
ಗಜೇಂದ್ರಗಡ : ದನಗಳ ಹಾವಳಿ – ವ್ಯಕ್ತಿಗೆ ಗಾಯ.
ಗಜೇಂದ್ರಗಡ- ಸತ್ಯಮಿಥ್ಯ (ಜು-10).
ನಗರದಲ್ಲಿ ಇತ್ತೀಚಿಗೆ ಬೀದಿ ದನಗಳ ಕಾಟ ಹೆಚ್ಚಾಗಿದ್ದು. ಇಂದು ಸಾಯಂಕಾಲ ರೋಣ ರಸ್ತೆಯ ಕಾಯಪಲ್ಲೇ ಬಜಾರದಲ್ಲಿ ದನಗಳ ಕಾದಟಕ್ಕೆ ವ್ಯಕ್ತಿಯೊಬ್ಬರಿಗೆ ತೀವ್ರವಾದ ಗಾಯವಾಗಿದೆ.
ಈ ಕುರಿತು ಅನೇಕ ಬಾರಿ ಪುರಸಭೆ ಮುಖ್ಯಾಧಿಕಾರಿಗಳ ಗಮನಕ್ಕೆ ತಂದರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ವರದಿ : ಸುರೇಶ ಬಂಡಾರಿ.