ಬೆಳ್ಳೊಳ್ಳಿ ಧಾರಣಿ ₹6000 ಇಂದ ₹4000 ಕ್ಕೆ ಕುಸಿತ: ರಸ್ತೆಗೆ ಬೆಳ್ಳುಳ್ಳಿ ಚೆಲ್ಲಿ ರೈತರ ಪ್ರತಿಭಟನೆ.

ಬೆಳ್ಳೊಳ್ಳಿ ಧಾರಣಿ ₹6000 ಇಂದ ₹4000 ಕ್ಕೆ ಕುಸಿತ: ರಸ್ತೆಗೆ ಬೆಳ್ಳುಳ್ಳಿ ಚೆಲ್ಲಿ ರೈತರ ಪ್ರತಿಭಟನೆ
ಗದಗ:ಸತ್ಯಮಿಥ್ಯ (ಸೆ-15).
ಬೆಳ್ಳುಳ್ಳಿ ದರ ಕುಸಿದಿದ್ದರಿಂದ ಆಕ್ರೋಶಗೊಂಡ ರೈತರು ಬೆಳ್ಳುಳ್ಳಿಯನ್ನು ರಸ್ತೆಗೆ ಚೆಲ್ಲಿ ಪ್ರತಿಭಟನೆ ನಡೆಸಿದ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಡೆದಿದೆ. ರೈತರು ಬೆಳೆದು ತಂದ ಬೆಳ್ಳುಳ್ಳಿಗೆ ಬೆಲೆ ಇಲ್ಲದೇ ಇರುವದರಿಂದ ರೈತರು ಕಂಗಾಲಾಗಿದ್ದಾರೆ.
ಪ್ರತಿದಿನ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ದರ ಏರುಪೇರಾಗಿರೋದ್ರಿಂದ ಖರೀದಿಗೆ ಖರೀದಿದಾದರು ಹಿಂದೇಟು ಹಾಕ್ತಿದ್ದಾರೆ. ಕಳೆದ ವಾರ ಕ್ವಿಂಟಲ್ ₹6000 ಇದ್ದ ಬೆಳ್ಳುಳ್ಳಿ ಬೆಲೆ ದಿಢೀರನೇ ₹ 4000 ಕ್ಕೆ ಕುಸಿದಿದೆ. ಬಾಗಲಕೋಟೆ, ಹುಬ್ಬಳ್ಳಿ, ದಾವಣಗೆರೆ ಸೇರಿದಂತೆ ನೆರೆಯ ಜಿಲ್ಲೆಗಳಲ್ಲಿ, ಬೆಳ್ಳುಳ್ಳಿಗೆ ಹೆಚ್ಚಿನ ಬೆಲೆ ನಿಗದಿಪಡಿಸಲಾಗಿದೆ.
ಇಲ್ಲಿ ಮಾತ್ರ ಕಡಿಮೆ ದರ ಯಾಕೆ ನಿಗದಿಪಡಿಸಿದ್ದಾರೆ ಅನ್ನೋದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಪ್ರತಿಯೊಬ್ಬ ರೈತರಿಗೂ ಏಕರೂಪ ಬೆಲೆ ಸಿಗುವಂತಾಗಬೇಕು. ರೈತರಿಗೆ ನ್ಯಾಯ ಒದಗಿಸದಿದ್ದರೆ ಹೋರಾಟಕ್ಕೆ ಮುಂದಾಗುತ್ತೇವೆ ಅಂತ ಬೆಳ್ಳುಳ್ಳಿ ಬೆಳೆದ ಬೆಳೆಗಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ವರದಿ : ಮುತ್ತು ಗೋಸಲ