
ಕೊಲೆ ಆರೋಪಿಗಳಿಗೆ ಜೀವಾವದಿ ಶಿಕ್ಷೆ ಹಾಗೂ ತಲಾ 5000 ರೂ ದಂಡ.ಕೊಲೆ ಆರೋಪಿಗಳಿಗೆ ಜೀವಾವದಿ ಶಿಕ್ಷೆ ಹಾಗೂ ತಲಾ 5000 ರೂ ದಂಡ.
ಗದಗ:ಸತ್ಯಮಿಥ್ಯ (ಡಿ 19).
ಮುಳಗುಂದ ಪೊಲೀಸ್ ಠಾಣೆಯ ಪ್ರಕರಣದಲ್ಲಿನ ಎರಡು ,ಕೊಲೆ ಆರೋಪಿಗಳಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವದಿ ಶಿಕ್ಷೆ ಹಾಗೂ ತಲಾ 5000 ರೂ ದಂಡವನ್ನು ವಿಧಿಸಿ ತೀರ್ಪು ನೀಡಿದೆ.
ಸೋಮಪ್ಪ ಚನ್ನಪ್ಪ ಲಮಾಣಿ ಹಾಗೂ ಶ್ರೀಮತಿ ಲಲೀತಾ ಕೋಂ ಲಕ್ಷ್ಮಣ್ ಲಮಾಣಿ ಎಂಬವರೇ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾದವರು.
ಪ್ರಕರಣದ ಹಿನ್ನೆಲೆ: ಶ್ರೀಮತಿ ಲಲೀತಾ ಕೋಂ ಲಕ್ಷ್ಮಣ್ ಲಮಾಣಿ ಇವಳು ಅನೈತಿಕ ಸಂಬಂಧವನ್ನು ಅತಿಕಟ್ಟಿ ತಾಂಡದ ಸೋಮಪ್ಪ ಚನ್ನಪ್ಪ ಲಮಾಣಿ ಇಟ್ಟುಕೊಂಡಿದ್ದು ಗೊತ್ತಾದ್ದರಿಂದ ಶ್ರೀಮತಿ ಲಲೀತಾಳ ಗಂಡ ಲಕ್ಷ್ಮಣ ಲಮಾಣಿ ಒದರಾಡಿದ್ದರಿಂದ ಇಬ್ಬರ ಮರ್ಯಾದೆಯನ್ನು ಹಾಳು ಮಾಡಿದ್ದಾನೆಂದು ಅವನನ್ನು ಕೊಲೆ ಮಾಡಿದರೆ ಎಲ್ಲಾ ಸರಿ ಹೋಗುತ್ತೆ ಎನ್ನುವ ಉದ್ದೇಶದಿಂದ ಕುತ್ತಿಗೆಗೆ ಹಗ್ಗ ಹಾಕಿ ಜಗ್ಗಿ ಕೊಲೆ ಮಾಡುತ್ತಾರೆ ಎಂದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತೀರ್ಪು ಪ್ರಕಟಿಸಲಾಗಿದೆ.
ಪ್ರಕರಣದ ತನಿಖೆಯನ್ನು ಸಿಪಿಐ ಆರ್ ಎಸ್ ಕಪ್ಪತ್ತನವರ ವಹಿಸಿಕೊಂಡು ಪ್ರಕರಣದ ಸಾಕ್ಷಿ ಪುರಾವೆಗಳನ್ನು ಸಂಗ್ರಹಿಸಿ ದೋಷಾರೋಪ ಪಟ್ಟಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಸವಿತಾ ಎಂ ಶಿಗ್ಲಿ ಸರ್ಕಾರಿ ಅಭಿಯೋಜಕರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇವರು ಆರೋಪಿಗಳಿಗೆ ಶಿಕ್ಷೆ ಆಗುವಂತೆ ಕಾರ್ಯನಿರ್ವಹಿಸಿದರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರಾದ ಬಸವರಾಜ ಅವರು ತೀರ್ಪು ನೀಡಿದರು.
ಪ್ರಕರಣದ ತನಿಖಾಧಿಕಾರಿಗಳಿಗೆ ಹಾಗೂ ತನಿಕೆಯಲ್ಲಿ ಪಾಲ್ಗೊಂಡ ಎಲ್ಲಾ ಸಿಬ್ಬಂದಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ,ಎಸ್ ನೇಮೇಗೌಡ ಅವರು ಪ್ರಶಂಸಿರುತ್ತಾರೆ.
ವರದಿ :ಮುತ್ತು ಗೋಸಲ.