ಜಿಲ್ಲಾ ಸುದ್ದಿ

ಭಾರತದ ಹೆಮ್ಮೆಯ ಪುತ್ರ ಗಗನಯಾನಿ ಶ್ರೀ ಶುಭಾಂಶು ಶುಕ್ಲಾ – ಶ್ರೀ ಎಸ್.ವಿ. ಬಿಂದಗಿ.

Share News

ಭಾರತದ ಹೆಮ್ಮೆಯ ಪುತ್ರ ಗಗನಯಾನಿ ಶ್ರೀ ಶುಭಾಂಶು ಶುಕ್ಲಾ – ಶ್ರೀ ಎಸ್.ವಿ. ಬಿಂದಗಿ.

ವಿದ್ಯಾರ್ಥಿಗಳಿಗೆ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ. 

ಗದಗ: ಸತ್ಯಮಿಥ್ಯ (ಜು -19)

ನಗರದ ಶತಮಾನ ಪೂರೈಸಿದ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿ ಶಿಕ್ಷಣ ಸಂಸ್ಥೆಯಲ್ಲಿ ಗಗನಯಾನಿ ಶ್ರೀ ಶುಭಾಂಶು ಶುಕ್ಲಾ ರವರ ಬಾಹ್ಯಾಕಾಶ ಸಂಶೋಧನಾ ಯಶಸ್ವಿ ಪ್ರಯಾಣ ಕುರಿತು ವಿದ್ಯಾದಾನ ಸಮಿತಿಯ ಹಳೆ ವಿದ್ಯಾರ್ಥಿ ಹಾಗೂ ಇಸ್ರೋದ ವಿಶ್ರಾಂತ ವಿಜ್ಞಾನಿಯಾದ ಶ್ರೀ ಸುಧೀಂದ್ರ ಬಿಂದಗಿ ರವರು ವಿದ್ಯಾದಾನ ಸಮಿತಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಪನ್ಯಾಸ ಹಾಗೂ ಸಂವಾದ ನಡೆಸಿ, ಇಂದಿನ ವಿದ್ಯಾರ್ಥಿ ನಾಳಿನ ಭವಿಷ್ಯ ಭಾರತದ ವಿಜ್ಞಾನಿಯಾಗಬೇಕು. ಜಗತ್ತಿನ ಬಾಹ್ಯಾಕಾಶ ಸಂಶೋಧನೆಯನ್ನು ಕುರಿತು ಕನಸು ಕಾಣಬೇಕು. ನಮ್ಮ ಭಾರತದ ಸಾಧನೆ ಉಳಿದ ರಾಷ್ಟ್ರಗಳಿಗೆ ಮಾದರಿಯಾಗಬೇಕು. ಇದಕ್ಕೆ ಸಾಕ್ಷಿಯಂತೆ ಭಾರತದ ಹೆಮ್ಮೆಯ ಪುತ್ರ ಗಗನಯಾನಿ ಶ್ರೀ ಶುಭಾಂಶು ಶುಕ್ಲಾ ರವರು ನಮಗಷ್ಟೇ ಅಲ್ಲದೇ ಈಡೀ ಜಗತ್ತಿಗೆ ಆದರ್ಶಪ್ರಾಯ ಎಂದು ಮಾತನಾಡಿದರು. ಜೊತೆಗೆ ಪ್ರೌಢಶಾಲಾ ವಿದ್ಯಾರ್ಥಿಗಳೊಂದಿಗೆ ಬಾಹ್ಯಾಕಾಶ ಸಂಶೋಧನಾ ಯಶಸ್ವಿ ಪ್ರಯಾಣದ ಕುರಿತು ಸಂವಾದ ನಡೆಸಿ, ವಿದ್ಯಾರ್ಥಿಗಳು ಕೇಳಿದ ಕುತೂಹಲಕಾರಿ ಪ್ರಶ್ನೆಗಳಾದ ಗಗನಯಾನ ಹೇಗೆ? ಗಗನಯಾತ್ರಿಗಳ ಪ್ರಯೋಗಗಳ ಮೂಲಕ ಸಂಶೋಧನಾ ಕಾರ್ಯಾಚರಣೆ ಏಕೆ? ಗಗನಯಾನಿಗಳ ಬಾಹ್ಯಾಕಾಶದಲ್ಲಿ ಆರೋಗ್ಯದ ಸ್ಥಿತಿಗತಿ ಹೇಗೆ? ತರಬೇತಿಯ ರೂಪುರೇಷೆಗಳು ಹೇಗೆ? ಈ ಎಲ್ಲಾ ಪ್ರಶ್ನೆಗಳಿಗೆ ಸರಳವಾಗಿ ಮಕ್ಕಳ ಮನಮುಟ್ಟುವಂತೆ ವಿವರಣೆಯೊಂದಿಗೆ ಮಾಹಿತಿ ನೀಡಿದರು.

ವಿದ್ಯಾದಾನ ಸಮಿತಿಯ ಕ್ರಿಯಾಶೀಲ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ಹುಯಿಲಗೋಳ ರವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ವಿಜ್ಞಾನಿ ಶ್ರೀ ಸುಧೀಂದ್ರ ಬಿಂದಗಿ ರವರ ಹಾಗೂ ತಮ್ಮ ನಡುವಿನ ಬಾಲ್ಯ ಜೀವನದ ನಿಕಟ ನಂಟನ್ನು ಕುರಿತು ಮಾತನಾಡಿ, ಬಾಲ್ಯದಿಂದಲೇ ಕ್ರಿಯಾಶೀಲ ಸುಧೀಂದ್ರ ಅವರು ತಮ್ಮ ಸತತ ಪ್ರಯತ್ನದಿಂದ ಅಧ್ಯಯನಶೀಲತೆಯಿಂದ ಇಸ್ರೋದ ವಿಜ್ಞಾನಿಯಾಗಿ ಉನ್ನತ ಸಾಧನೆ ಮಾಡುವುದಲ್ಲದೆ ಚಂದ್ರಯಾನ 3 ಈ ಸಾಧನೆಯ ಜೊತೆಗೆ ಇಂದು ಇವರು ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಇಂದು ನಿಮಗೆ ಗಗನಯಾನಿ ಶುಭಾಂಶು ಶುಕ್ಲಾ ರವರ ಸಾಧನೆಯ ಕುರಿತು ನೀಡುವ ಉಪನ್ಯಾಸ ಕೇಳುವ ನಾವು ನೀವು ಸುದೈವಿಗಳು ಎಂದರು.

ಪ್ರಾರಂಭದಲ್ಲಿ ಕಾರ್ಯಕ್ರಮವನ್ನು ಕ್ಲಾಸಿಕ್ ಸಿಬಿಎಸ್ಇ ಪ್ರೌಢ ಶಾಲೆಯ ಪ್ರಾಚಾರ್ಯರಾದ ಶ್ರೀ ಎಂ. ಆರ್. ಡೊಳ್ಳಿನ ರವರು ಎಲ್ಲರನ್ನೂ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಕೊನೆಯಲ್ಲಿ ವಿದ್ಯಾದಾನ ಸಮಿತಿಯ ಸಿಇಓ ರವರಾದ ಶ್ರೀ ಪಿ. ಎಚ್. ಕಡಿವಾಲ ರವರು ಎಲ್ಲರನ್ನು ವಂದಿಸಿದರು.

ಈ ಸಂದರ್ಭದಲ್ಲಿ ಇಸ್ರೋದ ವಿಶ್ರಾಂತ ವಿಜ್ಞಾನಿ ಶ್ರೀ ಸುಧೀಂದ್ರ ಬಿಂದಗಿ, ವಿದ್ಯಾದಾನ ಸಮಿತಿಯ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ಹುಯಿಲಗೋಳ, ಶಾಲೆಯ ಶೈಕ್ಷಣಿಕ ಮಾರ್ಗದರ್ಶಕರಾದ ಶ್ರೀ ಪ್ರತೀಕ ಹುಯಿಲಗೋಳ, ಸಿಇಒ ಶ್ರೀ ಪಿ. ಎಚ್. ಕಡಿವಾಲ, ಪ್ರಾಚಾರ್ಯರಾದ ಶ್ರೀ ಎಂ. ಆರ್. ಡೊಳ್ಳಿನ, ಮುಖ್ಯೋಪಾಧ್ಯಾಯರಾದ ಶ್ರೀಮತಿ ಎಸ್. ವಿ. ಬಂಡಿ, ವಿಜ್ಞಾನ ವಿಷಯದ ಹಿರಿಯ ಶಿಕ್ಷಕರಾದ ಶ್ರೀ ಎಸ್. ಎಸ್. ಗಂಜಿ, ಶ್ರೀ ಎಂ. ವಿ. ವಡವಿ, ಉಪ ಪ್ರಾಚಾರ್ಯರಾದ ಶ್ರೀ ಅಕ್ಷಯ್. ಜಿ, ಶ್ರೀಮತಿ ಎಂ. ಎಲ್. ಬೆರಗೇರಿ, ಶ್ರೀ ಪಂಪಣ್ಣ ರೊಡ್ಡಾನವರ, ವಿದ್ಯಾದಾನ ಸಮಿತಿಯ ಬಾಲಕರ ಪ್ರೌಢಶಾಲೆಯ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು, ಶ್ರೀಮತಿ ಎಸ್. ಪಿ. ಎಚ್. ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿಯವರು, ವಿ.ಡಿ.ಎಸ್ ಕ್ಲಾಸಿಕ್ ಆಂಗ್ಲ ಮಾಧ್ಯಮ ಸಿಬಿಎಸ್ಇ ಶಾಲೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

ವರದಿ : ಮುತ್ತು ಗೋಸಲ 


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!