
ಬಡ, ಮಧ್ಯಮ, ರೈತರ ಆರ್ಥಿಕ ಹೊರೆ ತಗ್ಗಿಸಿದ GST 2.0 – ಪಿ. ರಾಜೀವ್.
ಗಜೇಂದ್ರಗಡ/ಸತ್ಯಮಿಥ್ಯ (ಅ-18).
ಜಿ ಎಸ್ ಟಿ 2.0 ಜಾರಿಗೆ ತರುವುದರ ಮೂಲಕ ಬಡವರ ಮಧ್ಯಮ ವರ್ಗದವರ ಹಾಗೂ ರೈತರಿಗೆ ಆರ್ಥಿಕ ಹೊರೆ ತಗ್ಗಿಸಿದ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜಿ ಅವರ ಸಾಮಾಜಿಕ ಕಳಕಳಿಯನ್ನು ಇಡೀ ದೇಶದ ಜನ ಕೊಂಡಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ ರಾಜು ಹೇಳಿದರು.
ಗಜೇಂದ್ರಗಡ ಪಟ್ಟಣದ ಮಾಜಿ ಸಚಿವರಾದ ಕಳಕಪ್ಪ ಜಿ ಬಂಡಿಯವರ ಗೃಹ ಕಚೇರಿ ಆವರಣದಲ್ಲಿ ಬಿಜೆಪಿ ರೋಣ ಮಂಡಲದ ವತಿಯಿಂದ ನಡೆದ ಆತ್ಮ ನಿರ್ಭರ ಭಾರತ ಜಿಎಸ್ಟಿ ಹಾಗೂ ಬಿ ಎಲ್ ಎ 2 ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮಾಜಿ ಸಚಿವ ಕಳಕಪ್ಪ ಬಂಡಿ ಮಾತನಾಡಿ ಮೋದಿಜಿಯವರ ಆತ್ಮ ನಿರ್ಭರ ಭಾರತ ಕಲ್ಪನೆಯನ್ನು ಸಹಕಾರಗೊಳಿಸಲು ಪ್ರತಿಯೊಬ್ಬರೂ ಸ್ವದೇಶಿ ವಸ್ತುಗಳನ್ನು ಬಳಸುವುದರ ಮೂಲಕ ವಿದೇಶಿ ವಸ್ತುಗಳ ವ್ಯಾಮೋಹವನ್ನು ನಿಲ್ಲಿಸಬೇಕೆಂದು ಕರೆ ನೀಡಿದರು.
ಬಿಜೆಪಿ ರೋಣ ಮಂಡಲ ಅಧ್ಯಕ್ಷ ಉಮೇಶ ಮಲ್ಲಾಪುರ ಅಧ್ಯಕ್ಷತೆ ವಹಿಸಿದ್ದರು ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಆರ್ ಕೆ ಚೌಹಾನ, ಲಿಂಗರಾಜ ಪಾಟೀಲ, ಪಕ್ಷದ ಮುಖಂಡರಾದ ನಿಂಗಪ್ಪ ಕೆಂಗಾರ, ಅಶೋಕ ನವಲಗುಂದ, ಮುದಿಯಪ್ಪ ಕರಡಿ, ಹನುಮಂತಪ್ಪ ಹಟ್ಟಿಮನಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರಮೇಶ ವಕ್ಕರ, ಬಾಲಾಜಿರಾವ್ ಬೊಸ್ಲೆ, ಅಶೋಕ ವನ್ನಾಲ, ನಗರ ಘಟಕದ ಅಧ್ಯಕ್ಷ ರಾಜೇಂದ್ರ ಗೋರ್ಪಡೆ,ಭಾಸ್ಕರ ರಾಯಬಾಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಸುರೇಶ ಬಂಡಾರಿ.