
ಗದಗ ಬೆಟಗೇರಿ ನಗರಸಭೆ ಕಮಿಷನರ್ ನೇಮಕ ಕಣ್ಣಾ ಮುಚ್ಚಾಲೆ.
ಗದಗ:ಸತ್ಯಮಿಥ್ಯ ( ಜುಲೈ -27)
ಯಾರ ಶಾಪವೋ, ಯಾರ ತಾಪವೋ ಏನೋ ಗೊತ್ತಿಲ್ಲ ನಮ್ಮ ಗದಗ ಬೆಟಗೇರಿ ನಗರಸಭೆಗೆ ಗ್ರಹಣ ಹಿಡಿದಿದೆ ಎಂಬುದಂತು ಗ್ಯಾರಂಟಿ… ಅವಳಿ ನಗರದ ಜನರಿಗೆ, ಅವಳಿ ನಗರದ ಅಭಿವೃದ್ಧಿಗೆ ವರದಾನ ಆಗಬೇಕಿದ್ದ ಈ ನಗರಸಭೆಯ ಆಡಳಿತ ವ್ಯವಸ್ಥೆ ಭ್ರಷ್ಟರಿಗೆ ಬಂಡವಾಳ ಎಂಬಂತಾಗಿದೆ. ಎ ಗ್ರೇಡ್ ನಗರಸಭೆ ಎಂಬ ಹೆಗ್ಗಳಿಕೆಯ ಜೊತೆಗೆ ರಾಜ್ಯ ಸರಕಾರದಿಂದ ಸತತ 3 ಬಾರಿ ರಾಜ್ಯ ಪ್ರಶಸ್ತಿ ಪಡೆದ ಹೆಮ್ಮೆ ನಮ್ಮ ನಗರಸಭೆಯದ್ದಾಗಿದೆ.
ಇಂತಹ ನಗರಸಭೆಗೆ ಪೂರ್ಣಾವಧಿ ಕಮಿಷನರ್ ಇಲ್ಲ. ವರ್ಷಕ್ಕೂ ಹೆಚ್ಚು ಸಮಯ ಪ್ರಭಾರಿ ಕಮಿಷನರ್ ಆಡಳಿತದಲ್ಲಿಯೇ ಸಾಗುತ್ತಿದೆ. ಈಗ ಅಧ್ಯಕ್ಷರು, ಉಪಾಧ್ಯಕ್ಷರು ಇಲ್ಲ.ಕಾರಣ ಈ ಆಡಳಿತ ಅವಧಿಯ ಮೊದಲ 30 ತಿಂಗಳದ ಬಿಜೆಪಿ ಆಡಳಿತದಲ್ಲಿ ಅದಕ್ಷರಾಗಿದ್ದ ಉಷಾ ದಾಸರ, ಉಪಾಧ್ಯಕ್ಷರಾಗಿದ್ದ ಸುನಂದಾ ಬಾಕಳೆ ಅವಧಿ 24-7-2024 ಕ್ಕೆ ಮುಗಿದಿದೆ. ಇನ್ನು ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಈಗಲೇ ಆಗೊದು ಕಷ್ಟ ಸಾಧ್ಯ ಕಾರಣ ಮೀಸಲಾತಿ ಪ್ರಕಟವಾಗಿಲ್ಲ ಕೋರ್ಟಲ್ಲಿ ಕೇಸ್ ನಡಿತಾ ಇದ್ದು 29-7-2024 ಬಹುತೇಕ ವಾದ ನಡೆದು ಅಂತಿಮ ತೀರ್ಮಾನಕ್ಕೆ ಬರಬಹುದು ಎಂಬ ಚರ್ಚೆಗಳು ನಡೆದಿವೆ.
ಪೂರ್ಣಾವಧಿ ಕಮಿಷನರ್ ಇದ್ರೆ ಕನಿಷ್ಟ ಅವಳಿ ನಗರಕ್ಕೆ ಅಗತ್ಯ ಕೆಲಸಗಳಾಗಬಹುದು ಎಂಬ ಲೆಕ್ಕಾಚಾರಕ್ಕೂ ಅನೇಕರ ವಿಘ್ನಗಳು ಎದುರಾಗುತ್ತಿವೆ. ಗದಗ ಬೆಟಗೇರಿ ನಗರಸಭೆಗೆ ರಾಜಾರಾಮ ಪವಾರ ಅವರನ್ನು ನೇಮಕಗೊಳಿಸಿ ಸರ್ಕಾರ 23-7-2024 ಆದೇಶ ಹೊರಡಿಸಿತ್ತು. ಆದರೆ 3 ದಿನದಲ್ಲಿ ಅಂದರೆ 26-7-2024ರಂದು ಈ ಆದೇಶವನ್ನು ರದ್ದುಗೊಳಿಸಿ ಮರು ಆದೇಶ ಮಾಡಿದ್ದು ಇಲ್ಲದ ಚರ್ಚೆಗೆ ಕಾರಣವಾಗಿದೆ. ಒಂದು ಮೂಲದ ಪ್ರಕಾರ ದಾಂಡೇಲಿ ನಗರಸಭೆಯಲ್ಲಿ ಕಮಿಷನರ್ ಎಂದು ಕಾರ್ಯ ನಿರ್ವಹಿಸುತ್ತಿರುವ ರಾಜಾರಾಮ ಪವಾರ ಅವರನ್ನು ಆ ಭಾಗದ ಶಾಸಕರಾದ, ಹಿರಿಯ ಕಾಂಗ್ರೆಸ್ ನಾಯಕ ಆರ,ವಿ,ದೇಶಪಾಂಡೆ ಬಿಟ್ಟು ಕೊಡದೆ ಇರುವುದರಿಂದ ಅವರ ವರ್ಗಾವಣೆಯನ್ನು ರದ್ದು ಮಾಡಲಾಗಿದೆ ಎಂಬ ಮಾಹಿತಿ ಇದೆ.
ಆದರೆ ಏನೇ ಆಗಲಿ ನೂರು ವರ್ಷ ಇತಿಹಾಸ ಇರುವ ಗದಗ ಬೆಟಗೇರಿ ನಗರಸಭೆಗೆ ಮಾತ್ರ ಒಂದಿಷ್ಟು ಗ್ರಹಣ, ಒಂದಿಷ್ಟು ಸ್ವಾರ್ಥ ದೃಷ್ಠಿಯಿಂದಾಗ ಆಡಳಿತ ಉತ್ತಮವಾಗಿ ಜನರಿಗೆ ಸಿಗುತ್ತಿಲ್ಲ ಎಂಬ ನೋವು ನಾಗರಿಕರಲ್ಲಿದೆ. ಕಾಯೋರೆ ಕೊಲ್ಲೊಕೆ ನಿಂತರೆ…? ಬೆಲಿಯೇ ಎದ್ದು ಹೊಲ ಮೇಯ್ದರೆ ಆಗೋದೆ ಹೀಗೆ ಎಂಬ ಅನುಭವಿಗಳ ಮಾತು ಸುಳ್ಳಲ್ಲ ಏನಂತಿರಾ
ವರದಿ:ಮುತ್ತು ಗೋಸಲ