ಜೆಡಿಎಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಜಿಲ್ಲಾಧ್ಯಕ್ಷ ಮುಕ್ತುಮಸಾಬ್ ಮುಧೋಳ್ ಚಾಲನೆ.
ಗಜೇಂದ್ರಗಡ:ಸತ್ಯಮಿಥ್ಯ (ಸೆ -23)
ಪಕ್ಷದ ಸಂಘಟನೆ ಹಾಗೂ ಶಕ್ತಿ ಹೆಚ್ಚಿಸಿಕೊಳ್ಳಲು ಆಂತರಿಕವಾಗಿ ಸದಸ್ಯತ್ವ ಅಭಿಯಾನ ಚುರುಕುಗೊಳಿಸಬೇಕು. ಪಕ್ಷವನ್ನು ಸಂಘಟನಾತ್ಮಕವಾಗಿ ಬಲಪಡಿಸಬೇಕು’ ಎಂದು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಎಮ್. ವಾಯ್. ಮುಧೋಳ (ಸಾಗರ) ಹೇಳಿದರು
ಪಟ್ಟಣದಲ್ಲಿ ಆಯೋಜಿಸಿದ್ದ ಜೆಡಿಎಸ್ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜೆಡಿಎಸ್ ಪಕ್ಷಕ್ಕೆ ಕಾರ್ಯಕರ್ತರೇ ಶಕ್ತಿ. ದೇವೇಗೌಡರ ಕಾಲದಿಂದಲೂ ಜೆಡಿಎಸ್ ಅನೇಕ ಸಮಸ್ಯೆಗಳನ್ನು ಎದುರಿಸಿದೆ. ಮುಂದೆಯೂ ಅದೆಷ್ಟೇ ಸವಾಲುಗಳು ಎದುರಾದರೂ ಕಾರ್ಯಕರ್ತರು ಅವೆಲ್ಲವನ್ನು ಮೆಟ್ಟಿ ನಿಂತು ಎದುರಿಸುವ, ಪಕ್ಷ ಬಲ ವರ್ಧನೆ ಮಾಡುವ ಅಗತ್ಯವಿದೆ ಎಂದರು.
ವೀರಪ್ಪ ಜಿರ್ಲ ಮಾತನಾಡಿ ಜೆಡಿಎಸ್ ಪಕ್ಷ ಬೇರು ಮಟ್ಟದಿಂದ ಗಟ್ಟಿಯಾದರೆ ಮಾತ್ರ ಜೆಡಿಎಸ್ ಹೆಮ್ಮರವಾಗಿ ಬೆಳೆಯುತ್ತದೆ. ಎಲ್ಲಾ ಸಮುದಾಯಗಳ ಜನರನ್ನು ಒಳಗೊಂಡು ನೋಂದಣಿ ಮಾಡುವ ಪ್ರಕ್ರಿಯೆ ನಡೆಸಬೇಕು ಎಂದರು.
ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ನೋಂದಣಿ ಮಾಡಿಸಿ ಹೊಸಬರನ್ನು ಪಕ್ಷಕ್ಕೆ ಕರೆತನ್ನಿ. ಪ್ರತಿ ಬೂತ್ನಲ್ಲಿ ಕನಿಷ್ಠ ೧೦ ಪ್ರಾಮಾಣಿಕ ಸದಸ್ಯರನ್ನು ನೋಂದಣಿ ಮಾಡಿಸಿ ಎಂದು ತಾಲ್ಲೂಕ ಅಧ್ಯಕ್ಷರಾದ ಸಂಗಪ್ಪ ಯಲಬುಣಚಿ ಅವರು
ಕಾರ್ಯಕರ್ತರಿಗೆ ಕರೆ ನೀಡಿದರು ಈ ಸಂದರ್ಭದಲ್ಲಿ ಬಾದಶಾ ಎಮ್ ಬಾಗವಾನ,ಹುಸೇನಸಾಬ್ ಸಾಂಗ್ಲೀಕಾರ್, ರವಿಕುಮಾರ ಮೋಹಿತೆ,ಪಾಂಡು ಬೋಸ್ಲೆ, ಮಹಮ್ಮದ್ ಬಾಗವಾನ,ಮುಖಂಡರಾದ ಶ್ರೀ ಬಸನಗೌಡ ಪಾಟೀಲ, ಶ್ರೀ ಕಳಕಪ್ಪ ಹೊಸಂಗಡಿ ಹಾಗೂ ಎಲ್ಲಾ ಪದಾಧಿಕಾರಿಗಳು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ:ಸುರೇಶ ಬಂಡಾರಿ.