ಭಾರೀ ಮಳೆ : ಮನೆಗಳಿಗೆ ನುಗ್ಗಿದ ನೀರು,ಗದಗ-ರೋಣ ರಸ್ತೆ ತಡೆದು ಸ್ಥಳೀಯರು ಆಕ್ರೋಶ.
ಗದಗ:ಸತ್ಯಮಿಥ್ಯ(ಸ-22)
ಇಲ್ಲಿನ ಗದಗ ಬೆಟಗೇರಿ ಅವಳಿ ನಗರದಲ್ಲಿ ನಿನ್ನೆ ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿದಿದೆ.
ಭಾರೀ ಮಳೆಯಿಂದ ಬೆಟಗೇರಿಯ ಟರ್ನಲ್ ಪೇಟೆಯಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ರಸ್ತೆಗಳೆಲ್ಲಾ ಕೆರೆಯಂತೆ, ನೀರಿನಲ್ಲಿ ನಡೆದುಕೊಂಡು ಹೋಗುವ ಸ್ಥಿತಿ ಇತ್ತು.
ಭಾರಿ ಮಳೆಯಿಂದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ.ಟರ್ನಲ್ ಪೇಟೆಯ ಕೆಲವು ಕುಟುಂಬಸ್ಥರ ಜೀವನ ಅಸ್ತವ್ಯಸ್ತವಾಗಿದೆ. ಮನೆ ನೀರು ನುಗ್ಗಿದರಿಂದ ಮನೆಯಲ್ಲಿ ವಸ್ತುಗಳು ನೀರಿಗೆ ಆಹುತಿ ಆಗಿದೆ. ಗದಗ-ಬೆಟಗೇರಿ ನಗರಸಭೆ ವಿರುದ್ಧ ಸ್ಥಳೀಯರ ಆಕ್ರೋಶ ಹೊರ ಹಾಕಿದ್ದಾರೆ.
ಪ್ರತಿ ಭಾರಿ ಮಳೆ ಬಂದಾಗ, ಮನೆಗಳಿಗೆ ನೀರು ನುಗ್ಗುತ್ತದೆ. ಹೀಗಾಗಿ ಇಷ್ಟಾದರೂ ಸ್ಥಳಕ್ಕೆ ಬಾರದ ನಗರಸಭೆ ಸದಸ್ಯೆ ಶಕುಂತಲಾ ಅಕ್ಕಿ, ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ಹೊರ ಹಾಕಿದ್ದಾರೆ.
ಗದಗ-ರೋಣ ರಸ್ತೆ ತಡೆದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೇ ನೀರು ಮನೆಗಳ ಒಳಗಡೆ ಬಾರದಂತೆ ಕ್ರಮ ವಹಿಸಲು ಒತ್ತಾಯ ಮಾಡಲಾಗಿದೆ.ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರ ಗೋಳು ಕೇಳುತ್ತಾರೆಯೇ ಕಾದು ನೋಡೋಣ.
ವರದಿ : ಮುತ್ತು ಗೋಸಲ್.