
ರೈತರಿಗೆ ಗೊಬ್ಬರ ಕೊಡದ ರಾಜ್ಯ ಸರ್ಕಾರಕ್ಕೆ ನನ್ನ ದಿಕ್ಕಾರ – ಮುಕ್ತುಮಸಾಬ್ ಮುಧೋಳ್
ಗದಗ:ಸತ್ಯ ಮಿಥ್ಯ (ಜು-31)
ಇಂದು ಜಿಲ್ಲೆಯ ರೋಣ ಮತಕ್ಷೇತ್ರದ ಗಜೇಂದ್ರಗಡ ಪಟ್ಟಣ ದಲ್ಲಿ ರೈತರಿಗೆ ವಿತರಿಸುವ ಯೂರಿಯಾ ಗೊಬ್ಬರ ಕೊರತೆಯಾಗಿದೆ. ರೈತರು ಗೊಬ್ಬರದ ಅಂಡಿಗಳ ಮುಂದೆ ಹಗಲು ರಾತ್ರಿ ಎನ್ನದೆ ಸರದಿ ಸಾಲಲ್ಲಿ ಕಾಯುವ ಪರಿಸ್ಥಿತಿ ನಿರ್ಮಾಣ ಮಾಡಿದ ಈ ರಾಜ್ಯ ಸರಕಾರ. ರೈತರಿಗೆ ನಿಗದಿತ ಸಮಯಕ್ಕೆ ಗೊಬ್ಬರ ಕೊಡದೆ ಇರೋ ಆಡಳಿತ ನಡೆಸುವ ಕಾಂಗ್ರೆಸ್ ಸರಕಾರಕ್ಕೆ ನನ್ನ ಧಿಕ್ಕಾರ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರೈತರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಬಹಳಷ್ಟು ತೊಂದರೆಯಾಗಿದೆ ಎಂದು ಗದಗ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮುಕ್ತುಮಸಾಬ್ ಮುಧೋಳ್ ನುಡಿದರು.
ಗೊಬ್ಬರಕ್ಕಾಗಿ ಗಜೇಂದ್ರಗಡದಲ್ಲಿ ಸರತಿ ಸಾಲಿನಲ್ಲಿ ನಿಂತ ರೈತರು.
ರಾಜ್ಯದಲ್ಲಿ ಈ ಪರಿಸ್ಥಿತಿ ಮುಂದುವರೆದರೆ ಉಗ್ರ ಹೋರಾಟವನ್ನು ಜೆಡಿಎಸ್ ಪಕ್ಷದಿಂದ ಮಾಡಲಾಗುವುದು. ಈ ಮೊದಲು ಜೆಡಿಎಸ್ ಮತ್ತು ಬಿಜೆಪಿ ಸಮ್ಮಿಶ್ರ ಸರಕಾರ ದ ಅವಧಿಯಲ್ಲಿ. ಇಂತಹ ಸಮಸ್ಯೆ ಆಗ್ದೇ ಇರೋ ಹಾಗೆ ವ್ಯವಸ್ಥೆ ಮಾಡಿದ್ದೆವು. ಈ ಸರಕಾರ ಬಿಟ್ಟಿ ಭಾಗ್ಯಗಳನ್ನು ಕೊಟ್ಟು. ಭಾಗ್ಯಗಳಿಗೆ ದುಡ್ಡು ಹರಣ ಮಾಡಿ. ಯೋಜನೆಗಳಿಗೆ ಕೇಂದ್ರ ಸರಕಾರ ದುಡ್ಡು ಕೊಟ್ಟಿಲ್ಲ ಸರಿಯಾಗಿ ಗೊಬ್ಬರ ಕೊಡುತ್ತಿಲ್ಲ, ನಮ್ಮ ಪಾಲಿನ ಜಿಎಸ್ಟಿ ಕೊಡತಿಲ್ಲ ಅಂತ ಕುಂಟ ನೆಪ ಹೇಳುವುದನ್ನು ಬಿಡಿ ಕೇಂದ್ರ ಸರಕಾರ ನಮ್ಮ ರಾಜ್ಯಕ್ಕೆ ಕೊಡುವ ಅನುದಾನ ಕೊಡ್ತಾ ಇದೆ. ದಯವಿಟ್ಟು ಜನ ಸಾಮಾನ್ಯರಿಗೆ ರೈತರಿಗೆ ವರ್ತಕರಿಗೆ ವ್ಯಾಪಾರ ಮಾಡೋರಿಗೆ. ತೊಂದರೆ ಕೊಡುವುದನ್ನು ನಿಲ್ಲಿಸಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಸುರೇಶ.ಬಿ.