ನುಲಿ ಚಂದಯ್ಯ ಶರಣರ ತತ್ವ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು:-ಸೋಮಶೇಖರ ಲಮಾಣಿ.
ಕೊಪ್ಪಳ : ಸತ್ಯಮಿಥ್ಯ (ಆಗಸ್ಟ್ -20).
ಬಸವಣ್ಣವರ ವಿಚಾರಗಳಿಗೆ ಮನಸೋತ ನುಲಿ ಚಂದಯ್ಯನವರು ದೇಶದ ರಾಜನಾಗಿದ್ದರೂ ಕೂಡಾ ಕಾಯಕದಲ್ಲಿ ತೊಡಗಿಕೊಂಡು ಯಾವುದೇ ಜಾತಿ, ಧರ್ಮ, ಲಿಂಗ, ಬಡವ, ಶ್ರೀಮಂತ, ಎಂಬ ಬೇದ ಭಾವವಿಲ್ಲದೆ ಎಲ್ಲರ ಏಳಿಗೆಗಾಗಿ ಶ್ರಮಿಸಿದವರು ನುಲಿ ಚಂದಯ್ಯ ನವರು ಎಂದು ವಿದ್ಯಾನಂದ ಗುರುಕುಲ ಪ್ರೌಢಶಾಲೆಯ ವಿಭಾಗದ ಮುಖ್ಯಸ್ಥರಾದ ಸೋಮಶೇಖರ ಲಮಾಣಿ ಅವರು ಹೇಳಿದರು.
ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ ವಿದ್ಯಾನಂದ ಗುರುಕುಲ ಪ್ರೌಢಶಾಲೆ ವಿಭಾಗದಲ್ಲಿ ನೂಲಿ ಚಂದಯ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಮಾತನಾಡುತ್ತ
ದಾಸೋಹ, ಕಾಯಕ, ಅಂತಃಕರಣ ಅನುಸರಿಸಿದ ನುಲಿ ಚಂದಯ್ಯನವರು ದಾಸೋಹ, ಕಾಯಕ ಎಂದರೆ ಸಮಾಜದ ಕಾಳಜಿಯನ್ನು ಹೊಂದುವುದು, ಸಮಾಜದ ಜನರ ಏಳಿಗೆಯ ಜೊತೆಗೆ ತಮ್ಮಸುತ್ತಲಿನ ಪರಿಸರ ರಕ್ಷಣೆ, ಪ್ರಾಣಿ ರಕ್ಷಣೆ ಸೇರಿದಂತೆ ಎಲ್ಲ ಸಕಲ ಜೀವಿಗಳಿಗಾಗಿ ಶ್ರಮಿಸುವುದೆ ಕಾಯಕ ಎಂದು ಸಮಾಜಕ್ಕೆ ಅರ್ಥೈಸಿದವರು ನುಲಿ ಚಂದಯ್ಯ ನವರು, ಇಂತಹ ಮಹಾನ ಶರಣರ ತತ್ವ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿದ್ಯಾನಂದ ಗುರುಕುಲ ಸಂಸ್ಥೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ : ಚೆನ್ನಯ್ಯ ಹಿರೇಮಠ್