
ಬಲವಂತ ಮತಾಂತರ, ಬೆದರಿಸಿ ಹಿಂದೂ ಯುವಕನಿಂದ ನಮಾಜ್ ಮಾಡಿಸಿದ ದುರುಳರು – ರಾಜು ಖಾನಾಪುರ.
ಗದಗ:ಸತ್ಯಮಿಥ್ಯ(ಜು-15)
ನಗರದಲ್ಲಿ ಮತಾಂತರ ಹಾವಳಿ ಹೆಚ್ಚಾಗುತ್ತಿದೆ. ಮುಸ್ಲಿಂ ಯುವತಿಯನ್ನು ಪ್ರೀತಿಸಿ ಮದುವೆ ಆಗಿದ್ದ ಹಿಂದೂ ಯುವಕನನ್ನು ಬಲವಂತವಾಗಿ ಹೆದರಿಸಿ, ಬೆದರಿಸಿ ನಮಾಜ್ ಮಾಡಿಸಲಾಗುತ್ತಿದೆ. ಜೊತೆಗೆ, ನಮಾಜ್ ಮಾಡುತ್ತಿರುವ ದೃಶ್ಯವನ್ನು ಸೆರೆಹಿಡಿದು ತನ್ನ ಹೆಂಡತಿಗೆ ಕಳುಹಿಬೇಕಾದ ಹಿಂಸೆಯನ್ನು ವಿಶಾಲ್ ಗೋಕಾವಿ ಎನ್ನುವ ಹಿಂದೂ ಯುವಕ ಅನುಭವಿಸಿದ್ದಾನೆ. ಕೂಡಲೇ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಅಂತ ಶಿವರಾಮಕೃಷ್ಣ ಸೇವಾ ಸಮಿತಿ ಅಧ್ಯಕ್ಷ ರಾಜು ಖಾನಪ್ಪನವರ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.ವಿಶಾಲ್ ಗೋಕಾವಿ ದಿನಕ್ಕೆ ಐದು ಹೊತ್ತು ನಮಾಜ್ ಮಾಡಬೇಕು. ಮಾಡದಿದ್ದರೇ ನಿನ್ನ ಮೇಲೆ ಕೇಸ್ ದಾಖಲಿಸುತ್ತೇನೆ ಅಂತ ತಾನು ಕೈ ಹಿಡಿದ ಹೆಂಡತಿ ಹೆದರಿಸಿ ಬಲವಂತವಾಗಿ ಮುಳಗುಂದ ನಾಕಾದ ಹತ್ತಿರದ ಮಸಿದಿಗೆ ಕರೆದುಕೊಂಡು ಹೋಗಿ ನಮಾಜ್ ಮಾಡಿಸುತ್ತಾಳೆ. ವಿಶಾಲ್ ನಮಾಜ್ ಮಾಡುವ ದೃಶ್ಯವನ್ನು ಸರಿ ಹಿಡಿದು ತನ್ನ ಹೆಂಡತಿಯ ವ್ಯಾಟ್ಸಪ್ ಗೆ ಕಳುಹಿಸಬೇಕಿತ್ತು, ಈ ಕೆಲಸವನ್ನು ಹುಡುಗಿಯ ಸೋದರ ಮಾವ ಮಾಡುತ್ತಿದ್ದ ಇಂತಹ ಮತಾಂತರ ವಿರುದ್ಧ ಹಿಂದೂಗಳು ಎಚ್ಚೆತ್ತುಕೊಳ್ಳಬೇಕು ಇಲ್ಲದಿದ್ದರೆ ಧರ್ಮ ಉಳಿಯಲು ಸಾಧ್ಯವಿಲ್ಲ ಅಂತ ಹೇಳಿದರು.
ಇನ್ನೊಂದು ಪ್ರಕರಣದಲ್ಲಿ ಬೆಟಗೇರಿಯ ಶಮ್ಸುದ್ದಿನ್ ಮತ್ತು ತಂಡದವರು ಹಿಂದೂ ಯುವಕರನ್ನು ಗುರಿಯಾಗಿಸಿ ಮತಾಂತರ ಮಾಡಿಸುತ್ತಾರೆ. ಮತ್ತೋರ್ವ ಹಿಂದೂ ಯುವಕನನ್ನು ಹಿಂದೂ ಸಂಪ್ರದಾಯದಂತೆ ಮುಸ್ಲಿಂ ಹುಡುಗಿಯ ಜೊತೆ ಮದುವೆ ಮಾಡಿಸುತ್ತಾರೆ. ಅವರಿಗೆ ಜನಿಸಿದ ಮಕ್ಕಳಿಗೆ ಮುಸ್ಲಿಂ ಜಾತಿಯ ಹೆಸರು ಇಡಲಾಗಿದೆ. ತಂದೆಗೆ ತಿಳಿಯದೇ ಮಕ್ಕಳಿಗೆ ಮುಂಜವಿ ಕೂಡ ಮಾಡಲಾಗಿದ್ದು, ಗದಗ ಮತಾಂತರ ತವರೂರುರಾಗಿ ಬದಲಾಗಿದೆ ಅಂತ ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರು ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ಮಾಡಿ ಮುಳಗುಂದ ನಾಕಾದ ಮಸಿದಿಯನ್ನು ಸೀಜ್ ಮಾಡಬೇಕು. ಈ ಬಗ್ಗೆ ನಾವು ಎಸ್ಪಿ ಅವರಿಗೆ ದೂರು ದಾಖಲಿಸಿದ್ದೇವೆ. ಕಾನೂನು ಸಚಿವ ಎಚ್. ಕೆ ಪಾಟೀಲರ ತವರೂರಲ್ಲಿ ಇಂತಹ ಘಟನೆ ನಡೆಯುತ್ತಿದ್ದರೂ ಯಾವುದೇ ಕ್ರಮ ಯಾಕಿಲ್ಲ.? ಇವರ ಹಿಂದೆ ಕಾಣದ ಕೈಗಳು ದೊಡ್ಡ ಮಟ್ಟದಲ್ಲಿ ಇದ್ದು ಅವುಗಳನ್ನು ಪತ್ತೆ ಹಚ್ಚಬೇಕಿದೆ. ಜುಲೈ 17 ರಂದು ಈ ಕುರಿತು ಡಿಸಿ ಮೂಲಕ ಕೇಂದ್ರ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಗುತ್ತದೆ ಅಂತ ರಾಜು ಖಾನಪ್ಪನವರ ಮಾಹಿತಿ ನೀಡಿದರು.
ಕರ್ನಾಟಕದ ಎಲ್ಲ ಮಠಾಧೀಶರು ಲವ್ ಜಿಹಾದ್, ಮತಾಂತರದ ಬಗ್ಗೆ ದ್ವನಿ ಎತ್ತುತ್ತಿಲ್ಲ. ಮಾತೆತ್ತಿದರೇ ಹಿಂದೂ-ಹಿಂದೂ ಎನ್ನುವ ರಾಜಕಾರಣಿಗಳು ರಾಜಕೀಯ ಲಾಭಕ್ಕಾಗಿ ದ್ವನಿ ಎತ್ತುತ್ತಿಲ್ಲ. ದೇಶದಲ್ಲಿ ಮುಸ್ಲಿಮರು ಹಿಂದೂ ಯುವಕರನ್ನು ಮತಾಂತರ ಮಾಡುವ ಹುನ್ನಾರ ನಡೆದಿದೆ. ಇಂತಹ ಕುತಂತ್ರಕ್ಕೆ ಹಿಂದೂ ಯುವಕರು ಯಾವುದೇ ಕಾರಣಕ್ಕೂ ಬಲಿ ಆಗಬಾರದು ನಿಮ್ಮ ಸಂಪರ್ಕಕ್ಕೆ ಅಂತಹ ವ್ಯಕ್ತಿಗಳು ಕಂಡುಬಂದರೆ ತಕ್ಷಣ ದೂರ ನೀಡಿ ಅಂತ ಮನವಿ ಮಾಡಿದರು.
ವೀರಾಜಸಾಬ್ ಆಗಿ ಬದಲಾದ ವಿಶಾಲ್ –
ಗದಗ ನಗರದ ವಿಶಾಲ್ ಪರಶುರಾಮ ಗೋಕಾವಿ ಎನ್ನುವ ಮುಗ್ಧ ಮನಸ್ಸಿನ ಹುಡುಗ ಮುಸ್ಲಿಂ ಯುವತಿಯನ್ನು ಮದುವೆಯಾದ ತಕ್ಷಣ ವೀರಾಜಸಾಬ್ ಆಗಿ ಬದಲಾಗಿದ್ದಾನೆ. ಇದು ಕೂಡ ಅವನ ಗಮನಕ್ಕೆ ಬಂದಿಲ್ಲ. ಹುಡುಗಿಯರ ಮನೆಯವರು ಈ ಕೆಲಸವನ್ನು ಮಾಡಿದ್ದಾರೆ ಅಂತ ವಿಶಾಲ್ ಗೋಕಾವಿ ಗಂಭೀರವಾಗಿ ಆರೋಪಿಸುತ್ತಿದ್ದಾನೆ.
ಹುಡುಗಿಯಿಂದ ಡಿವೋರ್ಸ್ ಗೆ ಅರ್ಜಿ-
ವಿಶಾಲ ಗೋಕಾವಿ ಎನ್ನುವ ಹುಡುಗನ ಮದುವೆ ಆಗಿದ್ದ ತೈಸಿನ್ ಎನ್ನುವ ಮುಸ್ಲಿಂ ಹುಡುಗಿ ಬಲವಂತವಾಗಿ ವಿಶಾಲನಿಗೆ ನಮಾಜ್ ಮಾಡಿಸುತ್ತಿದ್ದಳು. ಈ ವಿಷಯವನ್ನು ಹಿಂದೂ ಮುಖಂಡರಿಗೆ ವಿಶಾಲ್ ತಿಳಿಸುತ್ತಿದ್ದಂತೆ ಕಿಲಾಡಿ ತೈಸಿನ್ ಡಿಮೋರ್ಸ್ ಗೆ ಅರ್ಜಿ ಹಾಕಿದ್ದಾಳೆ. ಒಟ್ಟಾರೆಯಾಗಿ ಈ ಘಟನೆ ಎಲ್ಲಿಗೆ ಬಂದು ನಿಲ್ಲುತ್ತದೆ ಕಾದು ನೋಡಬೇಕು.
ಈ ಸಂದರ್ಭದಲ್ಲಿ ರಾಜು ಡಮಾಮ್, ಮಹೇಶ್ ರೋಖಡೆ, ಕುಮಾರ ನಡಗೇರಿ, ರಾಚೋಟಿ ಕಾಡಪ್ಪನವರ, ಕಿರಣ್ ಹಿರೇಮಠ, ಸತೀಶ್ ಕುಂಬಾರ, ಶಿವಯೋಗಿ ಹಿರೇಮಠ, ಅರುಣಕುಮಾರ ಬಜಿ, ಮಂಜುನಾಥ ಬೆಂತೂರ ಉಪಸ್ಥಿತರಿದ್ದರು.
ವರದಿ : ಮುತ್ತು ಗೋಸಲ.