ಶಾಸಕ,ಶ್ರೀಗಳ ನಡುವೆ ಹೊಂದಾಣಿಕೆಯಾದರೆ ಸಮಾಜಕ್ಕೆ ಹಿತ ಇಲ್ಲದಿದ್ದರೆ ಪರ್ಯಾಯ ವ್ಯವಸ್ಥೆಗೆ ಬದ್ದ : ಸಿ.ಸಿ. ಪಾಟೀಲ.

ಶಾಸಕ,ಶ್ರೀಗಳ ನಡುವೆ ಹೊಂದಾಣಿಕೆಯಾದರೆ ಸಮಾಜಕ್ಕೆ ಹಿತ ಇಲ್ಲದಿದ್ದರೆ ಪರ್ಯಾಯ ವ್ಯವಸ್ಥೆಗೆ ಬದ್ದ : ಸಿ.ಸಿ. ಪಾಟೀಲ.
ನರಗುಂದ :ಸತ್ಯಮಿಥ್ಯ ( ಜು-22)
ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ಜಯ ಮೃತ್ಯುಂಜಯ ಇಬ್ಬರು ಒಂದು ಹೆಜ್ಜೆ ಹಿಂದೆ ಸರಿಯುವ ಮೂಲಕ ಸಮಾಜದ ಹಿತ ಕಾಪಾಡಬೇಕು ಇದರಿಂದ ಸಮಾಜಕ್ಕೆ ಒಳ್ಳೆಯದಾಗುತ್ತದೆ ಎಂದು ಶಾಸಕ ಸಿ.ಸಿ.ಪಾಟೀಲ ನಿನ್ನೆ ನರಗುಂದದಲ್ಲಿ ಹೇಳಿದರು.
ಈಗ ನಡೆಯುತ್ತಿರುವ ಘಟನೆಗಳಿಂದ ಶ್ರೀಗಳಿಗೆ ಸ್ವಲ್ಪ ನೋವಾಗಿದೆ.ಸಂಧಾನದಲ್ಲೂ ಪರಿಹಾರ ಕಾಣದಿದ್ದಲ್ಲಿ ಜಯಮೃತ್ಯುಂಜಯ ಶ್ರೀಗಳಿಗೆ ಮೂಲ ಪೀಠದಲ್ಲಿ ತೊಂದರೆಯಾದರೆ ಅವರು ಇಷ್ಟಪಟ್ಟ ಸ್ಥಳದಲ್ಲೇ ಶಾಖಾ ಪೀಠ ನಿರ್ಮಿಸಿ ಕೊಡಲಾಗುವುದು. ಅವರಿಗೆ ನಮ್ಮ ಸಮಾಜದ ಎಲ್ಲ ಶಾಸಕರು, ಹಿರಿಯರು ಬೆಂಗಾವಲಾಗಿ ನಿಲ್ಲುತ್ತೇವೆ’ ಎಂದು ಸಿ ಸಿ ಪಿ ಹೇಳಿದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಯಮೃತ್ಯುಂಜಯ ಮಹಾಸ್ವಾಮಿಗಳ ಜೊತೆ ವಿಜಯಾನಂದ ಕಾಶಪ್ಪನವರ 750 ಕಿಲೋಮೀಟರ್ ಪಾದಯಾತ್ರೆ ಮಾಡಿದಾಗ ನಾನು ಸರ್ಕಾರ ಮತ್ತು ಸಮಾಜದ ಕೊಂಡಿಯಾಗಿ ಕೆಲಸ ಮಾಡಿದ್ದೇನೆ. ಆದರೆ
‘ಪಂಚಮಸಾಲಿ ಶ್ರೀಗಳು ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ ನಡುವೆ ಯಾವ ವಿಚಾರಕ್ಕೆ ಅಸಮಾಧಾನ ಉಂಟಾಗಿದೆಯೋ ಗೊತ್ತಿಲ್ಲ. ಇದೆ ವಿಜಯಾನಂದ ಕಾಶಪ್ಪನವರ 2ಎ ಮೀಸಲಾತಿಯನ್ನು ನಮ್ಮ ಸರ್ಕಾರ ಬಂದರೆ 24 ಗಂಟೆಯೊಳಗಾಗಿ ಮಾಡುವುದಾಗಿ ಹೇಳಿದ್ದರು. ಆ ಮಾತು ಮರೆತಿದ್ದಾರೆ’ ಎಂದು ದೂರಿದರು.
ವರದಿ : ಮುತ್ತು ಗೋಸಲ