ಗದಗಿನ ಐತಿಹಾಸಿಕ ನಗರಸಭೆಯ ಆಸ್ತಿಗಳ ಸಂರಕ್ಷಣೆಗಾಗಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿಯವರ ದಿಟ್ಟ ಹೆಜ್ಜೆ : ಬರಕತಲಿ ಮುಲ್ಲಾ ಶ್ಲಾಘನೆ.
ಗದಗಿನ ಐತಿಹಾಸಿಕ ನಗರಸಭೆಯ ಆಸ್ತಿಗಳ ಸಂರಕ್ಷಣೆಗಾಗಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿಯವರ ದಿಟ್ಟ ಹೆಜ್ಜೆ : ಬರಕತಲಿ ಮುಲ್ಲಾ ಶ್ಲಾಘನೆ
ಗದಗ:ಸತ್ಯಮಿಥ್ಯ (ಅಗಸ್ಟ್ -25).
ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ ಇತಿಹಾಸದಲ್ಲಿಯೇ ಕಂಡರಿಯದ ಹಗರಣಕ್ಕೆ ಸಾಕ್ಷಿಯಾಗಿರುವುದೇ ಗದಗ ಶಹರದ ಕೋಟ್ಯಾಂತರ ಬೆಲೆ ಬಾಳುವ ಅಮೂಲ್ಯವಾದ ಸ್ಥಿರಾಸ್ತಿಗಳಾದ ವಕಾರಸಾಲು ಎಂದೇ ಖ್ಯಾತವಾಗಿರುವ 34-32(ಎ-ಗುಂ) ವಿಸ್ತೀರ್ಣಉಳ್ಳ ಖಾಲಿ ನಿವೇಶನ. ಆಡಳಿತದಲ್ಲಿರುವ ಬಿಜೆಪಿ ಪಕ್ಷದ ಅಧ್ಯಕ್ಷರು ಮತ್ತು ಕೆಲವೇ ಕೆಲವು ಸದಸ್ಯರು ಏಕೋದ್ದೇಶದೊಂದಿಗೆ ಸಿನಿಮೀಯ ರೀತಿಯಲ್ಲಿಯೇ ನಗರಸಭೆಯ ಪವಿತ್ರ ಸಭೆಗಳ ಠರಾವುಗಳಲ್ಲಿಯೇ ಖೋಟ್ಟಿ ಸಹಿಗಳು ಮತ್ತು ಖೋಟ್ಟಿ ಠರಾವು ಸಂಖ್ಯೆಯನ್ನು ಒಳಗೊಂಡ ಅನುಮೋದನೆ ಮತ್ತು ಸೂಚನೆಯೊಂದಿಗೆ ಬ್ರಹತ್ ಭ್ರಷ್ಟಾಚಾರಕ್ಕೆ ಮುನ್ನುಡಿ ಬರೆದಿರುವದು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾದ ಗದಗ ಬೆಟಗೇರಿ ನಗರಸಭೆಯ ಕೀರ್ತಿಗೆ ಕಪ್ಪು ಚುಕ್ಕೆಯಾದಂತಾಗಿರುತ್ತದೆ ಎಂದು ನಗರಸಭಾ ಸದಸ್ಯರು ಹಾಗೂ ವಿರೋಧ ಪಕ್ಷದ ಉಪ ನಾಯಕರಾದ ಜನಾಬ ಬರಕತಲಿ ಮುಲ್ಲಾ ರವರು ತೀವ್ರ ಕಳವಳವನ್ನು ವ್ಯಕ್ತಪಡಿಸಿರುತ್ತಾರೆ.
ನಗರಸಭೆಯ ಆಡಳಿತಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡ ಸನ್ಮಾನ್ಯ ಜಿಲ್ಲಾಧಿಕಾರಿಗಳಾದ ಸನ್ಮಾನ್ಯ ಗೋವಿಂದ ರೆಡ್ಡಿಯವರು ಗದಗ ಬೆಟಿಗೇರಿ ನಗರಸಭೆಯ ಆಡಳಿತಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇದೇ ದಿನಾಂಕ 23.8.2024 ರಂದು ನಗರಸಭೆ ಮಾಲೀಕತ್ವದ ಆಸ್ತಿಗಳ ಸಂರಕ್ಷಣೆ ಕ್ರಮ ಜರುಗಿಸುವ ಕುರಿತು ವಿಶೇಷ ಸಭೆಯನ್ನು ಜರುಗಿಸಿ ಗದಗಿನ ಐತಿಹಾಸಿಕ ಹಿನ್ನೆಲೆಯುಳ್ಳ ಗದಗ ಬೆಟಗೇರಿ ನಗರಸಭೆಯ ಆಸ್ತಿಗಳ ಸಂರಕ್ಷಣೆಯ ಸಂಬಂಧವಾಗಿ ವಿಶೇಷ ಸಭೆಯನ್ನು ಆಯೋಜಿಸಿ ವಿಶೇಷ ಠರಾವನ್ನು ಪಾಸ್ ಮಾಡಿ ದಿಟ್ಟತನವನ್ನು ಮೇರೆದಿರುತ್ತಾರೆ.
*ನಗರಸಭೆವಿಶೇಷ ಠರಾವು ಸಂಖ್ಯೆ 384 ರ ವಿವರ*
ಈ ಹಿಂದಿನ ನಗರಸಭೆಯ ಪೌರಾಯುಕ್ತರಾದ ಶ್ರೀ ಪ್ರಶಾಂತ ವರಗಪ್ಪನವರ ಅವರು ದಿನಾಂಕ 9.2.2023 ರಂದು ನಗರಸಭೆಯ ಸಾಮಾನ್ಯ ಸಭೆಯ ಠರಾವು ಸಂಖ್ಯೆ 378 ರ ಪ್ರಕಾರ ವಕಾರ ಸಾಲಿನ 34-32 (ಎ -ಗುಂ ) ನಗರಸಭೆಯ ಆಸ್ತಿಯನ್ನು 5 ವರ್ಷಗಳ ಅವಧಿಗೆ ಲಿಸ್ ನೀಡಿರುವುದಾಗಿ ತಮ್ಮ ಸಹಿಯನ್ನು ಖೋಟ್ಟಿಯಾಗಿ ಸೃಷ್ಟಿಸಿ ಸದರಿ ಧಾಖಲೆಯನ್ನು ಮಾನ್ಯ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠದಲ್ಲಿ WA no 100488 & 100489 ದಿನಾಂಕ 12/8/2024 ರ ಮುಂದೆ ವಕಾರ ಸಾಲಿನ ಅರ್ಜಿದಾರರು ಸಲ್ಲಿಸಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ಸಂಖ್ಯೆ 65/2024 ವಂಚನೆ ಹಾಗೂ ಫೋರ್ಜರಿ ಮಾಡಿದ ಕುರಿತು ದಿನಾಂಕ 14/8/2024 ರಂದು ದೂರು ಧಾಖಲಿಸಿರುವರು.
ದಿನಾಂಕ 9/2/2024 ರ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಗರಸಭೆಯ ವಕಾರಸಾಲಿನ 54 ಆಸ್ತಿಗಳನ್ನು ಖಾಸಗಿಯವರಿಗೆ 5 ವರ್ಷ ಲೀಸ್ ನೀಡಬೇಕೆಂಬ ವಿಷಯ ಚರ್ಚೆಯಾಗಿಲ್ಲದಿದ್ದರೂ ಅಂದಿನ ಠರಾವು ಸಂಖ್ಯೆಯು 374 ಕ್ಕೆ ಅಂತಿಮಗೊಂಡಿದ್ದರೂ ಸಹ ತಮ್ಮ ಸಹಿಯನ್ನು ಖೋಟ್ಟಿ ಮಾಡಿರುವುದಾಗಿ ಹಿಂದಿನ ಪೌರಾಯುಕ್ತರು ತಮ್ಮ ದೂರಿನಲ್ಲಿ ತಿಳಿಸಿದ್ದು ಅತ್ಯಂತ ಗಂಭೀರ ವಿಷಯವಾಗಿದೆ.
*ಸರಕಾರದ ಸುತ್ತೋಲೆಗಳ ಪ್ರಕಾರ ನಗರಸಭೆಯ ಸ್ಥಿರಾಸ್ಥಿಗಳನ್ನು ಖಾಸಗಿ ವ್ಯಕ್ತಿ / ಸಂಘ ಸಂಸ್ಥೆಗಳಿಗೆ ನೇರವಾಗಿ ನೀಡಲು ಅವಕಾಶವಿರುವುದಿಲ್ಲ. ನಗರಸಭೆಯ ಆಸ್ಥಿಗಳನ್ನು ಲೀಸ್ / ಪರಭಾರೆ ಮಾಡಬೇಕಾದಲ್ಲಿ ಪಾರದರ್ಶಕವಾಗಿ ಬಹಿರಂಗ ಹರಾಜಿನ ಮೂಲಕ ಮಾಡಬೇಕೆಂದು ಸರಕಾರದ ಆದೇಶವಿರುತ್ತದೆ.* ಸರಕಾರದ ಆದೇಶ /ಸುತ್ತೋಲೆಗಳ ವಿರುದ್ಧ ನಗರಸಭೆಯ ಹೆಸರು ನಗರಸಭೆಯ ಕಬ್ಜಾದಲ್ಲಿರುವ ನಗರದ ಹೃದಯ ಭಾಗದಲ್ಲಿರುವ ಬಹು ಮೌಲ್ಯಡ ಖಾಲಿ ಇರುವ 34-32 (ಎ-ಗುಂ )ಯ ನಗರಸಭೆಯ ಆಸ್ಥಿಗಳನ್ನು ಖೋಟ್ಟಿ ಠರಾವುಗಳ ಮೂಲಕ ಖಾಸಗಿ ವ್ಯಕ್ತಿಗಳಿಗೆ ಲೀಸ್ ನೀಡಲು ಪ್ರಯತ್ನಿಸಿರುವದು ಹಿಂದಿನ ಪೌರಾಯುಕ್ತರ ದೂರಿನ ಮೂಲಕ ಕಂಡು ಬಂದಿದೆ.
ನಗರಸಭೆಯ ಠರಾವು ಪುಸ್ತಕಗಳ ಸಮಗ್ರ ಪರಿಶೀಲನೇಯಂತೆ ದಿನಾಂಕ 9/2/2024 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಠರಾವು ಸಂಖ್ಯೆ 359-374 ರ ವರೆಗೆ ಠರಾವು ಬರೆದಿದ್ದು ಅದರೆ ಠರಾವುಗಳಲ್ಲಿ ಅಧ್ಯಕ್ಷರ ಸಹಿ ಇರುವುದಿಲ್ಲ. ದಿನಾಂಕ 1/3/2024 ಹಾಗೂ 19/7/2024 ರ ನಗರಸಭೆಯ ಠರಾವು ಪುಸ್ತಕಗಳಲ್ಲಿ ಠರಾವುಗಳಲ್ಲಿಯೂ ಅಧ್ಯಕ್ಷರ ಸಹಿ ಇರುವುದಿಲ್ಲ. ನಗರಸಭೆಯ ಠರಾವು ಪುಸ್ತಕಗಳಲ್ಲಿ ಠರಾವು ಸಂಖ್ಯೆ 378 ದಿನಾಂಕ 19/7/2024 ರಂದು ಆಗಿದ್ದು ಅದು SFC & 15 ನೇ ಹಣಕಾಸಿನ ಟೆಂಡರ್ ಕುರಿತದ್ದಾಗಿರುತ್ತದೆ. ದಿನಾಂಕ 9/2/2024 ರ ಠರಾವುಗಳಲ್ಲಿ ವಕಾರ ಸಾಲಿನ ಆಸ್ತಿಯ ಕುರಿತು ಯಾವುದೇ ನಿರ್ಣಯ ನಗರಸಭೆಯಿಂದ ಆಗಿಲ್ಲದಿರುವುದು ನಗರಸಭೆಯ ಠರಾವು ಪುಸ್ತಕಗಳ ಸಮಗ್ರ ಪರಿಶೀಲನೆಯಿಂದ ಕಂಡು ಬಂದಿರುತ್ತದೆ.
*ಗಣಕಯಂತ್ರ ಮುದ್ರಿತ ಪ್ರತಿಯನ್ನು ದಿನಾಂಕ 9/2/2024 ರ ಸಾಮಾನ್ಯ ಸಭೆಯಲ್ಲಿ ಠರಾವು ಸಂಖ್ಯೆ 378 ಠರಾವು ಆಗಿರುವುದಾಗಿ ಮಾನ್ಯ ಉಚ್ಛ ನ್ಯಾಯಾಲಯಕ್ಕೆ ವಕಾರ ಸಾಲಿನ ಅರ್ಜಿದಾರರು ಸಲ್ಲಿಸಿರುವ ಪ್ರತಿಗಳು ನಗರಸಭೆಯ ಠರಾವು ಪುಸ್ತಕದಲ್ಲಿ ಇರುವುದಿಲ್ಲ ಆದುದರಿಂದ ಸದರಿ ಠರಾವುಗಳಿಗೂ ಹಾಗೂ ನಗರಸಭೆಯು ಯಾವುದೇ ಸಂಬಂಧವಿರುವುದಿಲ್ಲ*.
ಕೆಲವೇ ಕೆಲವು ಖಾಸಗಿ ವ್ಯಕ್ತಿಗಳ ಹಿತಾಸಕ್ತಿಗಳಿಗಿಂತ ಒಟ್ಟಾರೆ ಸಾರ್ವಜನಿಕ ಹಿತಾಸಕ್ತಿ ಮುಖ್ಯ ಇದು ಸಾರ್ವಜನಿಕ ಆಸ್ತಿ ಇರುವುದರಿಂದ ಈ ಆಸ್ತಿಯನ್ನು ಎಲ್ಲಾ ಸಾರ್ವಜನಿಕರ ಉಪಯೋಗಕ್ಕಾಗಿ ಬಳಸುವದು ನಗರಸಭೆಯ ಆದ್ಯ ಕರ್ತವ್ಯವಾಗಿದೆ.ಬಹು ಮೌಲ್ಯವಾಗಿರುವ ಖಾಲಿ ಇರುವ 34-32 (ಎ-ಗುಂ )ಯ ನಗರಸಭೆಯ ಆಸ್ಥಿಗಳನ್ನು ಸಾರ್ವಜನಿಕ ಹಿತಾಸಕ್ತಿಗಾಗಿ ಸಂರಕ್ಷಿಸುವದು ಅವಶ್ಯಕವಾಗಿದೆ.
ಈ ಹಿನ್ನೆಲೆಯಲ್ಲಿ ನಗರಸಭೆಯ ಆಸ್ಥಿಗಳನ್ನು ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ ಮಾತ್ರ ವ್ಯೆವಹರಿಸಲು ನಗರಸಭೆಯ ಸ್ಥಿರಾಸ್ಥಿಗಳನ್ನು ಖಾಸಗಿ ವ್ಯಕ್ತಿ / ಸಂಘ ಸಂಸ್ಥೆಗಳಿಗೆ ಲೀಸ್ / ಪರಭಾರೆ ಮಾಡಲು ಚಾಲ್ತಿಯಲ್ಲಿರುವ ಸರಕಾರದ ಆದೇಶ / ಸುತ್ತೋಲೆಗಳ ನಿಯಮಾನುಸಾರ ವ್ಯೆವಹರಿಸಲು ನಿರ್ಣಯಿಸಿದೆ. ನಗರಸಭೆಯ ಆಸ್ತಿಗಳ ಸಂರಕ್ಷಣೆಗಾಗಿ ಪೌರಾಯುಕ್ತರು, ನಗರಸಭೆಯವರು ಎಲ್ಲಾ ಕಾನೂನಾತ್ಮಕ lಅಗತ್ಯ ಕ್ರಮಗಳನ್ನು ಈ ಮೂಲಕ ಕೈಗೊಳ್ಳಲು ಈ ಮೂಲಕ ಸೂಚಿಸಿದೆ.
*ನಗರಸಭೆಯ ಆಡಳಿತಾಧಿಕಾರಿಗಳ ಉಪಸ್ಥಿತಿಯಲ್ಲಿ ಪಾಸ್ ಮಾಡಲಾದ ಠರಾವು ಸಂಖ್ಯೆ 384ರ ವಿಶೇಷ ಗೊತ್ತುವಳಿಗಳು*
1) ನಗರಸಭೆಯ ಮಾಲೀಕತ್ವದ ಆಸ್ತಿಗಳ ಎಲ್ಲಾ ಮೂಲ ಧಾಖಲಾತಿಗಳನ್ನು ಡಿಜಿಟಲಿಕರಣ ಮಾಡಿಟ್ಟುಕೊಳ್ಳಲು ಪೌರಾಯುಕ್ತರಿಗೆ ಸೂಚಿಸಿದೆ.
2) ನಗರಸಭೆಯ ಠರಾವುಗಳಿಗೆ ಇನ್ನೂ ಮುಂದೆ ಠರಾವು ಪುಸ್ತಕದಲ್ಲಿ. ನಗರಸಭೆಯ ಅಧ್ಯಕ್ಷರು ಮತ್ತು ಪೌರಾಯುಕ್ತರು ಜಂಟಿಯಾಗಿ ಸಹಿ ಮಾಡಲು ನಿರ್ಣಯಿಸಿದೆ.
3) ನಗರಸಭೆಯ ಠರಾವು ಪುಸ್ತಕದ ಕೈ ಬರಹದ ಮೂಲ ಪ್ರತಿಯ ಛಾಯಾ ಪ್ರತಿಯ ನಕಲು ಪ್ರತಿಗೆ ಮಾತ್ರ ಪೌರಾಯುಕ್ತರು ಧ್ರಢಿಕರಿಸಿ ನೀಡಲು ಪೌರಾಯುಕ್ತರಿಗೆ ಸೂಚಿಸಲಾಯಿತು. ಅಂತಹ ಪ್ರತಿಗೆ ಮಾತ್ರ ಕಾನೂನು ಮಾನ್ಯತೆ ಇರುತ್ತದೆ.
ಈ ಮೇಲಿನ ಠರಾವು ಆಗಿದ್ದು, ಮಾನ್ಯ ಆಡಳಿತಾಧಿಕಾರಿಗಳ ಠರಾವು ನಿರ್ದೇಶನದ ಮೇರೆಗೆ ಸಾರ್ವಜನಿಕರಿಗೆ ಈ ಕೆಳಗಿನಂತೆ ಮಾಹಿತಿ ತಿಳಿಸಲಾಗುತ್ತದೆ.
4) ನಗರಸಭೆಯ ಆಸ್ತಿಗಳ ಕುರಿತು ಯಾವುದೇ ಅಧಿಕೃತ ಮಾಹಿತಿಯನ್ನು ಪೌರಾಯುಕ್ತರಿಂದ ನಿಯಮಾನುಸಾರ ಪಡೆದುಕೊಳ್ಳಲು ಸಾರ್ವಜನಿಕರಿಗೆ ಸೂಚಿಸಿದೆ.
5) ಯಾವುದೇ ಖೋಟ್ಟಿ ಧಾಖಲೆಗಳ ಕುರಿತು ಸಾರ್ವಜನಿಕರಿಗೆ ಎಚ್ಚರಿಕೆಯಿಂದಿರಲು ಸಾರ್ವಜನಿಕರಿಗೆ ಸೂಚಿಸಿದೆ.
6) ನಗರಸಭೆಯ ಆಸ್ತಿಗಳ ಖೋಟ್ಟಿ ಧಾಖಲಾತಿಗಳನ್ನು ಸೃಷ್ಟಿಸುವವರ ಮೇಲೆ ಖಠಿಣ ಕಾನೂನು ಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆ ನೀಡಿದೆ.
ಒಟ್ಟಾರೆಯಾಗಿ ಐತಿಹಾಸಿಕ ಹಿನ್ನೆಲೆಯುಳ್ಳ ಗದಗ ಬೆಟಗೇರಿ ನಗರಸಭೆಯ ಇತಿಹಾಸದಲ್ಲಿಯೇ ಕಂಡರಿಯದ ನಗರಸಭೆಯ ಆಸ್ತಿಗಳಾದ ವಕಾರಸಾಲ ಲೀಸ್ ಹಾಗೂ ಪರಭಾರೆಯ ಹಗರಣದ ಕುರಿತಾಗಿ ಇತ್ತೀಚಿಗಷ್ಟೇ ನಗರಸಭೆಯ ಆಡಳಿತಾಧಿಕಾರಿಗಳಾಗಿ ನೇಮಕರಾದ ಸನ್ಮಾನ್ಯ ಗದಗ ಜಿಲ್ಲಾಧಿಕಾರಿಗಳು ದಿಟ್ಟ ನಿರ್ಧಾರವನ್ನು ಕೈಗೊಳ್ಳುವುದರ ಮೂಲಕ ಜನಸ್ಪಂಧನೆಯನ್ನು ಮೆರೆದಿರುತ್ತಾರೆ. ಎಂದು ನಗರಸಭೆಯ ವಿರೋಧ ಪಕ್ಷದ ಉಪ ನಾಯಕರು ಹಾಗೂ 23 ನೇ ವಾರ್ಡಿನ ನಗರಸಭಾ ಸದಸ್ಯರಾದ ಜನಾಬ ಬರಕತಲಿ ಮುಲ್ಲಾ ರವರು ಸಂತಸವನ್ನು ವ್ಯಕ್ತಪಡಿಸಿರುತ್ತಾರೆ.
ವರದಿ : ಮುತ್ತು ಗೋಸಲ್