
ಗದಗ : ಜಗದ್ಗುರು ತೋಂಟದಾರ್ಯ ಮಕ್ಕಳ ಉದ್ಯಾನವನ ಅವ್ಯವಸ್ಥೆ ಆಗರ – ಸರಿಪಡಿಸುವವ ರಾರು?
ಗದಗ : ಸತ್ಯಮಿಥ್ಯ (ಜು-30).
ನಗರದ ಮಹಾತ್ಮ ಗಾಂಧಿ ಸರ್ಕಲ್ ಹತ್ತಿರ ಇರುವ ಶ್ರೀ ಜಗದ್ಗುರು ತೋಂಟದಾರ್ಯ ಮಕ್ಕಳ ಉದ್ಯಾನವನವು ಅವ್ಯವಸ್ಥೆಯ ಆಗರವಾಗಿದ್ದು ಉದ್ಯಾನವನದ ಸೌಂದರ್ಯವು ಗಿಡ ಗಂಟೆಗಳು ಹಾಗೂ ಕಸ ಕಡ್ಡಿಗಳಿಂದ ತುಂಬಿದ್ದು ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಉದ್ಯಾನವನ ಇದ್ದು ಇಲ್ಲದಂತಾಗಿದೆ.
ಈ ಗಾರ್ಡನ್ ಮೊದಲು ಗಾಂಧಿ ಸರ್ಕಲ್ ಅಂತಹ ಖ್ಯಾತಿ ಪಡಿದಿತ್ತು ಇಲ್ಲಿ ಬಸವೇಶ್ವರ ನಗರ ಜವಳಗಲ್ಲಿ ಗಂಗಾಪುರ ಪೇಟೆ ವಕ್ಕಲಗೇರಿ ಓಣಿ ಜೊತೆಗೆ ಈ ಭಾಗದ ಮಸಾರಿ ವಕೀಲ ಚಾಳ ಕುಷ್ಟಗಿ ಚಾಳ ಗದಗ ಬೆಟಗೇರಿ ನಗರದ ಬಹಳಷ್ಟು ಮಕ್ಕಳು ಆಗಮಿಸಿ ಆಟ ಆಡುತ್ತಿದ್ದರು.
ಆದರೆ ಈಗ ಉದ್ಯಾನವನದ ಸೌಂದರ್ಯವು ಹಾಳಾಗಿ ಉದ್ಯಾನವನದಲ್ಲಿರುವ ಸಲಕರಣೆಗಳು ತುಕ್ಕು ಹಿಡಿಯುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಉದ್ಯಾನವನ ಹಾಳಾಗಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಉದ್ಯಾನವನವನ್ನು ಸ್ವಚ್ಛಗೊಳಿಸಿ ಮಕ್ಕಳಿಗೆ ಆಟವಾಡಲು ವೃದ್ಧರಿಗೆ ವಿಶ್ರಾಂತಿ ಪಡೆದುಕೊಳ್ಳಲು ಅನುಕೂಲವಾಗಲಿ ಎಂದು ಸಾರ್ವಜನಿಕರ ಆಗ್ರಹವಾಗಿದೆ.
ವರದಿ:ಮುತ್ತು ಗೋಸಲ