾಸಿಯ ಹೆಣ್ಣುಮಕ್ಕಳ ಮಕ್ಕಳು, ಮಗ, ಮಗಳು, ಮರಿಮಕ್ಕಳು ಎಲ್ಲರನ್ನು ಸಮೀಕ್ಷೆ ಮಾಡಿಸಬೇಕು. ಸಮೀಕ್ಷೆಯಲ್ಲಿ ಎಲ್ಲರ ಹೆಸರನ್ನು ಕಡ್ಡಾಯವಾಗಿ ದಾಖಲಿಸಬೇಕು” ಎಂದು ಹೇಳಿದರು.

ಸಂಯೋಜನೆ ಸಂಘಟನಾ ಅಧಿಕಾರಿಗಳಾದ ನಾಗರತ್ನಾ . ಸಮೀರ ಗಾಡಿವಾಲೆ .ಪ್ರದೀಪ ಬಾರಕೇರ . ಹಾಗೂ ಸಂಘದ ಮುಖಂಡರಾದ ಫಕೀರಮ್ಮ ಪೂಜಾರ ಅಡಿವ್ವಮ್ಮ ಹರಿಜನ . ಮಲ್ಲಿಕಾರ್ಜುನ ಮಾದರ ಶರಣಪ್ಪ ಲಕ್ಕಲಕಟ್ಟಿ. ಪಡಿಯಪ್ಪ ಮಾದರ ರಮೇಶ ಮಾದರ ಶಿದ್ದು ಪೂಜಾರ ದಂಡಮ್ಮ ಮಾದರ ಕಲ್ಲವ್ವ ಮಾದರ ಶಿವವ್ವ ಹರಿಜನ. ಕೆಂಚವ್ವ ಹಳ್ಳಿಕೇರಿ ಗಣೇಶ ರಾಠೋಡ ಮುಂತಾದವರು ಭಾಗವಹಿಸಿದ್ದರು.

ವರದಿ : ಸುರೇಶ ಬಂಡಾರಿ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!