ರಾಜ್ಯಪಾಲರ ನಡವಳಿಕೆ ಪ್ರಜಾಪ್ರಭುತ್ವಕ್ಕೆ ಮಾರಕ – ಸಂಜಯ್ ದೊಡ್ಡಮನಿ.
ಗದಗ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ವಕ್ತಾರರು ಸಂಜಯ್ ದೊಡ್ಡಮನಿ
ಗದಗ:ಸತ್ಯಮಿಥ್ಯ (ಆಗಸ್ಟ್ -20).
ಸ್ವಾತಂತ್ರ್ಯ ದಿನಾಚರಣೆಯ ಮರುದಿನವೇ ರಾಜ್ಯಪಾಲರು ಮುಡಾ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಅನುಮತಿ ನೀಡುವ ಮೂಲಕ ಸಂವಿಧಾನದ ವಿರುದ್ದ ನಡೆ ಅನುಸರಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಂದು ಸಂವಿಧಾನ ಸಂವಿಧಾನಿಕ ಮೌಲ್ಯಗಳ ಕುರಿತು ದೊಡ್ಡ ದೊಡ್ಡ ಮಾತನಾಡಿದ ಬಿಜೆಪಿ ಜೆಡಿಎಸ್ ನವರು ಸ್ಪಷ್ಟವಾಗಿ ರಾಜ ಭವನವನ್ನು ದುರುಪಯೋಗಪಡಿಸಿಕೊಂಡು ಸಂವಿಧಾನದ ಕಗ್ಗೊಲೆ ಮಾಡಿದ್ದಾರೆ ಎಂದು ಗದಗ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ವಕ್ತಾರರು ಸಂಜಯ್ ದೊಡ್ಡಮನಿ ವಿರೋಧ ಪಕ್ಷಗಳ ನಡುವೆ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ರಾಜ್ಯಪಾಲರು 26/07/2024 ಕೊಟ್ಟಿದ್ದ ನೋಟಿಸ್ ಗೆ ವಿವರವಾದ ಉತ್ತರವನ್ನು ರಾಜ್ಯಪಾಲರ ಕಚೇರಿ ದಾಖಲಾತಿ ಸಮೇತ ಕಳಿಸಿಕೊಟ್ಟಿದ್ದರು 1/8/2024 ರಂದು ಸಂಪುಟ ಸಭೆ ನಡೆಸಿದ ಸರ್ಕಾರವು ರಾಜ್ಯಪಾಲರ ನೋಟಿಸ್ ದೋಷಪೂರಿತ ಹಾಗೂ ದ್ವೇಷ ಪಿತೂರಿ ಕಾರಕ ಎಂದು ಹೇಳಿ ತಿರಸ್ಕರಿಸಲಾಗಿತ್ತು ಅಲ್ಲದೆ ದಾಖಲೆಗಳ ಸಮೇತ ಸರ್ಕಾರ ಉತ್ತರ ಕೊಟ್ಟಿತ್ತು.
ಮುಡಾ ಪ್ರಕರಣದಲ್ಲಿ ಯಾವುದೇ ತಿರುಳಿಲ್ಲ ಎಂಬುದು ರಾಜಪಾಲರಿಗೂ ತಿಳಿದಿದೆ ಆದರು ಸಹ ಪ್ರಾಸಿಕ್ಯೂಷನ್ನಿಗೆ ಅನುಮತಿ ನೀಡಿರುವುದು ರಾಜ್ಯದ ಜನರಿಗೆ ಮಾಡಿರುವ ದ್ರೋಹವಾಗಿದೆ ಜನರಿಂದ ಆಯ್ಕೆಯಾದ ಸರ್ಕಾರವನ್ನು ಅಸ್ಥಿರಗೊಳಿಸಬೇಕೆಂದು ಜೆಡಿಎಸ್ ಹಾಗೂ ಬಿಜೆಪಿಯವರು ಅನೈತಿಕವಾದ ಆಟವನ್ನು ಆಡುತ್ತಿದ್ದಾರೆ ರಾಜ್ಯಪಾಲರು ತಮ್ಮ ಹುದ್ದೆಯ ಘನತೆ ಮತ್ತು ಸಂವಿಧಾನದ ಆಶಯವನ್ನು ಕೊಂದು ಹಾಕಿದ್ದಾರೆ ಅವರು ಒಂದು ಪಕ್ಷದ ಏಜೆಂಟ್ರುಗಳಂತೆ ವರ್ತಿಸಿದ್ದಾರೆ ಎಂಬುದು ಸಂಶಯಾತೀತವಾಗಿದೆ ಎಂದಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಜನರು ನಮ್ಮ ಮಾಲೀಕರೇ ಹೊರತು ಈ ದುಷ್ಟರು ನಮ್ಮ ಮಾಲೀಕರಲ್ಲ ಅವರನ್ನು ನಮ್ಮ ಶತ್ರುಗಳು ಹಾಗೂ ಸಮಸ್ತ ಶೋಷಿತ ಜನರ ಶತ್ರುಗಳು ಎಂದು ತೀರ್ಮಾನಿಸಿದ್ದೇವೆ ಈ ದುಷ್ಟರನ್ನು ನಾವು ರಾಜಕೀಯವಾಗಿಯೋ ಎದುರಿಸುತ್ತೇವೆ ಇದಕ್ಕೆ ಹೆದರುವ ಪ್ರಶ್ನೆಯಿಲ್ಲ ಎಂದು ಅವರು ತಿಳಿಸಿದ್ದಾರೆ.
ರಾಜ್ಯಪಾಲರು ಸಂವಿಧಾನದ ಮೌಲ್ಯಗಳಿಗೆ ಬದ್ಧರಾಗಿದ್ದರೆ ಕರ್ನಾಟಕ ಲೋಕಾಯುಕ್ತವು ಪ್ರಾಸಿಕ್ಯೂಷನ್ನ ಅನುಮತಿ ಕೇಳಿರುವ ಗಂಭೀರವಾದ ವಿಷಯದ ಕುರಿತು ಯಾಕೆ ಮೌನ ವಹಿಸಿದ್ದಾರೆ? ನೇರವಾಗಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಹಲವು ಬಿಜೆಪಿ ಹಾಗೂ ಜೆಡಿಎಸ್ ಮುಖಂಡರ ಕುರಿತಂತೆ ಯಾಕೆ ಅನುಮತಿ ನೀಡಿಲ್ಲ ಎಂದು ಸಂಜಯ್ ದೊಡ್ಡಮನಿ ಪ್ರಶ್ನಿಸುತ್ತಿದ್ದಾರೆ.
ವರದಿ : ಮುತ್ತು.